‘Mera Bharat, mera parivaar’; ಕುಟುಂಬವಿಲ್ಲ ಎಂದ ಲಾಲುಗೆ ಪ್ರಧಾನಿ ಮೋದಿ ತಿರುಗೇಟು
ಮೋದಿ ಕಾ ಪರಿವಾರ್...
Team Udayavani, Mar 4, 2024, 4:52 PM IST
ಹೊಸದಿಲ್ಲಿ : ‘ಕುಟುಂಬವಿಲ್ಲ’ ಎಂಬ ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ ಪ್ರಧಾನಿ ನರೇಂದ್ರ ಮೋದಿ ‘140 ಕೋಟಿ ಭಾರತೀಯರು ನನ್ನ ಕುಟುಂಬ” ಎಂದು ಸೋಮವಾರ ಪ್ರತಿಪಾದಿಸಿದ್ದಾರೆ.
ಪಾಟ್ನಾದಲ್ಲಿ ನಡೆದ ಮಹಾಮೈತ್ರಿಕೂಟದ ರ‍್ಯಾಲಿಯಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರು ಹೇಳಿಕೆ ನೀಡಿದ ಒಂದು ದಿನದ ನಂತರ ಮೋದಿಯವರು ಅದಿಲಾಬಾದ್ ನಲ್ಲಿ ನಡೆದ ರ‍್ಯಾಲಿಯಲ್ಲಿ ವಿಪಕ್ಷಗಳ ವಿರುದ್ಧ ಕಿಡಿ ಕಾರಿ” ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ತುಷ್ಟೀಕರಣದಲ್ಲಿ ಆಳವಾಗಿ ಮುಳುಗಿರುವ ಇಂಡಿಯಾ ಮೈತ್ರಿಕೂಟದ ನಾಯಕರು ಆತಂಕಕ್ಕೆ ಒಳಗಾಗುತ್ತಿದ್ದಾರೆ.ಇದೀಗ 2024ರ ಚುನಾವಣೆಗೆ ತಮ್ಮ ನೈಜ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ನಾನು ಅವರ ಪರಿವಾರವನ್ನು ಪ್ರಶ್ನಿಸಿದ ನಂತರ ಅವರು ಮೋದಿಗೆ ಕುಟುಂಬವಿಲ್ಲ ಎಂದು ಹೇಳಲು ಪ್ರಾರಂಭಿಸಿದ್ದಾರೆ”ಎಂದರು.
”ದೇಶದ ಜನತೆಗೆ ನನ್ನ ಬದ್ಧತೆ ಎಂದು ಪುನರುಚ್ಚರಿಸಿದ ಮೋದಿ, ಜನಸೇವೆ ಮಾಡುವ ಕನಸಿನೊಂದಿಗೆ ಚಿಕ್ಕ ವಯಸ್ಸಿನಲ್ಲಿಯೇ ಮನೆ ತೊರೆದಿದ್ದೇನೆ. “ಸೇವಕ” ಎಂದು ಸಾರ್ವಜನಿಕ ಕಲ್ಯಾಣಕ್ಕಾಗಿ ತನ್ನನ್ನು ಸಮರ್ಪಿಸಿಕೊಂಡಿದ್ದೇನೆ” ಎಂದು ಹೇಳಿದ್ದಾರೆ.
“ಈ ದೇಶದ 140 ಕೋಟಿ ಜನರು ನನ್ನ ಕುಟುಂಬ. ಮೇರಾ ಭಾರತ್ ಮೇರಾ ಪರಿವಾರ್ ಹೇ (ನನ್ನ ಭಾರತ ನನ್ನ ಕುಟುಂಬ). ನನ್ನ ಬದುಕು ತೆರೆದ ಪುಸ್ತಕವಿದ್ದಂತೆ. ದೇಶದ ಜನರಿಗೆ ಇದರ ಬಗ್ಗೆ ತಿಳಿದಿದೆ. “ನಾನು ಬಾಲ್ಯದಲ್ಲಿ ಮನೆಯಿಂದ ಹೊರಬಂದಾಗ, ನಾನು ದೇಶವಾಸಿಗಳಿಗಾಗಿ ಬದುಕುತ್ತೇನೆ ಎಂದು ಕನಸು ಕಂಡೆ” ಎಂದರು.
