ಎಲ್ಲರಿಗೂ ತಂತ್ರಜ್ಞಾನ: ಭಾರತಕ್ಕೆ ನಾಡೆಲ್ಲಾ ಮೆಚ್ಚುಗೆ
ಇತರ ರಾಷ್ಟ್ರಗಳಿಗೂ ಅನುಸರಣೀಯ ಪ್ರಧಾನಿ ಮೋದಿ ಜತೆಗೂ ಭೇಟಿ
Team Udayavani, Jan 6, 2023, 6:50 AM IST
ನವದೆಹಲಿ/ಬೆಂಗಳೂರು:ತಂತ್ರಜ್ಞಾನವನ್ನು ಆಧರಿಸಿಕೊಂಡು ಸಮಾಜದ ಎಲ್ಲರನ್ನೂ ಒಳಗೊಳ್ಳುವಂತೆ ಮಾಡುತ್ತಿರುವ ನಿಟ್ಟಿನಲ್ಲಿ ಭಾರತ ಸರ್ಕಾರ ಕೈಗೊಂಡಿರುವ ನೀತಿಗಳು ಜಗತ್ತಿಗೇ ಅನುಸರಣೀಯ ಎಂದು ಮೈಕ್ರೋಸಾಫ್ಟ್ ಸಿಇಒ ಮತ್ತು ಅಧ್ಯಕ್ಷ ಸತ್ಯ ನಾಡೆಲ್ಲಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಆಯೋಜಿಸಲಾಗಿದ್ದ “ಫ್ಯೂಚರ್ ರೆಡಿ ಟೆಕ್ನಾಲಜಿ ಸಮಿಟ್’ನಲ್ಲಿ ಭಾಗವಹಿಸಿ ಅವರು ಮಾತನಾಡಿದ್ದಾರೆ.
ಜಗತ್ತಿನ ಇತರ ಭಾಗಗಳಲ್ಲಿ ತಂತ್ರಜ್ಞಾನವನ್ನು ಆಧರಿಸಿದ ಯೋಜನೆಯನ್ನು ಜನಸಾಮಾನ್ಯರ ಅನುಕೂಲಕ್ಕಾಗಿ ಬಳಕೆ ಮಾಡುವ ವ್ಯವಸ್ಥೆ ನೋಡಿಲ್ಲ. ಅದಕ್ಕಾಗಿ ಭಾರತ ಸರ್ಕಾರದ ರಾಷ್ಟ್ರೀಯ ಭಾಷೆಗಳ ಅನುವಾದ ಮಿಷನ್ ಅಭಿವೃದ್ಧಿಪಡಿಸಿರುವ “ಭಾಷಿಣಿ’ ಎಂಬ ಕೃತಕ ಬುದ್ಧಿಮತ್ತೆ ಆಧಾರಿತ ವ್ಯವಸ್ಥೆಯಿಂದ ಸಹಜವಾಗಿಯೇ ತಮಗೆ ಬೇಕಾಗಿರುವ ಮಾಹಿತಿಯನ್ನು ಅವರದ್ದೇ ಭಾಷೆಯಲ್ಲಿ ತಿಳಿದುಕೊಳ್ಳಬಹುದು ಎಂದರು.
ತಂತ್ರಜ್ಞಾನ ಲಭ್ಯವಾಗಿದೆ ಎಂದು ಹೆಮ್ಮೆ ಪಡುವ ದಿನಗಳು ಮುಕ್ತಾಯವಾದವು ಎಂದು ಹೇಳಿದ ನಾಡೆಲ್ಲಾ, ಈಗ ಏನಿದ್ದರೂ, ಅದು ಜಗತ್ತಿನ ಎಷ್ಟು ಮಂದಿಗೆ ಲಭ್ಯವಾಗಿದೆ ಎನ್ನುವುದೇ ಪ್ರಧಾನವಾಗುತ್ತದೆ ಎಂದರು.
ಕ್ಷಮೆ ಕೋರಿದ ಚಾಟ್‌ಜಿಪಿಟಿ:
ದಕ್ಷಿಣ ಭಾರತದಲ್ಲಿ ಬೆಳಗ್ಗಿನ ಅವಧಿಯಲ್ಲಿ ಹೆಚ್ಚು ಜನಪ್ರಿಯವಾಗಿರುವ ಬ್ರೇಕ್‌ಫಾಸ್ಟ್ ಯಾವುದು ಎಂದು ಕೃತಕ ಬುದ್ಧಿಮತ್ತೆ ಆಧಾರಿತ ಸಾಫ್ಟ್ವೇರ್ ಚಾಟ್‌ಜಿಪಿಟಿಯನ್ನು ನಾಡೆಲ್ಲಾ ಪ್ರಶ್ನಿಸಿದರು. ಉತ್ತರವಾಗಿ ಇಡ್ಲಿ, ವಡೆ, ದೋಸೆ ಎಂಬ ಉತ್ತರವನ್ನು ಅದು ನೀಡಿತು. ಅದರಲ್ಲಿ ಹೈದರಾಬಾದ್ ಬಿರಿಯಾನಿ ಕೂಡ ಇತ್ತು. ಅದಕ್ಕೆ ಪ್ರತಿಕ್ರಿಯೆ ನೀಡಿದ ಸತ್ಯ ಹೈದರಾಬಾದ್‌ನ ಬಿರಿಯಾನಿಯನ್ನು ಬ್ರೇಕ್‌ಫಾಸ್ಟ್‌ಗೆ ಬಿರಿಯಾನಿಯನ್ನು ಸೀಮಿತಗೊಳಿಸುವಂತಿಲ್ಲ ಎಂದು ಹೇಳಿದ್ದಕ್ಕೆ ಚಾಟ್ ಜಿಪಿಟಿ ಅವರ ಕ್ಷಮೆ ಕೋರಿತು.
ಪ್ರಧಾನಿ ಜತೆಗೆ ಭೇಟಿ:
ನಾಡೆಲ್ಲಾ ಅವರು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ “ತಂತ್ರಜ್ಞಾನ ಮತ್ತು ನಾವಿನ್ಯತೆಯ ಕ್ಷೇತ್ರದಲ್ಲಿ ನಮ್ಮ ದೇಶ ಯಾವತ್ತೂ ಹೊಸತನವನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ತಂತ್ರಜ್ಞಾನ ಆಧಾರಿತ ಅಭಿವೃದ್ಧಿಯೇ ಪ್ರಧಾನವಾಗಿ ಇರಲಿದೆ. ಈ ಹಂತದಲ್ಲಿ ಮೈಕ್ರೋಸಾಫ್ಟ್ ನ ಸಿಇಒ ಮತ್ತು ಅಧ್ಯಕ್ಷ ನಾಡೆಲ್ಲಾ ಜತೆಗಿನ ಭೇಟಿ ಸಂತೋಷ ತಂದಿದೆ’ ಎಂದು ಬರೆದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ
Atul Subhash Case: ಮೊಮ್ಮಗನನ್ನು ನೀಡದಿದ್ದರೆ ಆತ್ಮಹತ್ಯೆ; ಅತುಲ್ ತಂದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.