ಮಾಲಿನ್ಯ ಮುಕ್ತ ಆರಾಮದಾಯಕ ದೂರ ಪ್ರಯಾಣ ಈಗ ನನಸು…
ಪುಣೆ ಮತ್ತು ಮುಂಬೈ ನಡುವೆ ಎಲೆಕ್ಟ್ರಿಕ್ ಬಸ್ ಸಂಚಾರ
Team Udayavani, Oct 13, 2021, 10:23 PM IST
ಪುಣೆ: ದೇಶದ ಪ್ರಮುಖ ಎಲೆಕ್ಟ್ರಿಕ್ ಬಸ್ ಸಂಸ್ಥೆ ಮತ್ತು ಎಂಇಐಎಲ್‌ನ ಅಂಗ ಸಂಸ್ಥೆ ಈವಿ ಟ್ರಾನ್ಸ್ ಪ್ರೈವೇಟ್ ಲಿಮಿಟೆಡ್ ದೇಶದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ “ಪುರಿ ಬಸ್” ಹೆಸರಿನಲ್ಲಿ ಮುಂಬೈ ಮತ್ತು ಪುಣೆ ನಡುವೆ ಅಂತರ ನಗರ ನಡುವಿನ ಎಲೆಕ್ಟ್ರಿಕ್ ಬಸ್ ಸೇವೆಗಳನ್ನು ಆರಂಭಿಸಿದೆ.
ಇದರಿಂದ ಶಬ್ದ ಮತ್ತು ಪರಿಸರ ಮಾಲಿನ್ಯ ಮುಕ್ತ ಜತೆಗೆ ಆರಾಮದಾಯಕ ದೂರದ ಪ್ರಯಾಣ ನನಸಾಗಿದ್ದು, ವಿಜಯದಶಮಿಯಂತಹ ಸುದಿನದಿಂದ ಈ ಸೇವೆ ಸಾರ್ವಜನಿಕರಿಗೆ ಲಭ್ಯವಾಗಲಿದೆ.
“ಪುಣೆಯಲ್ಲಿ ಅಂತರ್ ನಗರ ಎಲೆಕ್ಟ್ರಿಕ್ ಬಸ್ ಸೇವೆ ಆರಂಭಿಸುತ್ತಿರುವುದು ಸಂತಸ ತಂದಿದೆ” ಎಂದು ಇದೇ ವೇಳೆ ಪ್ರತಿಕ್ರಿಯಿಸಿದ ಈವಿ ಟ್ರಾನ್ಸ್ನ ಕಾರ್ಯಕಾರಿ ವ್ಯವಸ್ಥಾಪಕ ಸಂದೀಪ್ ರೈಜಾದ, “ಪುರಿ ಬಸ್‌ಗಳು ಒಮ್ಮೆಯ ಚಾರ್ಜಿಂಗ್ ನಂತರ ಮಾಲಿನ್ಯ ರಹಿತವಾಗಿ 350 ಕಿ.ಮೀ. ಸಂಚರಿಸಲಿದ್ದು, ಇದರಿಂದ ಅಂತರ್ ನಗರ ಸಂಚಾರ ಸೇವೆ ಸಾಧ್ಯವಾಗಿದೆ. ಇದರಿಂದ ಸಾಕಷ್ಟು ಉಳಿತಾಯ ಆಗಲಿದೆ” ಎಂದು ತಿಳಿಸಿದರು.
12 ಮೀಟರ್ ಉದ್ದದ ಪುರಿ ಬಸ್:
ಈ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಕೋಚ್ ಬಸ್‌ಗಳು 45 ಮಂದಿ ಸಾರ್ವಜನಿಕರು ಮತ್ತು ಓರ್ವ ಚಾಲಕ ಮತ್ತೋರ್ವ ಸಹ ಚಾಲಕನನ್ನು ಹೊತ್ತೋಯ್ಯುವ ಸಾಮರ್ಥ್ಯ ಹೊಂದಿದ್ದು, ದೂರದ ಪ್ರಯಾಣ ಆರಾಮದಾಯಕವಾಗಿಸುವ ಸಲುವಾಗಿ ಈ ಬಸ್‌ಗಳು ಹವಾನಿಯಂತ್ರಣ ವ್ಯವಸ್ಥೆ ಜತೆಗೆ ಪುಷ್ ಬ್ಯಾಕ್ ಆಸನಗಳನ್ನು ಹೊಂದಿದ್ದು ಆ ಮೂಲಕ ಪ್ರಯಾಣವನ್ನು ಸುಖಕರವಾಗಿಸಲಿವೆ.
