ಮೈಕ್ರೋ ಕಂಟೈನ್ಮೆಂಟ್‌ಗಳ ಮೇಲೆ ಗಮನವಿಡಿ
Team Udayavani, Apr 9, 2021, 7:05 AM IST
ಹೊಸದಿಲ್ಲಿ: ಕೋವಿಡ್ ವಿಚಾರದಲ್ಲಿ ದೇಶಕ್ಕೆ ಇನ್ನು 4 ವಾರ ನಿರ್ಣಾಯಕವಾಗಿದ್ದು, ಎಲ್ಲ ರಾಜ್ಯ ಸರಕಾರಗಳೂ ಮೈಕ್ರೋ ಕಂಟೈನ್ಮೆಂಟ್ ವಲಯಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ಗುರುವಾರ ಸಿಎಂಗಳ ಜತೆ ಸಂವಾದದ ವೇಳೆ ಮಾತನಾಡಿದ ಅವರು, ಟೆಸ್ಟ್, ಟ್ರ್ಯಾಕ್, ಟ್ರೀಟ್ ಮಂತ್ರದ ಪಾಲನೆ ಮುಂದುವರಿಸಬೇಕು. ಪ್ರತೀ ಒಬ್ಬ ಸೋಂಕಿತ ವ್ಯಕ್ತಿಯ ಕನಿಷ್ಠ 30 ಸಂಪರ್ಕಿತರನ್ನು ಪತ್ತೆಹಚ್ಚಬೇಕು. ಕಂಟೈನ್ಮೆಂಟ್ ವಲಯದಲ್ಲಿ ಪ್ರತಿಯೊಬ್ಬರನ್ನೂ ಪರೀಕ್ಷೆಗೆ ಒಳಪಡಿಸಬೇಕು ಎಂದೂ ತಿಳಿಸಿದ್ದಾರೆ.
ನಾವು ಸೋಂಕಿನ ಪಾಸಿಟಿವಿಟಿ ದರವನ್ನು ಶೇ.5ಕ್ಕಿಂತ ಕೆಳಗಿಳಿಸಬೇಕು. ಶೇ.70ರಷ್ಟು ಆರ್‌ಟಿ ಪಿಸಿಆರ್ ಪರೀಕ್ಷೆ ನಡೆಸುವ ಗುರಿ ಹಾಕಿಕೊಳ್ಳಬೇಕು. ಈ ಹಿಂದೆ ನಾವು ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು ಇಳಿಸುವಲ್ಲಿ ಯಶಸ್ವಿಯಾಗಿದ್ದೇವೆ. ಈ ಅಲೆಯಲ್ಲೂ ನಾವು ಇದನ್ನು ಸಾಧಿಸಲು ಸಾಧ್ಯ ಎಂದಿದ್ದಾರೆ.
ಕೆಲವು ರಾಜ್ಯಗಳ ಸ್ಥಿತಿ ಚಿಂತಾಜನಕವಾಗಿದೆ. ಇದೊಂದು ಕಳವಳಕಾರಿ ಸಂಗತಿ. ಆದರೂ ಜನರು ಸೋಂಕನ್ನು ಅತ್ಯಂತ ಹಗುರವಾಗಿ ಪರಿಗಣಿಸಿದ್ದಾರೆ. ಮಾರ್ಗಸೂಚಿಗಳನ್ನು ಸರಿ ಯಾಗಿ ಪಾಲಿಸುತ್ತಿಲ್ಲ. ಕೆಲವು ರಾಜ್ಯಗಳಲ್ಲಿ ಸರಕಾರಗಳೂ ಬದ್ಧತೆ ತೋರುತ್ತಿಲ್ಲ ಎಂದೂ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ನಿಷೇಧ: ಭಾರತದಿಂದ ಎ.11ರಿಂದ 28ರ ವರೆಗೆ ವಿಮಾನ ಹಾರಾಟ ನಿಷೇಧಿಸಿ ನ್ಯೂಜಿ ಲೆಂಡ್ ಸರಕಾರ ಆದೇಶಿಸಿದೆ.
ಜನಜಾಗೃತಿಗೆ ಕ್ರಮ ಅತ್ಯಗತ್ಯ :
ಎಲ್ಲ ಸಿಎಂಗಳು ಆಯಾ ರಾಜ್ಯಪಾಲರೊಂದಿಗೆ ಸೇರಿ ಸರ್ವಪಕ್ಷ ಸಭೆ ಕರೆದು, ಕ್ರಿಯಾಯೋಜನೆ ರೂಪಿಸಬೇಕು. ಸಿಎಂಗಳು ಮತ್ತು ರಾಜ್ಯಪಾಲರು ವೆಬಿನಾರ್‌ಗಳನ್ನು ನಡೆಸಿ, ಧಾರ್ಮಿಕ ನಾಯಕರನ್ನೂ ಸೇರಿಸಿಕೊಂಡು ಜನಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಸಾಹಿತಿಗಳು, ಕ್ರೀಡಾಳುಗಳು ಮತ್ತು ಸೆಲೆಬ್ರಿಟಿಗಳು ಕೂಡ ಕೋವಿಡ್ ಪರೀಕ್ಷೆ ಹೆಚ್ಚಳಕ್ಕಾಗಿ ಅಭಿಯಾನ ಆರಂಭಿಸಬೇಕು ಎಂದೂ ಮೋದಿ ಕರೆ ನೀಡಿದ್ದಾರೆ.
