ಸುಂದರಿ ಮಿಮಿ ಚಕ್ರವರ್ತಿ ಜಾದವ್‌ಪುರ್ ಮತದಾರರ ಮನ ಗೆಲ್ತಾರಾ?
1984 ರ ಮಮತಾ ಬ್ಯಾನರ್ಜಿ ಗೆಲುವು ನೆನಪಿಸಿ ಕೊಡುತ್ತಾರಾ ಟಿಎಂಸಿ ಅಭ್ಯರ್ಥಿ
Team Udayavani, May 18, 2019, 2:55 PM IST
ಜಾದವ್‌ಪುರ್: ಲೋಕಸಭಾ ಚುನಾವಣೆಯ ಜಿದ್ದಾಜಿದ್ದಿನ ಕಣವಾಗಿರುವ ಪಶ್ಚಿಮ ಬಂಗಾಳದ ಜಾದವ್‌ಪುರ್ ಲೋಕಸಭಾ ಕ್ಷೇತ್ರ ಈ ಬಾರಿ ಭಾರೀ ರಂಗು ಪಡೆದುಕೊಂಡಿದೆ. ಈ ಕ್ಷೇತ್ರದಲ್ಲಿ ಯಾವುದೇ ಪಕ್ಷಕ್ಕೆ ನಿರಂತರ 3 ಬಾರಿ ಮತದಾರ ಒಲಿಯಲಿಲ್ಲ ಎನ್ನುವುದು ವಿಶೇಷ.
30 ರ ಹರೆಯದ ಮಿಮಿ ಚಕ್ರವರ್ತಿ ಅವರು ಅಭ್ಯರ್ಥಿಯಾಗಿ ಹಳೆಯ ದಾಖಲೆಯನ್ನುಮುರಿದು ಟಿಎಂಸಿ ಗೆ ಸತತ 3 ನೇ ಜಯ ತಂದಿಡುತ್ತಾರೆಯೇ ಎನ್ನುವ ಪ್ರಶ್ನೆ ಮೂಡಿದೆ.
1984 ರಲ್ಲಿ ಪ್ರಭಾವಿ ಕಮ್ಯುನಿಷ್ಟ್ ರಾಜಕಾರಣಿ ಸೋಮನಾಥ ಚಟರ್ಜಿ ಅವರ 3 ನೇ ಬಾರಿಯ ಗೆಲುವಿಗೆ ಮಮತಾ ಬ್ಯಾನರ್ಜಿ ತಡೆಯೊಡ್ಡಿದ್ದರು.
ಕೃಷ್ಣಾ ಬೋಸ್ ಅವರು 1996 ರಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. ಆ ಬಳಿಕ ಟಿಎಂಸಿಗೆ ಸೇರಿದ್ದ ಅವರು 1998 ರಲ್ಲಿ ಮತ್ತು 1999 ರಲ್ಲಿ ಆಯ್ಕೆಯಾಗಿದ್ದರು.
2014 ರಲ್ಲಿ ಸುಗತಾ ಬೋಸ್ ಅವರು ಟಿಎಂಸಿಯಿಂದ ಜಯಗಳಿಸಿದ್ದರು. ಹಾರ್ವರ್ಡ್ ವಿವಿಯ ಪ್ರಾಧ್ಯಾಪಕರಾಗಿರುವ ಬೋಸ್ ಅವರ ಸ್ಪರ್ಧೆಗೆ ಈ ಬಾರಿ ವಿವಿ ಅನುಮತಿ ನೀಡಿಲ್ಲ. ಹಾಗಾಗಿ ಮಿಮಿ ಅವರಿಗೆ ಟಿಎಂಸಿ ಟಿಕೆಟ್ ನೀಡಿದೆ.
ಬಿಜೆಪಿ ಅಭ್ಯರ್ಥಿಯಾಗಿ ಬೋಲ್‌ಪುರ್ ಕ್ಷೇತ್ರದಲ್ಲಿ ಸಂಸದನಾಗಿ , ಟಿಎಂಸಿ ತೊರೆದು ಬಿಜೆಪಿ ಸೇರ್ಪಡೆಯಾಗಿರುವ ಅನುಪಮ್ ಹಜ್ರಾ ಅವರು ಕಣದಲ್ಲಿದ್ದಾರೆ
ಸಿಪಿಐ(ಎಂ) ಅಭ್ಯರ್ಥಿಯಾಗಿ ಕೋಲ್ಕತಾದ ಮಾಜಿ ಮೇಯರ್, ಖ್ಯಾತ ವಕೀಲ ಬಿಕಾಶ್ ರಂಜನ್ ಭಟ್ಟಾಚಾರ್ಯ ಅವರು ಕಣದಲ್ಲಿದ್ದಾರೆ.
ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ತ್ರಿಕೋನ ಸ್ಪರ್ಧೆ ಎದುರಾಗಿದ್ದು ಮತದಾರ ಯಾರಿಗೆ ಒಲಿಯುತ್ತಾನೆ ಎನ್ನುವ ಕುತೂಹಲ ಮೂಡಿದೆ.
ಭರ್ಜರಿ ಪ್ರಚಾರ, ರೋಡ್ ಶೋ ಮತ್ತು ಮಾಧ್ಯಮಗಳ ಸುದ್ದಿಯ ವಿಚಾರದಲ್ಲಿ ಗಮನಿಸುವುದಾದರೆ ಮಿಮಿ ಅವರೇ ಒಂದು ಹೆಜ್ಜೆ ಮುಂದಿದ್ದಾರೆ.
ಕ್ಷೇತ್ರದಲ್ಲಿ ನಾಳೆ ಮೇ 19 ರಂದು ಅಂತಿಮ ಹಂತದ ಮತದಾನ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.