ಮನ್ ಕೀ ಬಾತ್: ಶ್ವಾನದಳದ ವಿದಾ ಹಾಗೂ ಸೋಫಿಯ ಸೇವೆಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ !
Team Udayavani, Aug 30, 2020, 2:06 PM IST
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ 68 ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ, ದೇಶದ ವಿವಿಧ ಭದ್ರತಾ ಕಾರ್ಯಾಚರಣೆಗಳಲ್ಲಿ ಮಹತ್ವದ ಪಾತ್ರವಹಿಸಿದ ಶ್ವಾನಗಳ ಬಗ್ಗೆ ಕೊಂಡಾಡಿದ್ದಾರೆ.
ವಿಶೇಷವಾಗಿ ಈ ತಿಂಗಳ ಆರಂಭದಲ್ಲಿ 74ನೇ ಸ್ವಾತಂತ್ರ್ಯ ದಿನದಂದು ಸೇನಾ ಮುಖ್ಯಸ್ಥರಿಂದ ಗೌರವಕ್ಕೆ ಪಾತ್ರವಾದ ಭಾರತೀಯ ಸೇನೆಯ ಶ್ವಾನಗಳಾದ ವಿದಾ ಮತ್ತು ಸೋಫಿ ಸೇವೆಯನ್ನು ಅವರು ಶ್ಲಾಘಿಸಿದ್ದಾರೆ.
ಶ್ವಾನ ದಳದ ‘ವಿದಾ’ ಐದು ಗಣಿಗಳನ್ನು ಹಾಗೂ ಭೂಗರ್ಭದಲ್ಲಿ ಹೂಳಲಾಗಿದ್ದ ಗ್ರೆನೇಡ್ ಒಂದನ್ನು ಪತ್ತೆಹಚ್ಚಿ ಭಾರೀ ಪ್ರಮಾಣದ ಅನಾಹುತವೊಂದನ್ನು ತಪ್ಪಿಸಿತ್ತು.
ಮತ್ತೊಂದೆಡೆ, ಬಾಂಬ್ ನಿಷ್ಕ್ರೀಯ ದಳದ ‘ಸೊಫಿ’ ಶ್ವಾನವೂ, ಐಇಡಿ ತಯಾರಿಸಲು ಬಳಸಬಹುದಾದ ಇನಿಶಿಯೇಟರ್/ ಆಕ್ಸಿಲರೆಂಟ್ ಇರುವಿಕೆಯನ್ನು ಪತ್ತೆಹಚ್ಚಿ ಹಲವರ ಜೀವವನ್ನು ಉಳಿಸಿತ್ತು.
ಇದೀಗ ಪ್ರಧಾನಿ ಮೋದಿ ಈ ಶ್ವಾನಗಳ ಸೇವೆಯನ್ನು ಶ್ಲಾಘಿಸಿದ್ದಾರೆ. ಮಾತ್ರವಲ್ಲದೆ ಸಾಕುಪ್ರಾಣಿಗಳನ್ನು ದತ್ತು ಪಡೆಯಲು ಯೋಜಿಸುವಾಗ ಸ್ಥಳೀಯ ತಳಿಗಳ ನಾಯಿಗಳನ್ನು ಮನೆಗೆ ತರಬೇಕೆಂದು ಜನರಿಗೆ ಮನವಿ ಮಾಡಿದ್ದಾರೆ.
“ದಿ ಸೈಲೆಂಟ್ ವಾರಿಯರ್ಸ್” ಎಂದು ಪ್ರೀತಿಯಿಂದ ಕರೆಯಲ್ಪಡುವ ಸೈನ್ಯದ ಶ್ವಾನ ಘಟಕವು ಭದ್ರತಾ ಪಡೆಗಳಿಗೆ ಒಂದು ಆಸ್ತಿ ಎಂದು ಮತ್ತೆ ಮತ್ತೆ ಸಾಬೀತಾಗುತ್ತಿದೆ ಎಂದು ಪ್ರಧಾನಿ ನೆನಪಿಸಿಕೊಂಡಿದ್ದಾರೆ.
ಸೇನೆಯು ತನ್ನ ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೆಚ್ಚಿಸಲು, ಕಳೆದ ವರ್ಷ ಡಿಸೆಂಬರ್‌ನಲ್ಲಿ ಬುಲೆಟ್ ಫ್ರೂಫ್ ಜಾಕೆಟ್‌ನೊಂದಿಗೆ ಸಂಯೋಜಿಸಲ್ಪಟ್ಟ ಆಡಿಯೊ-ವಿಡಿಯೋ ಕಣ್ಗಾವಲು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿತ್ತು, ಇದನ್ನು ಸೈನ್ಯದ ಶ್ವಾನದಳಗಳ ಮೇಲೆ ರಹಸ್ಯವಾಗಿ ಜೋಡಿಸಬಹುದಾಗಿದ್ದು, ಶತ್ರುಗಳ ಸ್ಥಳ ಮತ್ತು ಬಲದ ಬಗ್ಗೆ ದೂರದಿಂದಲೇ ಮಾಹಿತಿಯನ್ನು ಪಡೆಯಬಹುದು ಎಂದು ಇದೇ ವೇಳೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Adani ಬಂಧಿಸಿ, ಸೆಬಿ ಮುಖ್ಯಸ್ಥೆ ವಜಾ ಮಾಡಿ: ರಾಹುಲ್ ಪಟ್ಟು
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.