ದಿವ್ಯಾಂಗ ಮಗನಿಗಾಗಿ ಸೈಕಲ್‌ ಕದ್ದ ಇಕ್ಬಾಲ್ ಬರೆದ ಮನಕಲುಕುವ ಕ್ಷಮಾಪಣಾ ಪತ್ರ!


Team Udayavani, May 18, 2020, 6:09 AM IST

ದಿವ್ಯಾಂಗ ಮಗನಿಗಾಗಿ ಸೈಕಲ್‌ ಕದ್ದ ಇಕ್ಬಾಲ್ ಬರೆದ ಮನಕಲುಕುವ ಕ್ಷಮಾಪಣಾ ಪತ್ರ!

ಮಹಮ್ಮದ್ ಇಕ್ಬಾಲ್ ಖಾನ್ ಸೈಕಲ್ ಮಾಲಕರಿಗೆ ಬರೆದಿರುವ ಕ್ಷಮಾಪಣಾ ಪತ್ರ.

ಜೈಪುರ: ಕೋವಿಡ್ ತಂದಿಟ್ಟಿರುವ ಲಾಕ್ ಡೌನ್ ಸ್ಥಿತಿಯಿಂದ ಕಂಗೆಟ್ಟ ವಲಸೆ ಕಾರ್ಮಿಕನೊಬ್ಬ ತನ್ನ ದಿವ್ಯಾಂಗ ಮಗನೊಂದಿಗೆ ದೂರದ ತನ್ನ ಊರನ್ನು ಸೇರಲು ಸೈಕಲ್ ಒಂದನ್ನು ಕದ್ದು ಆ ಸೈಕಲ್ ಮಾಲಕರಿಗೆ ತಾನು ಸೈಕಲ್ ಕದಿಯಲೇಬೇಕಾಗಿ ಬಂದ ಪ್ರಮೇಯದ ಕುರಿತಾಗಿ ಪತ್ರವನ್ನೂ ಬರೆದು ಹೋಗಿರುವ ಘಟನೆಯೊಂದು ಇದೀಗ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದೆ.

ಹಾಗೂ ದೇಶಾದ್ಯಂತ ವಲಸೆ ಕಾರ್ಮಿಕರು ಈ ಅನಪೇಕ್ಷಿತ ಲಾಕ್ ಡೌನ್ ಪರಿಸ್ಥಿತಿಗೆ ಸಿಲುಕಿ ತಮ್ಮವರನ್ನು ಕರೆದುಕೊಂಡು ತಮ್ಮ ತಮ್ಮ ಸ್ವಂತ ಊರುಗಳಿಗೆ ತೆರಳಲು ಪಡುತ್ತಿರುವ ಸಂಕಷ್ಟಕ್ಕೆ ಹಿಡಿದ ಕೈಗನ್ನಡಿಯಂತಿದೆ ಈ ಘಟನೆ.

ಆತನ ಹೆಸರು ಮಹಮ್ಮದ್ ಇಕ್ಬಾಲ್ ಖಾನ್. ಈತ ಉತ್ತರ ಪ್ರದೇಶದ ಬರೇಲಿಯವನಾಗಿದ್ದು ರಾಜಸ್ಥಾನದ ಭರತ್ ಪುರ ಜಿಲ್ಲೆಯ ರಾರ್ಹಾ ಎಂಬ ಗ್ರಾಮದಲ್ಲಿ ವಲಸೆ ಕಾರ್ಮಿಕನಾಗಿ ದುಡಿಯುತ್ತಿದ್ದ. ಆದರೆ ಧುತ್ತೆಂದು ಎರಗಿದ ಕೋವಿಡ್ ಲಾಕ್ ಡೌನ್ ಪರಿಸ್ಥಿತಿ ಇಕ್ಬಾಲ್ ಮತ್ತು ಆತನನ್ನು ನಂಬಿಕೊಂಡವರ ಜೀವನವನ್ನು ಸಂಕಷ್ಟಕ್ಕೆ ದೂಡಿತ್ತು. ಸಾಲದ್ದಕ್ಕೆ ಇಕ್ಬಾಲ್ ಗೆ ದಿವ್ಯಾಂಗ ಮಗನೊಬ್ಬನಿದ್ದ.

ಇನ್ನು ಇಲ್ಲಿ ಜೀವನ ನಡೆಯದು ಎಂದು ಎಣಿಸಿದ ಇಕ್ಬಾಲ್ 250 ಕಿಲೋ ಮೀಟರ್ ದೂರದಲ್ಲಿದ್ದ ತನ್ನ ಸ್ವಂತ ಊರಿಗೆ ತೆರಳಲು ನಿಶ್ಚಯಿಸಿದ. ಆದರೆ ಆತನ ಬಳಿ ಊರಿಗೆ ಹಿಂತಿರುಗಲು ನಯಾಪೈಸೆ ಇರಲಿಲ್ಲ. ದಿವ್ಯಾಂಗ ಮಗನನ್ನು ಕರೆದುಕೊಂಡು ಉಳಿದವರಂತೆ ನಡೆದು ಸಾಗುವುದೂ ಸಾಧ್ಯವಿರಲಿಲ್ಲ.

