ಅಡುಗೆ ಉಪ್ಪಿನಲ್ಲಿ ಪ್ಲಾಸ್ಟಿಕ್ ಅಂಶ ಪತ್ತೆ
Team Udayavani, Sep 4, 2018, 6:00 AM IST
ಮುಂಬಯಿ: ದೇಶದಲ್ಲಿ ನಿತ್ಯ ಬಳಕೆಯ, ಜನಪ್ರಿಯ ಬ್ರಾಂಡ್ಗಳ ಉಪ್ಪಿನಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ ಮೈಕ್ರೋ ಪ್ಲಾಸ್ಟಿಕ್ ಕಣಗಳು ಇವೆ. ಈ ಅಂಶವನ್ನು ಐಐಟಿ ಬಾಂಬೆಯ ಅಧ್ಯಯನ ತಂಡ ಪತ್ತೆಹಚ್ಚಿದೆ. ದ್ವಿಸದಸ್ಯರುಳ್ಳ ಈ ತಂಡ ಭಾರತದ ಉಪ್ಪಿನ ಬ್ರಾಂಡ್ಗಳ ಸುಮಾರು 24 ಕೆ.ಜಿ. ಉಪ್ಪನ್ನು ಪರೀಕ್ಷೆಗೊಳಪಡಿಸಿದೆ. ಸಾಮಾನ್ಯ ಉಪ್ಪಿನಲ್ಲಿ ಶೇ. 63ರಷ್ಟು ಪ್ರಮಾಣದ ಮೈಕ್ರೋ ಪ್ಲಾಸ್ಟಿಕ್ ಕಂಡು ಬಂದಿದ್ದರೆ, ಬ್ರಾಂಡೆಡ್ ಉಪ್ಪಿನಲ್ಲಿ ಶೇ.37 ಪ್ರಮಾಣದ ಪ್ಲಾಸ್ಟಿಕ್ ಫೈಬರ್ಗಳು ಪತ್ತೆಯಾಗಿವೆ ಎಂದು ಸಂಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಚೀನ, ಅಮೆರಿಕ ಬಳಿಕ ವಿಶ್ವದ ಮೂರನೇ ಅತೀ ದೊಡ್ಡ ಉಪ್ಪು ಉತ್ಪಾದಕ ರಾಷ್ಟ್ರಎಂಬ ಹೆಗ್ಗಳಿಕೆಯನ್ನು ಭಾರತ ಪಡೆದಿರುವಾಗ ಮತ್ತು ಬುದ್ಧಿಮಾಂದ್ಯ ಮಕ್ಕಳ ಜನನ ನಿಯಂತ್ರಿಸಲು ಅಯೋಡಿನ್ ಸಹಿತ ಉಪ್ಪು ಉಪಯೋಗಿಸುವಂತೆ ಸರಕಾರವೇ ಜಾಹೀರಾತು ನೀಡುತ್ತಿರುವಾಗಲೇ ಈ ವರದಿ ಕುತೂಹಲ ಪಡೆದುಕೊಂಡಿದೆ. ಎಲ್ಲಿಂದ ಬಂತು ಈ ಪ್ಲಾಸ್ಟಿಕ್? ಸಮುದ್ರಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚುತ್ತಿದ್ದು ಈ ಪ್ಲಾಸ್ಟಿಕ್ಗಳು ಕ್ರಮೇಣ ಛಿದ್ರಗೊಂಡು ಮೈಕ್ರೋ ಪ್ಲಾಸ್ಟಿಕ್ ಕಣಗಳಾಗಿ ಮಾರ್ಪಾಡಾಗುತ್ತವೆ. ಪ್ಲಾಸ್ಟಿಕ್ ಫೈಬರ್ ಅಂಶವು ಬಟ್ಟೆ ತೊಳೆಯುವ ಪ್ರಕ್ರಿಯೆಯಿಂದ ಬಿಡುಗಡೆಯಾಗುತ್ತಿದ್ದು, ಆ ನೀರು ನದಿಯಿಂದ ಸಾಗರಕ್ಕೆ ಸೇರುವುದರಿಂದ ಸಾಗರದ ನೀರು ಫೈಬರ್ಯುಕ್ತವಾಗುತ್ತಿದೆ. ಸಮುದ್ರ ನೀರಿನಿಂದ ತಯಾರಿಸಲ್ಪಡುವ ಉಪ್ಪಿನಿಂದ ಇವು ಮಾನವನ ದೇಹ ಸೇರುತ್ತದೆ ಎಂದಿದ್ದಾರೆ ವಿಜ್ಞಾನಿಗಳು.
63 ಶೇ. ಭಾರತೀಯ ಉಪ್ಪಿನಲ್ಲಿ ಕಂಡು ಬಂದ ಮೈಕ್ರೋ ಪ್ಲಾಸ್ಟಿಕ್ ಪ್ರಮಾಣ
97 ಶೇ. ಪ್ರತಿಷ್ಠಿತ ಬ್ರಾಂಡ್ಗಳ ಉಪ್ಪಿನಲ್ಲಿ ಕಾಣಿಸಿಕೊಂಡಿರುವ ಪ್ಲಾಸ್ಟಿಕ್ ಫೈಬರ್ ಅಂಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
Vavar Mosque: ಶಬರಿಮಲೆ ಯಾತ್ರಿಗಳು ವಾವರ ಮಸೀದಿಗೆ ಹೋಗಬಾರದು: ಬಿಜೆಪಿ ಶಾಸಕ
Viral: ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾದ 16ರ ಬಾಲಕನ ಜತೆ ಮನೆ ಬಿಟ್ಟು ಓಡಿದ 10ರ ಬಾಲಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.