ಗೂರ್ಖಾಗಳಿಗೆ ವರವಾಯ್ತು ನಿವಾಸ ದೃಢೀಕರಣ ಪತ್ರ
Team Udayavani, Jul 7, 2020, 6:49 AM IST
ಜಮ್ಮು- ಕಾಶ್ಮೀರ ಆಡಳಿತವು ನಿವಾಸ ದೃಢೀಕರಣ ಪತ್ರ (ಡೊಮಿಸೈಲ್ ಸರ್ಟಿಫಿಕೇಟ್) ವಿತರಣೆ ಪ್ರಕ್ರಿಯೆ ಆರಂಭಿಸಿರುವುದು, ಎಷ್ಟೋ ವರ್ಷಗಳಿಂದ ಕಣಿವೆ ರಾಜ್ಯದಲ್ಲಿ ಪರದೇಸಿಗಳಂತೆ ಬದುಕುತ್ತಿದ್ದ ಗೂರ್ಖಾ ಸಮುದಾಯಕ್ಕೆ ವರವಾಗಿ ಪರಿಣಮಿಸಿದೆ.
ಅದರಲ್ಲೂ ಈ ಸಮುದಾಯದ ನಿವೃತ್ತ ಸೇನಾಧಿಕಾರಿಗಳು, ಯೋಧರು ಹಾಗೂ ವಾಲ್ಮೀಕಿ ಸಮುದಾಯದವರು ಈಗ ನಿವಾಸ ದೃಢೀಕರಣ ಪತ್ರ ಪಡೆಯುತ್ತಿದ್ದು, ಕೇಂದ್ರಾಡಳಿತ ಪ್ರದೇಶದಲ್ಲಿ ಸ್ವಂತ ಭೂಮಿ ಖರೀದಿಸಲು ಮತ್ತು ಉದ್ಯೋಗಕ್ಕೆ ಅರ್ಜಿ ಹಾಕಲು ಅವಕಾಶ ಸಿಕ್ಕಿದೆ.
ಜಮ್ಮುವಿನಲ್ಲೇ 6600 ಮಂದಿಗೆ ದೃಢೀಕರಣ ಪತ್ರ ದೊರೆತಿದ್ದು, ಈ ಪೈಕಿ ಬಹುತೇಕ ಮಂದಿ ಗೂರ್ಖಾ ಸಮುದಾಯದವರು.
ಯಾರಿಗೆಲ್ಲ ಸಿಗುತ್ತೆ ಸರ್ಟಿಫಿಕೇಟ್?
– ಖಾಯಂ ವಾಸ ಪ್ರಮಾಣಪತ್ರ ಹೊಂದಿದ್ದೂ ಜಮ್ಮು-ಕಾಶ್ಮೀರದ ಹೊರಗೆ ವಾಸಿಸುತ್ತಿರುವವರು, ಅವರ ಮಕ್ಕಳು
– ಜಮ್ಮು-ಕಾಶ್ಮೀರದ ಹೊರಗೆ ವಾಸಿಸುತ್ತಿರುವ ಕಾಶ್ಮೀರಿ ವಲಸಿಗರು
– ಜಮ್ಮು-ಕಾಶ್ಮೀರದಲ್ಲಿ 15 ವರ್ಷ ವಾಸಿಸಿದವರು, ಅವರ ಮಕ್ಕಳು
– ರಾಜ್ಯದಲ್ಲಿ 10 ವರ್ಷ ಸೇವೆ ಸಲ್ಲಿಸಿರುವ ಕೇಂದ್ರ ಸರಕಾರ, ಪಿಎಸ್‌ಯು, ಕೇಂದ್ರ ಸ್ವಾಯತ್ತ ಸಂಸ್ಥೆಗಳು, ಪಿಎಸ್‌ಬಿ, ಕೇಂದ್ರೀಯ ವಿವಿಗಳು, ಕೇಂದ್ರ ಸಂಶೋಧನಾ ಸಂಸ್ಥೆಗಳ ಅಧಿಕಾರಿಗಳು
– 7 ವರ್ಷ ಜಮ್ಮು-ಕಾಶ್ಮೀರದಲ್ಲಿ ವಿದ್ಯಾಭ್ಯಾಸ ಮಾಡಿದವರು, 10 – 12ನೇ ತರಗತಿ ಪರೀಕ್ಷೆಯನ್ನು ಕೇಂದ್ರಾಡಳಿತ ಪ್ರದೇಶದಲ್ಲೇ ಬರೆದವರು
ಗೂರ್ಖಾ ಸಮುದಾಯ
– 19ನೇ ಶತಮಾನದ ಮಧ್ಯಭಾಗದಲ್ಲಿ ತಮ್ಮ ಜತೆ ಕೈಜೋಡಿಸಿ ಹೋರಾಡಲು ಡೋಗ್ರಾ ಆಡಳಿತದ ಆಹ್ವಾನದ ಮೇರೆಗೆ ನೇಪಾಲದಿಂದ ಜಮ್ಮು- ಕಾಶ್ಮೀರಕ್ಕೆ ಬಂದವರು
– ಪ್ರಸ್ತುತ 1 ಲಕ್ಷ ಗೂರ್ಖಾಗಳು ಕಣಿವೆ ರಾಜ್ಯದಲ್ಲಿದ್ದಾರೆ. ಸ್ಥಳೀ ಯ – ವಿಧಾನಸಭೆ ಚುನಾವಣೆಗಳಲ್ಲಿ ಮತದಾನ ಮಾಡುವ ಅವಕಾಶ ಅವರಿಗಿದೆ. ಆದರೆ ಸರಕಾರ ಒದಗಿಸಿರುವ ಭೂಮಿಯ ಹೊರತಾಗಿ ಬೇರೆಡೆ ಜಮೀನು ಖರೀದಿಸುವ ಅವಕಾಶ ಇವರಿಗಿರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ
Maharashtra polls; ಫಲಿತಾಂಶದ ಬಳಿಕವೇ ಸಿಎಂ ಯಾರೆಂದು ನಿರ್ಧಾರ: ಕಾಂಗ್ರೆಸ್
Andhra; ಮಿತ್ರ ಪಕ್ಷ ಟಿಡಿಪಿಯ ಗೃಹ ಸಚಿವೆಗೇ ವಾರ್ನಿಂಗ್ ನೀಡಿದ ಡಿಸಿಎಂ ಪವನ್ ಕಲ್ಯಾಣ್!
Agra: ಭಾರತೀಯ ವಾಯುಪಡೆ ಮಿಗ್ 29 ಯುದ್ಧ ವಿಮಾನ ಪತನ, ಪೈಲಟ್ ಪಾರು
Jammu Kashmir: ಕಲಂ-370- ವಿಧಾನಸಭೆ ಮೊದಲ ಕಲಾಪದಲ್ಲೇ ಪಿಡಿಪಿ-ಬಿಜೆಪಿ ಕೋಲಾಹಲ
MUST WATCH
ಹೊಸ ಸೇರ್ಪಡೆ
Pro Kabaddi;ಬೆಂಗಳೂರು ಬುಲ್ಸ್ ಜಯಭೇರಿ: ತಮಿಳ್ ತಲೈವಾಸ್‌ಗೆ 32-36 ಅಂಕಗಳ ಸೋಲು
Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡರ್ ಸ್ಫೋ*ಟ: ಅಪಾರ ಹಾನಿ
Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.