ಹೈಟೆಕ್ ತಂತ್ರಜ್ಞಾನ ಅಳವಡಿಕೆ:
ಇಂದಿನ ಅಗತ್ಯತೆಗೆ ತಕ್ಕಂತೆ ವಿನ್ಯಾಸಗೊಂಡಿರುವ ಈವೀ ಟ್ರಾನ್ಸ್ ಎಲೆಕ್ಟ್ರಿಕ್ ಕೋಚ್ ಬಸ್‌ಗಳಲ್ಲಿ ಟೆಲಿವಿಷನ್ ಮತ್ತು ಮಾಹಿತಿ ವ್ಯವಸ್ಥೆ ಇದ್ದು, ಜತೆಗೆ ಪ್ರತಿ ಅಸನದಲ್ಲಿ ಯುಎಸ್‌ಬಿ ಎಲೆಕ್ಟ್ರಿಕಲ್ ಚಾರ್ಜಿಂಗ್‌ಗೆ ಅವಕಾಶ ಮಾಡಿಕೊಡಲಾಗಿದೆ. ಐದು ಕ್ಯೂಬಿಕ್ ಮೀಟರ್‌ನಷ್ಟು ಸರಂಜಾಮು ಇರಿಸಿಕೊಳ್ಳಲು ಸ್ಥಳಾವಕಾಶ ಒದಗಿಸಲಾಗಿದೆ.
ಇದನ್ನೂ ಓದಿ:500 ಕೆ.ಜಿ.ಚಿನ್ನ ಈಗಲೇ ಕರಗಿಸಿದ್ದೇವೆ: ಮದ್ರಾಸ್ ಹೈಕೋರ್ಟ್‌ಗೆ ತಮಿಳುನಾಡು ಸರ್ಕಾರ ಮಾಹಿತಿ
ಅಗ್ಗದ ಪ್ರಯಾಣ:
ಪ್ರಸ್ತುತ ದೂರದ ಪ್ರಯಾಣಕ್ಕೆ ಬಳಕೆಯಲ್ಲಿರುವ ಡೀಸೆಲ್ ವಾಹನಗಳಿಗೆ ಹೋಲಿಕೆ ಮಾಡಿದಲ್ಲಿ ಈವೀ ಟ್ರಾನ್ಸ್ ಎಲೆಕ್ಟ್ರಿಕ್ ಕೋಚ್ ಬಸ್‌ಗಳು ಅಗ್ಗದ ಪ್ರಯಾಣಕ್ಕೆ ನಾಂದಿ ಹಾಡಿದ್ದು, ಸಂಚಾರ ಮತ್ತು ನಿರ್ವಹಣೆಯಲ್ಲಿ ಮಿತವ್ಯಯಿ ಎನಿಸಿಕೊಂಡಿದೆ. ಲಿಯಾನ್ ಪಾಸ್ಪೇಟ್ ತಂತ್ರಜ್ಞಾನ ಅಳವಡಿತ ಬ್ಯಾಟರಿಯ ಈವೀ ಟ್ರಾನ್ಸ್ ಬಸ್‌ಗಳನ್ನು ಭಾರತದಲ್ಲಿ ಒಲೆಕ್ಟ್ರಾ ಗ್ರೀನ್ ಟೆಕ್ ಲಿಮಿಟೆಡ್ ತಯಾರಿಸುತ್ತಿದೆ.
