ನಾಲ್ಕರ ಬಾಲಕಿ ಮೇಲೆ 14ರ ಬಾಲಕನಿಂದ ಅತ್ಯಾಚಾರ, ಪರಾರಿ
Team Udayavani, Aug 16, 2018, 5:32 PM IST
ಉಜ್ಜೆ„ನ್, ಮಧ್ಯ ಪ್ರದೇಶ : ಮಧ್ಯಪ್ರದೇಶದ ಉಜ್ಜೆ„ನ್ ಜಿಲ್ಲೆಯ ಜಲ್ವಾ ಗ್ರಾಮದಲ್ಲಿ ನೆರೆ ಮನೆಯ ನಾಲ್ಕು ವರ್ಷ ಪ್ರಾಯದ ಬಾಲಕಿಯನ್ನು ಮನೆಯಲ್ಲಿ ಯಾರೂ ಇಲ್ಲದ ವೇಳೆ ರೇಪ್ ಮಾಡಿದ 14 ವರ್ಷ ಪ್ರಾಯದ ಬಾಲಕ ಪರಾರಿಯಾಗಿದ್ದು ಆತನಿಗಾಗಿ ಪೊಲೀಸರೀಗ ಹುಡುಕಾಡುತ್ತಿದ್ದಾರೆ.
ಬಾಲಕಿಯ ಮನೆಗೆ ಬಾಲಕನು ಟಿವಿ ನೋಡುವುದಕ್ಕಾಗಿ ನಿತ್ಯವೂ ಹೋಗುತ್ತಿದ್ದ. ನಿನ್ನೆ ಬುಧವಾರ ಸಂಜೆ ಬಾಲಕಿಯ ಮನೆಯಲ್ಲಿ ಯಾರೂ ಇರಲಿಲ್ಲ. ಅದೇ ಸಂದರ್ಭದಲ್ಲಿ ಬಾಲಕನು ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಪಲಾಯನ ಮಾಡಿದ.
ಬಾಲಕಿಯು ತನ್ನ ಮೇಲಾದ ಲೈಂಗಿಕ ದೌರ್ಜನ್ಯವನ್ನು ಹೆತವರಿಗೆ ತಿಳಿಸಿದಳು; ಕೂಡಲೇ ಅವರು ಪೊಲೀಸರಿಗೆ ದೂರು ನೀಡಿದರು. ಅಂತೆಯೇ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು ಪರಾರಿಯಾಗಿರುವ ಆರೋಪಿ ಬಾಲಕನಿಗಾಗಿ ಹುಡುಕಾಡುತ್ತಿದ್ದಾರೆ ಎಂದು ಘಾತಿಯಾ ಠಾಣಾಧಿಕಾರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.