ಈ ಕಾರಣದಿಂದಾಗಿ, ಭರತ್‌ಪುರದ ಸಾಹಿಬ್‌ ಸಿಂಗ್‌ ಎಂಬವರ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಸೈಕಲನ್ನು ಅನಿವಾರ್ಯವಾಗಿ ಕದಿಯುವ ಪರಿಸ್ಥಿತಿ ಇಕ್ಬಾಲ್ ಗೆ ಒದಗಿ ಬಂದಿತ್ತು. ಆದರೆ ಆತ ಹಾಗೇ ಸುಮ್ಮನೆ ಸೈಕಲನ್ನು ತೆಗೆದುಕೊಂಡು ಅಲ್ಲಿಂದ ತೆರಳಲಿಲ್ಲ.

ಬದಲಿಗೆ, ತಾನು ಸೈಕಲನ್ನು ಕದಿಯಲೇಬೇಕಾದ ಅನಿವಾರ್ಯ ಸ್ಥಿತಿಯನ್ನು ಆ ಸೈಕಲ್ ಮಾಲಕರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಪತ್ರವೊಂದನ್ನು ಬರೆದಿಟ್ಟು ಸೈಕಲ್ ನೊಂದಿಗೆ ಅಲ್ಲಿಂದ ಇಕ್ಬಾಲ್ ತೆರಳಿದ್ದಾನೆ. ಆತ ಬರೆದ ಪತ್ರ ಎಂತಹ ಕಲ್ಲು ಹೃದಯನ್ನೂ ಕರಗಿಸುವಂತಿದೆ!

‘ನಾನೊಬ್ಬ ಕಾರ್ಮಿಕ, ಮತ್ತು ನಿಯತ್ತಿರುವ ಕಾರ್ಮಿಕನಾಗಿದ್ದೇನೆ. ನಿಮ್ಮ ಪಾಲಿಗೆ ನಾನು ತಪ್ಪಿತಸ್ಥ, ಯಾಕೆಂದರೆ ನಾನು ನಿಮ್ಮ ಸೈಕಲನ್ನು ತೆಗೆದುಕೊಂಡು ಹೋಗುತ್ತಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ. ನನಗೆ ಬರೇಲಿಗೆ ಹೋಗಲೇಬೇಕಾಗಿದೆ. ಆದರೆ ಹಾಗೆ ಹೋಗಲು ನನ್ನ ಬಳಿಯಲ್ಲಿ ಯಾವುದೇ ಸೌಕರ್ಯವಿಲ್ಲ, ಮಾತ್ರವಲ್ಲದೇ ನನಗೊಬ್ಬ ದಿವ್ಯಾಂಗ ಮಗನೂ ಇದ್ದಾನೆ’ ಎಂದು ಚೀಟಿಯೊಂದರಲ್ಲಿ ಬರೆದು ಇಕ್ಬಾಲ್ ಸೈಕಲ್ ನೊಂದಿಗೆ ಅಲ್ಲಿಂದ ತೆರಳಿದ್ದಾನೆ.

ಮರುದಿನ ತನ್ನ ಮನೆಯ ವರಾಂಡವನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಸೈಕಲ್‌ ಮಾಲಕ ಸಾಹಿಬ್‌ ಸಿಂಗ್‌ ಅವರಿಗೆ ಇಕ್ಬಾಲ್ ಬರೆದಿಟ್ಟು ಹೋಗಿದ್ದ ಪತ್ರ ದೊರಕಿದೆ. ಈ ಪತ್ರವನ್ನು ಓದಿದ ಸಿಂಗ್ ಅವರ ಮನಸ್ಸು ಕರಗಿದೆ ಮತ್ತು ಅವರು ಈ ಸಂಬಂಧ ಪೊಲೀಸರಿಗೆ ಯಾವುದೇ ದೂರನ್ನು ನೀಡದಿರಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ರಾಜಸ್ಥಾನ ಹಾಗೂ ಉತ್ತರಪ್ರದೇಶದ ಗಡಿಗ್ರಾಮಗಳಲ್ಲಿ ಒಂದಾಗಿ ರಾರ್ಹಾ ಗುರುತಿಸಿಕೊಂಡಿದೆ.

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

1-kuu

ಕಾರ್ಗಿಲ್‌ ದಾಳಿ ಮಾಹಿತಿ ಕೊಟ್ಟ ಕುರಿಗಾಹಿ ಸಾವು: ಸೇನೆ ನಮನ

Surjewala

Pegasus spyware ಬಗ್ಗೆ ಸುಪ್ರೀಂಕೋರ್ಟ್‌ ತನಿಖೆ ನಡೆಸಲಿ: ಸುರ್ಜೇವಾಲಾ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.