ಬಡವರಿಗೆ ಕನಿಷ್ಠ ಆದಾಯ: ರಾಹುಲ್ ಭರವಸೆ
Team Udayavani, Jan 29, 2019, 8:02 AM IST
ರಾಯ್‌ಪುರ: ಲೋಕಸಭೆ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬಂದರೆ ದೇಶದ ಪ್ರತೀ ಬಡವನಿಗೂ ಕನಿಷ್ಠಆದಾಯ ನೀಡುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಘೋಷಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಎರಡು ದೇಶಗಳನ್ನು ಸೃಷ್ಟಿಸಿದ್ದಾರೆ ಎಂದು ಆರೋಪಿಸಿರುವ ಅವರು, ರಫೇಲ್ ಸ್ಕ್ಯಾಮ್, ಅನಿಲ್ ಅಂಬಾನಿ, ನೀರವ್ ಮೋದಿ, ವಿಜಯ್ ಮಲ್ಯ, ಮೆಹುಲ್ ಚೋಕ್ಸಿಯದ್ದು ಒಂದು ಭಾರತವಾದರೆ, ಇನ್ನೊಂದು ಬಡವರ ಭಾರತ ಎಂದಿದ್ದಾರೆ.ರಾಯ್‌ಪುರದಲ್ಲಿ ಸೋಮವಾರ ನಡೆದ ಕಿಸಾನ್ ಆಭಾರ್ ಸಮ್ಮೇಳನದಲ್ಲಿ ಮಾತನಾಡಿದ ಅವರು, 15 ವರ್ಷಗಳ ಅನಂತರ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ನೀಡಿದ್ದಕ್ಕೆ ಜನರನ್ನು ಅಭಿನಂದಿಸಿದರು.
ಕಾಂಗ್ರೆಸ್ ನೇತೃತ್ವದ ಸರಕಾರವು ಅಧಿಕಾರಕ್ಕೆ ಬಂದರೆ ಕನಿಷ್ಠ ಆದಾಯ ಗ್ಯಾರಂಟಿ ಒದಗಿಸಲಿದ್ದು, ಇದರ ಸೌಲಭ್ಯ ಪ್ರತಿ ಬಡವನಿಗೂ ಸಿಗಲಿದೆ. ಇದು ಜಾರಿಗೆ ಬಂದರೆ ದೇಶದಲ್ಲಿ ಹಸಿದವರು ಹಾಗೂ ಬಡವರು ಇರುವುದೇ ಇಲ್ಲ ಎಂದಿದ್ದಾರೆ. ಕೇಂದ್ರ ಸರಕಾರವು ಸಾರ್ವತ್ರಿಕ ಆದಾಯ ಘೋಷಣೆ ಮಾಡುವ ಸಾಧ್ಯತೆ ಕುರಿತು ಸುದ್ದಿಗಳು ಬಂದ ಬೆನ್ನಲ್ಲೇ ರಾಹುಲ್‌ರಿಂದ ಈ ಘೋಷಣೆ ಹೊರಬಿದ್ದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಪತ್ನಿಯನ್ನು ಕೊಂದು ದೇಹವನ್ನು ತುಂಡರಿಸಿ ಕುಕ್ಕರ್ ನಲ್ಲಿ ಬೇಯಿಸಿದ ನಿವೃತ್ತ ಯೋಧ
Mumbai: ಸೈಫ್ ಮೇಲೆ ಹಲ್ಲೆಗೆ ಬಳಸಿದ್ದ ಚಾಕುವಿನ ಮೂರನೇ ಭಾಗ ಬಾಂದ್ರಾ ಕೆರೆ ಬಳಿ ಪತ್ತೆ
Holy Dip: ಮಹಾಕುಂಭದಲ್ಲಿ ಸಿಎಂ ಯೋಗಿ ಸಂಪುಟ ಸದಸ್ಯರ ಪವಿತ್ರ ಸ್ನಾನ
Crew Module: ಗಗನಯಾನಕ್ಕೆ ಮಾನವರನ್ನು ಕರೆದೊಯ್ಯುವ ನೌಕೆ ಶ್ರೀಹರಿಕೋಟಾಕ್ಕೆ ರವಾನೆ
Mosque Survey: ಮಥುರಾ ಮಸೀದಿ ಸಮೀಕ್ಷೆ… ಸುಪ್ರೀಂ ತಡೆಯಾಜ್ಞೆ ಮುಂದುವರಿಕೆ