“ರಾಜಕೀಯ’ದ ಬಗ್ಗೆ ಮಾತಾಡಲ್ಲ :
ಕೋವಿಡ್ ಸೋಂಕು ಹಾಗೂ ಲಸಿಕೆಯ ವಿಚಾರದಲ್ಲಿ ರಾಜಕೀಯ ಮಾಡುವವರ ವಿರುದ್ಧ ಪ್ರಧಾನಿ ಮೋದಿ ಕಿಡಿಕಾರಿದ್ದಾರೆ. ಆರೋಪಗಳ ಬಗ್ಗೆ ನಾನೂ ಏನೂ ಹೇಳುವುದಿಲ್ಲ. ಯಾರು ರಾಜಕೀಯ ಮಾಡಲು ಇಚ್ಛಿಸುತ್ತಾರೋ ಅವರು ಮಾಡುತ್ತಿರಲಿ. ಆದರೆ ಎಲ್ಲ ಸಿಎಂಗಳು ಹಾಗೂ ನಮ್ಮ ಸರಕಾರ ಒಗ್ಗಟ್ಟಾಗಿ ಸೋಂಕಿನ ವಿರುದ್ಧ ಹೋರಾಡಬೇಕು ಅಷ್ಟೆ ಎಂದು ಮೋದಿ ಹೇಳಿದ್ದಾರೆ.
ಲಸಿಕೆ ಹಾಕಿಸುವುದರಲ್ಲಿ ದಾಖಲೆ :
ಕೋವಿಡ್ ಲಸಿಕೆ ಹಾಕಿಸುವುದರಲ್ಲಿ ಭಾರತ ಅಮೆರಿಕವನ್ನು ಹಿಂದಿಕ್ಕಿದೆ. ಪ್ರತೀ ದಿನ 34 ಲಕ್ಷ ಡೋಸ್ ಲಸಿಕೆಗಳನ್ನು ಭಾರತದಲ್ಲಿ ನೀಡಲಾಗಿದ್ದರೆ ಅಮೆರಿಕದಲ್ಲಿ 29 ಲಕ್ಷ ಮಂದಿಗೆ ನೀಡಲಾಗಿದೆ. ಮಂಗಳವಾರದಿಂದ ಬುಧವಾರದ ಅವಧಿಯಲ್ಲಿ 33 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ. 11,39,291 ಮಂದಿ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ, 89,68,151 ಆರೋಗ್ಯ ಕಾರ್ಯಕರ್ತರಿಗೆ, 97,67,538 ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ಹಾಕಲಾಗಿದೆ.
ಪರೀಕ್ಷೆಗಳು ನಡೆಯಲಿವೆ: ಸಿಬಿಎಸ್‌ಇ : ಹತ್ತು, ಹನ್ನೆರಡನೇ ತರಗತಿಗಳ ವಾರ್ಷಿಕ ಪರೀಕ್ಷೆಯನ್ನು ಸೋಂಕಿನ ಹಿನ್ನೆಲೆಯಲ್ಲಿ ರದ್ದು ಮಾಡಬೇಕು ಎಂದು 1 ಲಕ್ಷಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಸಿಬಿಎಸ್‌ಇಗೆ ಮನವಿ ಮಾಡಿದ್ದಾರೆ. ಮುಂದಿನ ತಿಂಗಳು ಪರೀಕ್ಷೆ ನಡೆಸಿ ಅಥವಾ ರದ್ದು ಮಾಡಿ ಎಂದು ಒತ್ತಾಯಿಸಿ ದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಸಿಬಿಎಸ್‌ಇ “ಮೇ 4ರಿಂದ ಈಗಾಗಲೇ ನಿಗದಿಯಾಗಿರುವಂತೆ ಪರೀಕ್ಷೆಗಳು ನಡೆಯ ಲಿವೆ. ಸೋಂಕು ನಿಯಂತ್ರಣಕ್ಕಾಗಿ ಕೈಗೊಳ್ಳಬೇಕಾದ ಮುನ್ನೆಚ್ಚ ರಿಕಾ ಕ್ರಮಗಳ ಬಗ್ಗೆ ಪರಾಮರ್ಶೆ ನಡೆಸಲಾಗುತ್ತದೆ’ ಎಂದು ಹೇಳಿದೆ. ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿ ನೇಷನ್ (ಸಿಐಎಸ್‌ಸಿಇ) ಕೂಡ ಇದೇ ಅಂಶವನ್ನು ಪುಷ್ಟೀಕರಿಸಿದೆ.
