ಗೋವಾ: ಎರಡು ದಿನದ ಅಧಿವೇಶನ ಆಟಕ್ಕುಂಟು ಲೆಕ್ಕಕ್ಕಿಲ್ಲದಂತೆ: ಸುದೀನ ಧವಳೀಕರ್ ವಾಗ್ದಾಳಿ
Team Udayavani, Oct 13, 2021, 4:48 PM IST
ಪಣಜಿ: “ಸರ್ಕಾರ ತುಮಚಾ ದಾರಿ” ಇದು ಸರ್ಕಾರದ ಕಾರ್ಯಕ್ರಮವಾಗಿರುವುದರಿಂದ ಈ ಕಾರ್ಯಕ್ರಮದಲ್ಲಿ ಸರ್ಕಾರದ ಯೋಜನೆಗಳ ಬಗ್ಗೆ ಜನತೆಗೆ ಮಾಹಿತಿ ನೀಡುವ ಬದಲಾಗಿ ಈ ಕಾರ್ಯಕ್ರಮದ ಭಾಷಣದಲ್ಲಿ ವಿರೋಧಿಗಳ ಬಗ್ಗೆ ಠೀಕೆ ಮಾಡಲಾಗುತ್ತಿದೆ. ಇದರಿಂದಾಗಿ ಈ ಸರ್ಕಾರಿ ಕಾರ್ಯಕ್ರಮವು “ರಾಜಕಾರಣ ತುಮಚಾ ದಾರಿ” ಎಂದು ಹೆಸರಿಡುವಂತಾಗಿದೆ. ನೆರೆಯಲ್ಲಿ ಮನೆ ಕಳೆದುಕೊಂಡವರಿಗೆ ಸರ್ಕಾರದಿಂದ ಇದುವರೆಗೂ ಪರಿಹಾರ ನೀಡಲು ಸಾಧ್ಯವಾಗಿಲ್ಲ. ಆದರೆ ಸರ್ಕಾರವು ಈ ಕಾರ್ಯಕ್ರಮಗಳಿಗೆ ಬೇಕಾಬಿಟ್ಟಿ ಖರ್ಚು ಮಾಡುತ್ತಿದೆ ಎಂದು ಎಂಜಿಪಿ ಪಕ್ಷದ ನಾಯಕ ಸುದೀನ ಧವಳೀಕರ್ ರಾಜ್ಯ ಸರ್ಕಾರದ ವಿರುದ್ಧ ಠೀಕಾ ಪ್ರಹಾರ ನಡೆಸಿದರು.
ಪಣಜಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು- ಅಕ್ಟೋಬರ್ 18 ಮತ್ತು 19 ರಂದು ಎರಡು ದಿನಗಳ ಕಾಲ ವಿಧಾನಸಭಾ ಅಧಿವೇಶನ ನಡೆಯುತ್ತಿದೆ. ಈ ಎರಡು ದಿನಗಳಲ್ಲಿ ಜನರ ಸಮಸ್ಯೆಯನ್ನು ಮಂಡಿಸಲು ಎಷ್ಟು ಸಮಯ ಸಿಗಲಿದೆ. ಸರ್ಕಾರವು ಹೀಗೆ ಕಡಿಮೆ ದಿನಗಳ ಅಧಿವೇಶನ ಆಯೋಜಿಸುವ ಮೂಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಇದು ಪ್ರಸಕ್ತ ಸರ್ಕಾರದ ಕೊನೆಯ ಅಧಿವೇಶನವಾಗಿದ್ದು ನಂತರ ಚುನಾವಣೆಯ ನಂತರ ಹೊಸ ಸರ್ಕಾರ ಸ್ಥಾಪನೆಯಾದ ನಂತರ ಅಧಿವೇಶನ ನಡೆಯಲಿದೆ ಎಂದು ಧವಳೀಕರ್ ನುಡಿದರು.
ಕಳೆದ 22 ವರ್ಷ ನಾನು ರಾಜಕಾರಣದಲ್ಲಿ ಹಾಗೂ ಎಂಜಿಪಿ ಪಕ್ಷದಲ್ಲಿ ಏಕನಿಷ್ಠನಾಗಿದ್ದೇನೆ. ಹೆಸರು ಹಾಳು ಮಾಡಲು ಕೆಲ ಸುಳ್ಳು ಸುದ್ಧಿಯನ್ನು ಹರಡಿಸಲಾಗುತ್ತಿದೆ ಎಂದು ಧವಳೀಕರ್ ನುಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.