ಕೋಚ್ ಬಸ್‌ಗಳ ತಯಾರಿ ವೇಳೆ ಸುರಕ್ಷತೆಯನ್ನು ಆದ್ಯತೆಯಾಗಿಸಿಕೊಂಡಿದ್ದು, ಇ.ಯು. ಗುಣಮಟ್ಟಕ್ಕೆ ತಕ್ಕಂತೆ ಚಾಲಕ ಸ್ನೇಹಿ ವ್ಯವಸ್ಥೆ ಹೊಂದಿದೆ ಮತ್ತು ಭಾರತೀಯ ನಿಯಂತ್ರಣ ನಿಯಮಾನುಸಾರ ಈವೀ ಟ್ರಾನ್ಸ್ ಬಸ್‌ಗಳು ಸಿದ್ಧಗೊಂಡಿದ್ದು, ಆತಂಕದ ವೇಳೆ ಅಲಾರಾಮ್ ವ್ಯವಸ್ಥೆ, ತುರ್ತು ದೀಪಗಳ ವ್ಯವಸ್ಥೆ ಹೊಂದಿದೆ.
ಈಗಾಗಲೇ ಈವೀ ಟ್ರಾನ್ಸ್ ಕೋಚ್ ಬಸ್‌ಗಳು ಸೂರತ್, ಸಿಲ್ವಾಸಾ, ಗೋವಾ, ಹೈದರಾಬಾದ್, ಡೆಹ್ರಾಡೂನ್ ಗಳಲ್ಲಿ ಯಶಸ್ವಿಯಾಗಿ ಸಂಚರಿಸುತ್ತಿದ್ದು, ಪುರಿ ಬಸ್ ಸೇವೆ ಎಲೆಕ್ಟ್ರಿಕ್ ಬಸ್ ಸೇವೆಗಳ ವಲಯದಲ್ಲಿ ಹೊಸ ಅಧ್ಯಾಯ ಸೃಷ್ಟಿಸಲಿದೆ.
ಎಂಇಐಎಲ್‌ನ ಶೇ.100ರಷ್ಟು ಪಾಲುದಾರಿಕೆಯ ಸಂಸ್ಥೆಯಾಗಿರುವ ಈವೀ ಟ್ರಾನ್ಸ್ ಪ್ರೈವೇಟ್ ಲಿಮಿಟೆಡ್ ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ಬಸ್ ಸೇವೆ ಒದಗಿಸುವ ಸಂಸ್ಥೆಯಾಗಿದೆ. ಸಂಸ್ಥೆಯು ಮಾರಾಟ, ಗುತ್ತಿಗೆ ಸೇರಿದಂತೆ ವಿವಿಧ ಮಾದರಿಗಳಲ್ಲಿ ಬಸ್ ಸೇವೆಗಳನ್ನು ಒದಗಿಸುತ್ತಿದ್ದು, ಪ್ರಸ್ತುತ ದೇಶಾದ್ಯಂತ 400 ಬಸ್‌ಗಳು ಸಂಚರಿಸುತ್ತಿವೆ. ಈವೀ ಟ್ರಾನ್ಸ್ ತನ್ನದೇ ಆದ ಚಾರ್ಜಿಂಗ್ ಕೇಂದ್ರಗಳನ್ನು ಹೊಂದಿದೆ.
ಫೇಮ್ 1 ಮತ್ತು ಫೇಮ್ 2 ಯೋಜನೆಯಡಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಎಲೆಕ್ಟ್ರಿಕಲ್ ಬಸ್‌ಗಳ ಅಳವಡಿಕೆಗೆ ಮುಂದಡಿ ಇರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್ ಜೈಲಿಗೆ
Road Project: ಶಿರಾಡಿ ಘಾಟ್ ಸುರಂಗ ಯೋಜನೆಗೆ ಡಿಪಿಆರ್ ರಚಿಸಿ: ಕೇಂದ್ರ ಸೂಚನೆ
Hosur ವಿಮಾನ ನಿಲ್ದಾಣಕ್ಕೆ 2 ಸ್ಥಳ ನಿಗದಿಪಡಿಸಿದ ತಮಿಳುನಾಡು
GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.