ಫಾರೂಕ್, ಒಮರ್ ಭೇಟಿಗೆ ಅವಕಾಶ
Team Udayavani, Oct 6, 2019, 5:49 AM IST
ಶ್ರೀನಗರ: ಸಂವಿಧಾನದ 370ನೇ ವಿಧಿ ರದ್ದು ಬಳಿಕ ಗೃಹಬಂಧನದಲ್ಲಿರುವ ನ್ಯಾಷನಲ್ ಕಾನ್ಫರೆನ್ಸ್(ಎನ್‌ಸಿ) ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹಾಗೂ ಉಪಾಧ್ಯಕ್ಷ ಒಮರ್ ಅಬ್ದುಲ್ಲಾರನ್ನು ಭೇಟಿಯಾಗಲು ಪಕ್ಷದ ನಿಯೋಗಕ್ಕೆ ಜಮ್ಮು-ಕಾಶ್ಮೀರ ಆಡಳಿತ ಒಪ್ಪಿಗೆ ನೀಡಿದೆ. ಅದರಂತೆ, ಎನ್‌ಸಿ ಪ್ರಾಂತೀಯ ಅಧ್ಯಕ್ಷ ದೇವೇಂದರ್ ಸಿಂಗ್ ರಾಣಾ ನೇತೃತ್ವದಲ್ಲಿ ಪಕ್ಷದ ಮಾಜಿ ಶಾಸಕರುಳ್ಳ ನಿಯೋಗವು ಜಮ್ಮುವಿನಿಂದ ರವಿವಾರ ಬೆಳಗ್ಗೆಯೇ ವಿಮಾನದ ಮೂಲಕ ಶ್ರೀನಗರಕ್ಕೆ ತೆರಳಿ, ಪಕ್ಷದ ವರಿಷ್ಠರನ್ನು ಭೇಟಿಯಾಗಲಿದೆ.ಇದಕ್ಕೆ ಸಂಬಂಧಿಸಿದಂತೆ ರಾಣಾ ಅವರು ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರಿಂದಲೇ ಅನುಮತಿ ಪಡೆದಿದ್ದಾರೆ. ಪ್ರಸ್ತುತ 81 ವರ್ಷದ ಫಾರೂಕ್ ಅಬ್ದುಲ್ಲಾ ತಮ್ಮ ಶ್ರೀನಗರದ ನಿವಾಸದಲ್ಲಿ ಗೃಹಬಂ ಧನದಲ್ಲಿದ್ದರೆ, ಒಮರ್‌ರನ್ನು ರಾಜ್ಯ ಅತಿಥಿ ಗೃಹದಲ್ಲಿ ವಶದಲ್ಲಿರಿಸಲಾಗಿದೆ.
ಶೀಘ್ರ ಬಿಡುಗಡೆ: ಈ ನಡುವೆ, ಕಣಿವೆ ರಾಜ್ಯದಲ್ಲಿ ಗೃಹಬಂಧನದಲ್ಲಿ ಇರಿಸಲಾಗಿ ರುವ ನಾಯಕರನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಬಿಜೆಪಿ ಹಿರಿಯ ನಾಯಕ ರಾಮ್‌ಮಾಧವ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.