Chennai: 35 ಮೀಟರ್ ಆಳದಲ್ಲಿ ಮೆಟ್ರೋ ನಿಲ್ದಾಣ
Team Udayavani, Aug 20, 2023, 7:14 PM IST
ಚೆನ್ನೈ: ತಮಿಳುನಾಡು ರಾಜಧಾನಿ ಚೆನ್ನೈನ ತಿರುಮಯಿಲೈ ಎಂಬಲ್ಲಿ ನಿರ್ಮಾಣವಾಗಲಿರುವ ಮೆಟ್ರೋ ರೈಲು ನಿಲ್ದಾಣ ಅತ್ಯಂತ ಆಳದ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಮಾಸಾಂತ್ಯಕ್ಕೆ ಅದಕ್ಕೆ ಸಂಬಂಧಿಸಿದ ಕಾಮಗಾರಿ ಶುರುವಾಗಲಿದೆ ಎಂದು ಚೆನ್ನೈ ಮೆಟ್ರೋ ರೈಲು ನಿಗಮ ನಿಯಮಿತದ ವಕ್ತಾರರು ಮಾಹಿತಿ ನೀಡಿದ್ದಾರೆ. ಇಂಗ್ಲಿಷ್ ಅಕ್ಷರ “ಟಿ’ ಆಕಾರದಲ್ಲಿ ನಿರ್ಮಾಣವಾಗಲಿರುವ ಈ ನಿಲ್ದಾಣ ಭೂಮಿಯಿಂದ 35 ಮೀಟರ್ ಆಳದಲ್ಲಿ ಇರಲಿದೆ.
ಈ ನಿಲ್ದಾಣ ಚೆನ್ನೈ ಮೆಟ್ರೋ ವ್ಯಾಪ್ತಿಯಲ್ಲಿ ಅತ್ಯಂತ ಆಳದ ನಿಲ್ದಾಣವೂ ಹೌದು. ಪ್ರಸ್ತಾವಿತ ನಿಲ್ದಾಣ 2028ರ ವೇಳೆಗೆ ಕಾಮಗಾರಿ ಮುಕ್ತಾಯಗೊಂಡು, ಸಂಚಾರ ಶುರುವಾಗುವ ನಿರೀಕ್ಷೆ ಇರಿಸಲಾಗಿದೆ. ಬೆಂಗಳೂರಿನ ಡೈರಿ ಸರ್ಕಲ್ನಲ್ಲಿ ನಿರ್ಮಾಣವಾಗುತ್ತಿರುವ ಮೆಟ್ರೋ ರೈಲು ನಿಲ್ದಾಣ ನೆಲದಿಂದ 20 ಮೀಟರ್ ಆಳದಲ್ಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.