ಕೇರಳದಲ್ಲಿ ಪರೀಕ್ಷೆ ಶುರು :
ಇದೇ ವೇಳೆ, ಕೇರಳದಲ್ಲಿ ಕೂಡ 10ನೇ ತರಗತಿ ಮತ್ತು ಪದವಿ ಪೂರ್ವ ಪರೀಕ್ಷೆಗಳು ಶುರುವಾಗಿವೆ. ಎ.29ರ ವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದೆ. ಪದವಿ ಪೂರ್ವ ತರಗತಿಗಳ ಪರೀಕ್ಷೆ ಗುರುವಾರದಿಂದ ಶುರುವಾಗಿದ್ದು, ಎ.26ರ ವರೆಗೆ ಕೊರೊನಾ ನಿಯಮಗಳ ಕಡ್ಡಾಯ ಅನುಷ್ಠಾನದ ನಡುವೆ ನಡೆಯಲಿದೆ.
ದಿಲ್ಲಿಯಿಂದಲೂ ಕಾರ್ಮಿಕರು ಸ್ವಗ್ರಾಮಕ್ಕೆ :
ಮುಂಬಯಿಯಿಂದ ಈಗಾಗಲೇ ವಲಸೆ ಕಾರ್ಮಿಕರು ಮತ್ತೆ ಸ್ವಗ್ರಾ ಮಗಳತ್ತ ತೆರಳಲು ಶುರು ಮಾಡಿದ್ದಾರೆ. ಹೊಸದಿಲ್ಲಿಯಿಂದಲೂ ಇದೇ ರೀತಿ ಕಾರ್ಮಿಕರು ತಮ್ಮ ಸ್ವಗ್ರಾಮಗಳಿಗೆ ಮರು ಪ್ರಯಾಣ ಶುರು ಮಾಡಿದ್ದಾರೆ. ಪಂಜಾಬ್, ಹರಿಯಾಣ, ಮಧ್ಯಪ್ರದೇಶಗಳಿಂದ ರಾಷ್ಟ್ರ ರಾಜಧಾನಿಗೆ ಮತ್ತೆ ಬದುಕು ಕಟ್ಟಿಕೊಳ್ಳಲು ಆಗಮಿಸಿದ್ದರು. ಹೊಸ ನಿಯಂತ್ರಣ ಕ್ರಮಗಳು ಪ್ರಕಟವಾದ್ದರಿಂದ ಆನಂದ್ ವಿಹಾರ್ ಬಸ್ ಟರ್ಮಿನಲ್‌ನಿಂದ ಕೂಲಿಯಾಳುಗಳು ಊರುಗಳಿಗೆ ತೆರಳುತ್ತಿದ್ದಾರೆ.
“ಮೋದಿಗೆ ಲಸಿಕೆ ನೀಡಿದ್ದು ಅವಿಸ್ಮರಣೀಯ’ :
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗುರುವಾರ ಕೊರೊನಾದ 2ನೇ ಲಸಿಕೆ ನೀಡಿದ ಶುಶ್ರೂಷಕಿ ನಿಶಾ ಶರ್ಮಾ, ಪ್ರಧಾನಿಯವರನ್ನು ಭೇಟಿಯಾಗಿದ್ದು, ಅವರಿಗೆ ಲಸಿಕೆ ನೀಡಿದ್ದು ತಮ್ಮ ಜೀವನದ ಅವಿಸ್ಮರಣೀಯ ಘಳಿಗೆ ಎಂದು ಹೇಳಿ ದ್ದಾರೆ. ಮಾ. 1ರಂದು ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮೊದಲ ಲಸಿಕೆ ಪಡೆದಿದ್ದ ಮೋದಿ, ಅದಾಗಿ 37 ದಿನಗಳ ಅನಂತರ ಗುರುವಾರ ಏಮ್ಸ್ ಆಸ್ಪತ್ರೆಯಲ್ಲೇ 2ನೇ ಲಸಿಕೆ ಪಡೆದರು. ಮೋದಿಯವರಿಗೆ ಮೊದಲ ಲಸಿಕೆ ನೀಡಿದ್ದ ಮತ್ತೂಬ್ಬ ಶುಶ್ರೂಷಕಿ ಪಿ. ನಿವೇದಾ, ನಿಶಾ ಅವರಿಗೆ ಈ ಬಾರಿ ಸಹಾಯಕಿಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.