ದಾಳಿಗೆ ಸ್ಟೀಲ್ ಬುಲೆಟ್ ಬಳಸುತ್ತಿರುವ ಉಗ್ರರು
Team Udayavani, Jun 21, 2019, 5:17 AM IST
ಶ್ರೀನಗರ:ಕಾಶ್ಮೀರದಲ್ಲಿ ಉಗ್ರರು ಸೇನೆ ಸಿಬಂದಿ ಮೇಲೆ ನಡೆಸುವ ದಾಳಿಗೆ ಚೀನದಲ್ಲಿ ತಯಾರಿಸಿದ ಸ್ಟೀಲ್ ಬುಲೆಟ್‌ಗಳನ್ನು ಬಳಸುತ್ತಿರುವುದು ಭಾರತೀಯ ಸೇನೆಯನ್ನು ಚಿಂತೆಗೀಡು ಮಾಡಿದೆ. ಈ ಸ್ಟೀಲ್ ಬುಲೆಟ್‌ಗಳ ಬುಲೆಟ್ ಪ್ರೂಫ್ ಅನ್ನೂ ಭೇದಿಸಿ ಯೋಧರಿಗೆ ಗಾಯ ಉಂಟು ಮಾಡುತ್ತದೆ. ಇದರಿಂದ ಸಾವು ನೋವಿನ ತೀವ್ರತೆ ಹೆಚ್ಚಾಗುತ್ತದೆ. ಇತ್ತೀಚೆಗೆ ಉಗ್ರ ದಾಳಿ ನಡೆದಾಗ ಉಗ್ರರಿಂದ ಎಕೆ 47 ರೈಫಲ್ ಹಾಗೂ ಸ್ಟೀಲ್ ಬುಲೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಈ ಬಗ್ಗೆ ನಡೆದ ತನಿಖೆಯಲ್ಲಿ ಪಾಕ್‌ನ ಐಎಸ್‌ಐ ಮತ್ತು ಉಗ್ರ ಸಂಘಟನೆ ಜೈಶ್ ಎ ಮೊಹಮ್ಮದ್ ತಮ್ಮ ಉಗ್ರರಿಗೆ ಸ್ಟೀಲ್ ಬುಲೆಟ್‌ಗಳನ್ನು ನೀಡುತ್ತಿದೆ. ಈ ಸ್ಟೀಲ್ ಬುಲೆಟ್‌ಗಳನ್ನು ಬಳಸುವ ಉದ್ದೇಶವೇ ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ಭೇದಿಸಿ ಗಾಯಗೊಳಿಸುವುದಾಗಿದೆ. ಸೇನಾ ಸಿಬ್ಬಂದಿ ಮತ್ತು ಪೊಲೀಸರನ್ನು ಟಾರ್ಗೆಟ್ ಮಾಡುವುದಕ್ಕೆಂದೇ ಇದನ್ನು ಬಳಸಲಾಗುತ್ತಿದೆ. ಪುಲ್ವಾಮಾ ಮತ್ತು ಟ್ರಾಲ್ನಲ್ಲಿ ನಡೆದ ದಾಳಿಗೂ ಸ್ಟೀಲ್ ಬುಲೆಟ್ ಬಳಸಲಾಗಿತ್ತು. ಜೈಶ್ ಉಗ್ರರು ಮೊದಲಿನಿಂದಲೂ ಈ ಸ್ಟೀಲ್ ಬುಲೆಟ್ ಬಳಸುತ್ತಿದ್ದಾರೆ. 2017ರ ಡಿಸೆಂಬರ್‌ನಲ್ಲಿ ಮೊದಲ ಬಾರಿಗೆ ಇದರ ಬಳಕೆ ಗಮನಕ್ಕೆ ಬಂದಿತ್ತು. ಸ್ಟೀಲ್ ಬುಲೆಟ್‌ಗಳಿಗೆ ಜಾಗತಿಕ ನಿಷೇಧ ವಿಧಿಸಲಾಗಿದ್ದರೂ, ಉಗ್ರರಿಗೆ ಇದು ಲಭ್ಯವಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
MUST WATCH
ಹೊಸ ಸೇರ್ಪಡೆ
Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.