“ರಾಜವಂಶದ ಪಕ್ಷಗಳ” ಮೇಲೆ ವಾಗ್ದಾಳಿ ಮಾಡಿದ ಪ್ರಧಾನಿ ಮೋದಿ “ರಾಜವಂಶದ ಪಕ್ಷಗಳ ಮುಖವು ವಿಭಿನ್ನವಾಗಿರಬಹುದು ಆದರೆ ಅವುಗಳು ಒಂದೇ ರೀತಿಯ ಸುಳ್ಳು ಮತ್ತು ಲೂಟಿಯ ಗುಣಲಕ್ಷಣಗಳನ್ನು ಹೊಂದಿವೆ. ಟಿಆರ್‌ಎಸ್ ಬಿಆರ್‌ಎಸ್ ಆಗಿದ್ದರೂ ಅದು ಏನನ್ನೂ ಬದಲಾಯಿಸಲಿಲ್ಲ ಮತ್ತು ಈಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ, ಆದರೆ “ಏನೂ ಆಗುವುದಿಲ್ಲ” ಎಂದರು.
ಬಿಆರ್‌ಎಸ್ ತನ್ನ ಅಧಿಕಾರಾವಧಿಯಲ್ಲಿ ಕಾಳೇಶ್ವರಂ ಲಿಫ್ಟ್ ನೀರಾವರಿ ಯೋಜನೆಯಂತಹ ಹಗರಣಗಳನ್ನು ಮಾಡಿದೆ ಎಂದು ಅವರು ಆರೋಪಿಸಿದರು ಮತ್ತು ಆಡಳಿತಾರೂಢ ಕಾಂಗ್ರೆಸ್ ಕ್ರಮ ಕೈಗೊಳ್ಳುವ ಬದಲು ಕಡತಗಳ ಮೇಲೆ ಕುಳಿತಿದೆ ಎಂದು ಆರೋಪಿಸಿದರು.
ಲಾಲು ಹೇಳಿದ್ದೇನು?
“ನರೇಂದ್ರ ಮೋದಿ ಅವರಿಗೆ ಸ್ವಂತ ಕುಟುಂಬವಿಲ್ಲದಿದ್ದರೆ ನಾವು ಏನು ಮಾಡಬೇಕು? ರಾಮಮಂದಿರದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಲೇ ಇರುತ್ತಾರೆ. ಆತ ನಿಜವಾದ ಹಿಂದೂ ಕೂಡ ಅಲ್ಲ. ಹಿಂದೂ ಸಂಪ್ರದಾಯದಲ್ಲಿ, ಮಗನು ತನ್ನ ಹೆತ್ತವರ ಮರಣದ ನಂತರ ತನ್ನ ತಲೆ ಮತ್ತು ಗಡ್ಡವನ್ನು ಬೋಳಿಸಬೇಕು. ತಾಯಿ ಸತ್ತಾಗ ಮೋದಿ ಹಾಗೆ ಮಾಡಲಿಲ್ಲ” ಎಂದು ಲಾಲು ಕಟು ಟೀಕೆ ಮಾಡಿದ್ದರು.
ಮೋದಿ ಕಾ ಪರಿವಾರ್
ಪ್ರಧಾನಿ ವಿರುದ್ಧ ಟೀಕೆ ಮಾಡಿದುದ್ದಕ್ಕಾಗಿ ಲಾಲು ಪ್ರಸಾದ್ ಯಾದವ್ ವಿರುದ್ಧ ಹಲವು ಪ್ರಮುಖ ಬಿಜೆಪಿ ನಾಯಕರು ಹರಿಹಾಯ್ದಿದ್ದಾರೆ. ಮೋದಿಯವರ ಹೇಳಿಕೆಯ ನಂತರ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್ ಮತ್ತು ಅನುರಾಗ್ ಠಾಕೂರ್ ಸೇರಿದಂತೆ ಪಕ್ಷದ ಹಿರಿಯ ನಾಯಕರು ತಮ್ಮ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳಿಗೆ ‘ಮೋದಿ ಕಾ ಪರಿವಾರ್’ ಅನ್ನು ಸೇರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.