ಇದು ಮೇಘಾಲಯ ಕಾಲ!
Team Udayavani, Jul 20, 2018, 6:00 AM IST
ನವದೆಹಲಿ: ನಾವೀಗ ಮೇಘಾಲಯ ಕಾಲದಲ್ಲಿ ವಾಸಿಸುತ್ತಿದ್ದೇವೆ. ನಿಜ. ಭೂಗರ್ಭಶಾಸ್ತ್ರಜ್ಞರು ಇದೀಗ ಭೂಮಿಯ ಭೌಗೋಳಿಕ ಇತಿಹಾಸದಲ್ಲಿ ಹೊಸ ಹಂತವನ್ನು ಗುರುತಿಸಿದ್ದು, ಇದನ್ನು ಮೇಘಾಲಯನ್ ಏಜ್ ಎಂದು ಕರೆದಿದ್ದಾರೆ. 4200 ವರ್ಷಗಳ ಹಿಂದೆ ಭೂಮಿಯ ವಾತಾವರಣ ಬದಲಾಗಿದ್ದನ್ನು ಗುರುತಿಸಲು ಮೇಘಾ ಲಯವೇ ನೆರವಾಗಿತ್ತು. ಹೀಗಾಗಿ ಈ ಕಾಲವನ್ನು ಮೇಘಾಲಯ ಕಾಲ ಎಂದೇ ಕರೆಯಲಾಗಿದೆ. 4200 ವರ್ಷಗಳ ಹಿಂದೆ ಶುರುವಾದ ಈ ಕಾಲ ಇಂದಿಗೂ ಮುಂದುವರಿದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಈಜಿಪ್ಟ್ನಿಂದ ಚೀನಾವರೆಗೂ ನಾಗರಿಕತೆ ಯನ್ನೇ ಅಳಿಸಿಹಾಕಿದ ಭಾರೀ ಬರದಿಂದಾಗಿ ಮೇಘಾಲಯ ಕಾಲ ಆರಂಭ ವಾಯಿತು. ಈ ಹಿಂದೆ ಹಾಲೋಸೀನ್ ಎಪೋಚ್ ಎಂಬ ಕಾಲವಿತ್ತು. ಇದು 11,700 ವರ್ಷಗಳ ಅವಧಿಯದ್ದಾಗಿತ್ತು. ಮೇಘಾಲಯ ಕಾಲವು ಅತ್ಯಂತ ಮಹತ್ವದ್ದಾಗಿದ್ದು, ವಿಶಿಷ್ಟವೂ ಆಗಿದೆ. ಇಡೀ ಭೂಪ್ರದೇಶದಲ್ಲಿ ಕೃಷಿ ಆಧರಿತ ಸಮಾಜ ಬರದಿಂದಾಗಿ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡಿದವು. ಮೇಘಾಲಯವೂ ಸೇರಿದಂತೆ ವಿಶ್ವದ ಏಳೂ ಖಂಡಗಳಲ್ಲಿ ಇದಕ್ಕೆ ಪೂರಕವಾದ ಸಾಕ್ಷಿ ಮಣ್ಣಿನಲ್ಲಿ ದೊರೆತಿದೆ. ಈ ಬರ ಸುಮಾರು 200 ವರ್ಷಗಳವರೆಗೆ ಇತ್ತು. ಈಜಿಪ್ಟ್, ಗ್ರೀಸ್, ಸಿರಿಯಾ, ಪ್ಯಾಲೆಸ್ತೀನ್, ಮೆಸಪೊಟೇಮಿಯಾದಿಂದ ಜನರು ವಲಸೆ ಹೋದರು ಎಂದು ಅಂತಾರಾಷ್ಟ್ರೀಯ ಭೂಗರ್ಭಶಾಸ್ತ್ರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸ್ಟಾನ್ಲ ಫಿನ್ನೆ ಹೇಳಿದ್ದಾರೆ.
ಈಗಿನ ಕಾಲವನ್ನು ಮೇಘಾಲಯನ್ ಏಜ್ ಎಂದು ಕರೆದ ಭೂಗರ್ಭಶಾಸ್ತ್ರಜ್ಞರು
ಬರಗಾಲದಿಂದ ಭೂ ಹವಾಮಾನ ಬದಲಾಗಿದ್ದೇ ಕಾರಣ
ಅದಕ್ಕೂ ಮೊದಲು ಇದ್ದಿದ್ದು ಹಾಲೋಸೀನ್ ಎಪೋಚ್ ಎಂಬ ಕಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುತ್ತಾ.. ಕೇಜ್ರಿವಾಲ್ ಹೇಳಿದ್ದೇನು?
ED Summons: ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಇಡಿ ಸಮನ್ಸ್
Telangana ಪೊಲೀಸರ ಎನ್* ಕೌಂಟರ್ – ಕಮಾಂಡರ್ ಸೇರಿ ಏಳು ನಕ್ಸಲೀಯರ ಹ*ತ್ಯೆ
Noida: ಹಾಲಿಡೇ ಪ್ಯಾಕೇಜ್ ದಂಧೆಯ ನಕಲಿ ಕಾಲ್ ಸೆಂಟರ್‌ಗೆ ಪೊಲೀಸ್ ದಾಳಿ; 32 ಜನರ ಬಂಧನ
Digital Arrest; ತನಿಖೆ ನೆಪದಲ್ಲಿ ಯುವತಿಯನ್ನು ವಿವ*ಸ್ತ್ರಗೊಳಿಸಿ 1.7 ಲಕ್ಷ ರೂ. ವಂಚನೆ!
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.