ಪವಿತ್ರ ಗಂಗೆಯಲ್ಲಿ ಪುಣ್ಯಸ್ನಾನ ಮಾಡಿದ ಲಕ್ಷಾಂತರ ಭಕ್ತರು!
Team Udayavani, Feb 5, 2019, 12:30 AM IST
ಅಲಹಾಬಾದ್: ಸೋಮವಾರ ಮೌನಿ ಅಮಾವಾಸ್ಯೆಯಂದು ಕುಂಭ ಮೇಳದ ವೇಳೆ ಲಕ್ಷಾಂತರ ಭಕ್ತರು ಗಂಗಾಸ್ನಾನ ಮಾಡಿದ್ದಾರೆ. ಒಟ್ಟು 50 ದಿನಗಳ ಕುಂಭಮೇಳದಲ್ಲಿ ನಡೆಯಲಿರುವ ಪವಿತ್ರ ಸ್ನಾನಗಳ ಪೈಕಿ ಇದು ಎರಡನೆ ಅತ್ಯಂತ ಮಹತ್ವದ ಸ್ನಾನವಾಗಿದೆ. ಈ ಬಾರಿ ಸೋಮವಾರವೇ ಈ ಮಾಘ ಅಮಾವಾಸ್ಯೆ ಇರುವುದು ಇನ್ನಷ್ಟು ಮಹತ್ವ ಪಡೆದಿತ್ತು. ಕುಂಭ ಮೇಳ ನಡೆಯುತ್ತಿರುವ 32 ಸಾವಿರ ಹೆಕ್ಟೇರ್ ಪ್ರದೇಶ ಕುಂಭನಗರಿಗೆ ಸೋಮವಾರ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
13 ಅಖಾರಾದ ಸಾಧುಗಳಿಂದ ಪುಣ್ಯಸ್ನಾನ: ಹರ ಹರ ಗಂಗೆ, ಗಂಗಾ ಮೈಯಾ ಕಿ ಜೈ ಎಂಬ ಉದ್ಘೋಷಗಳು ಇಲ್ಲಿ ಮೊಳಗಿದವು. 13 ಅಖಾರಾದ ನಾಗಾ ಸಾಧುಗಳು ಮೌನಿ ಅಮಾವಾಸ್ಯೆಯಂದು ಪುಣ್ಯಸ್ನಾನ ಮಾಡಿದ್ದಾರೆ. ಪ್ರತಿ ಅಖಾರಕ್ಕೂ 30-40 ನಿಮಿಷಗಳನ್ನು ಮೀಸಲಿಡಲಾಗಿತ್ತು. ಸೋಮವಾರ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದ್ದುದರಿಂದ, ವಿಶೇಷ ಭದ್ರತೆ ಆಯೋಜಿಸಲಾಗಿತ್ತು.
ಕುಂಭಮೇಳದಲ್ಲಿ ಸೌಹಾರ್ದ: ಪ್ರಯಾಗ್‌ರಾಜ್‌ನಲ್ಲಿ ಕುಂಭ ಮೇಳದಂದು ಆಗಮಿಸುವ ಭಕ್ತರ ನೀರಿನ ದಾಹವನ್ನು ತಣಿಸಲು ಹಲವು ಮುಸ್ಲಿಮರೂ ನೆರವಾಗುತ್ತಿದ್ದುದು ವಿಶೇಷವಾಗಿದೆ. ಅದರಲ್ಲೂ ಮೌನಿ ಅಮಾವಾಸ್ಯೆಯಂದ ಸಂಗಮ ಘಾಟ್‌ನಲ್ಲಿ ಹಲವು ಮುಸ್ಲಿಮರು ಭಕ್ತರಿಗೆ ಶರಬತ್ ನೀಡುವ ಮೂಲಕ ನೀರಡಿಕೆ ಇಂಗಿಸುತ್ತಿದ್ದರು. ಇವರು ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿದ್ದು, ಉಚಿತವಾಗಿ ನೀರು ಹಾಗೂ ಶರಬತ್ ನೀಡುತ್ತಿದ್ದಾರೆ.
ಮೌನಿ ಅಮಾವಾಸ್ಯೆಯ ವಿಶೇಷತೆ ಏನು?
ಮೌನಿ ಅಮಾವಾಸ್ಯೆಯನ್ನು ಮಾಘ ಅಮಾವಾಸ್ಯೆ ಎಂದೂ ಕರೆಯಲಾಗುತ್ತದೆ. ಪ್ರತಿ ಅಮಾವಾಸ್ಯೆಗೂ ಒಂದೊಂದು ವಿಶೇಷತೆ ಯನ್ನು ಹಿಂದೂ ನಂಬಿಕೆ ಹೊಂದಿದ್ದು, ಈ ಅಮಾವಾಸ್ಯೆಯಂದು ಮೌನವಾಗಿದ್ದು, ಮನಸಿನ ಹಿಡಿತ ಸಾಧಿಸಬೇಕು ಎಂದು ಸೂಚಿಸಲಾಗಿದೆ. ಹೀಗಾಗಿ ಮೌನಿ ಅಮಾವಾಸ್ಯೆ ಯಂದು ಮೌನವಾಗಿರಬೇಕು ಎಂದು ಹೇಳಲಾಗುತ್ತದೆ. ಈ ಬಾರಿ ಸೋಮವಾರವೇ ಈ ಅಮಾವಾಸ್ಯೆ ಬಂದಿರುವುದರಿಂದ ಇದು ಇನ್ನಷ್ಟು ವಿಶೇಷತೆ ಒಳಗೊಂಡಿದೆ. ಸೋಮವಾರ ಸಾಮಾನ್ಯ ಅಮಾವಾಸ್ಯೆಯನ್ನು ಸೋಮವತಿ ಅಮಾವಾಸ್ಯೆ ಎಂದು ಕರೆಯಲಾ ಗುತ್ತದೆ. ಹೀಗಾಗಿ ಈ ಬಾರಿ ಕುಂಭ ಮೇಳದ ವೇಳೆ ಮಾಘ ಮಾಸದ ಅಮಾವಾಸ್ಯೆಯ ಜೊತೆಗೆ, ಸೋಮವತಿ ಅಮಾವಾಸ್ಯೆಯೂ ಸೇರಿ ಅತ್ಯಂತ ಪವಿತ್ರವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
India: ಹಿರಿಯ ನಾಗರಿಕರ ಭದ್ರತೆಗೆ ಶೀಘ್ರ ಹೊಸ ನೀತಿ: ಕೇಂದ್ರ
Madras HC: ಆಲಿಂಗನ, ಚುಂಬನ ಹರೆಯದ ಪ್ರೇಮಿಗಳಲ್ಲಿ ಸಾಮಾನ್ಯ
MUST WATCH
ಹೊಸ ಸೇರ್ಪಡೆ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.