ಶಾಲಾ ಮಕ್ಕಳಿಗಾಗಿ “ಮಿನಿ ಬಾಕ್ಸ್’ ಯೋಜನೆ; ಏನೇನು ಇರಲಿದೆ ಬಾಕ್ಸ್‌ನಲ್ಲಿ?
Team Udayavani, Dec 22, 2022, 7:25 AM IST
ಹೊಸದಿಲ್ಲಿ: ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ಹೋಗಲಾಡಿಸಲು ದಿಲ್ಲಿ ಸರಕಾರ “ಮಿನಿ ಬಾಕ್ಸ್’ ಎಂಬ ವಿನೂತನ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ.
ಶಿಕ್ಷಣ ನಿರ್ದೇಶನಾಲಯದ ಸುತ್ತೋಲೆಯ ಪ್ರಕಾರ ಎಲ್ಲ ಶಾಲೆ ಗಳ ವೇಳಾಪಟ್ಟಿಯಲ್ಲಿ ಮಧ್ಯಾಹ್ನ ಊಟದ ಎರಡೂವರೆ ಗಂಟೆಗೂ ಮುನ್ನ, 10 ನಿಮಿಷದ ಸ್ನ್ಯಾಕ್ ಬ್ರೇಕ್ ಇರಬೇಕು.
ಮಿನಿ ಬಾಕ್ಸ್‌ನಲ್ಲಿ ಏನಿರಲಿದೆ?
ಪ್ರತೀ ದಿನ ಮೂರು ಆಹಾರ ಪದಾರ್ಥಗಳ ಆಯ್ಕೆಯನ್ನು ಮಿನಿ ಬಾಕ್ಸ್‌ಗೆ ನೀಡಲಾಗಿದೆ. ಹಣ್ಣು, ಸಲಾಡ್, ಹುರಿದ ಕಾಳು, ಮೊಳಕೆ ಕಾಳು ಇತ್ಯಾದಿ ಪದಾರ್ಥಗಳನ್ನು ಮಿನಿ ಬಾಕ್ಸ್ ಕಡ್ಡಾಯವಾಗಿ ಹೊಂದಿರಬೇಕು. ಪ್ರತೀ ವಾರದ ಆಹಾರದ ಪಟ್ಟಿಯನ್ನು ತಯಾರಿಸಿ, ಶಾಲೆಯ ಎಲ್ಲ ತರಗತಿಗಳಲ್ಲೂ ಅದನ್ನು ಅಳವಡಿಸಬೇಕು.
ವಾರದ ಆಹಾರ ಪಟ್ಟಿಯಲ್ಲಿರುವ ಪದಾರ್ಥಗಳು ದುಬಾರಿ ಯಾಗದ ರೀತಿಯಲ್ಲಿ ಯೋಜನೆಯನ್ನು ತಯಾರಿಸಬೇಕು. ಜತೆಗೆ ಮಕ್ಕಳು, ಪಟ್ಟಿಯಲ್ಲಿರುವ ಒಂದು ಪದಾರ್ಥವನ್ನಾದರೂ ತರು ವಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನಾಲಯ ತಿಳಿಸಿದೆ.
ಶಾಲಾ ಮುಖ್ಯಸ್ಥರು ಹಾಗೂ ಶಾಲೆಯ ಗೃಹವಿಜ್ಞಾನ ಶಿಕ್ಷಕರು ಯೋಜನೆಯು ಪರಿಣಾಮಕಾರಿಯಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕು. ಜತೆಗೆ ಸಂಜೆ ಕಾರ್ಯಾಚರಿಸುವ ಶಾಲೆಗಳಲ್ಲಿ ಮಿನಿ ಸ್ನ್ಯಾಕ್ಸ್‌ನಲ್ಲಿ ಹೆಚ್ಚು ಪೋಷಕಾಂಶವಿರುವ ಪದಾರ್ಥ ಗಳಿರು ವಂತೆ ಯೋಜನೆ ರೂಪಿಸಬೇಕು ಎಂದು ಸೂಚಿಸಿದೆ.
ಪೋಷಕರಿಗೆ ಸಮಾಲೋಚನೆ: ಉತ್ತಮ, ಪೌಷ್ಟಿಕಯುಕ್ತ ಆಹಾರ ಸೇವನೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ನಡು ವಿನ ಪ್ರಾಮುಖ್ಯದ ಅರಿವು ಮೂಡಿಸಲು, ಶಾಲೆಗಳಲ್ಲಿ ಗೃಹ ವಿಜ್ಞಾನ ಶಿಕ್ಷಕರ ನೇತೃತ್ವದಲ್ಲಿ ತರಗತಿವಾರು ವಿದ್ಯಾರ್ಥಿಗಳ ಪೋಷಕರಿಗೆ ಸಮಾಲೋಚನೆ ನಡೆಸಬೇಕು. ಈ ಅವಧಿಯಲ್ಲಿ ಕಡಿಮೆ ವೆಚ್ಚದಲ್ಲಿ ತಯಾರಿಸಬಹುದಾದ ಅತೀ ಹೆಚ್ಚು ಪೌಷ್ಟಿಕಾಂಶ ವಿರುವ ಆಹಾರ ಪದಾರ್ಥಗಳ ಬಗ್ಗೆ ಪೋಷಕರಲ್ಲಿ ಅರಿವು ಮೂಡಿ ಸಬೇಕು. ಅನಾರೋಗ್ಯದ ಹಿನ್ನೆಲೆಯಲ್ಲಿ ಶಾಲೆಗೆ ಗೈರಾಗುವ ವಿದ್ಯಾರ್ಥಿಗಳ ಹಾಜರಾತಿಯನ್ನು ಹೆಚ್ಚಿಸುವಲ್ಲಿ, ವಿದ್ಯಾರ್ಥಿಗಳ ಪರಿಪೂರ್ಣ ಬೆಳವಣಿಗೆಗೆ ಈ ಯೋಜನೆ ಉತ್ತೇಜನ ನೀಡಲಿದೆ ಎಂದು ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.