ಸೋತರೂ 50 ವರ್ಷ ಹಿಂದಿನ ದಾಖಲೆ ಮುರಿದ ಮೀರಾ
Team Udayavani, Jul 22, 2017, 7:50 AM IST
ಹೊಸದಿಲ್ಲಿ: ದೇಶದ 14ನೇ ರಾಷ್ಟ್ರಪತಿ ಆಯ್ಕೆಗೆ ನಡೆದ ಚುನಾವಣೆಯಲ್ಲಿ ವಿಪಕ್ಷಗಳ ಅಭ್ಯರ್ಥಿ ಮೀರಾ ಕುಮಾರ್ ಅವರು ಎನ್‌ಡಿಎ ಅಭ್ಯರ್ಥಿ ಕೋವಿಂದ್ ಅವರ ವಿರುದ್ಧ ಸೋತಿರುವುದೇನೋ ನಿಜ.
ಆದರೆ ಪರಾಜಿತ ಅಭ್ಯ ರ್ಥಿಗಳ ಮತ ಗಳಿಕೆಗೆ ಸಂಬಂಧಿಸಿ ಮೀರಾ ಅವರು 50 ವರ್ಷಗಳ ದಾಖಲೆ ಮುರಿದಿದ್ದಾರೆ. ರಾಷ್ಟ್ರಪತಿ ಚುನಾವಣೆ ಇತಿಹಾಸದಲ್ಲೇ ಅತಿ ಹೆಚ್ಚು ಮತಗಳನ್ನು ಪಡೆದ ಪರಾಜಿತ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಮೀರಾ ಪಾತ್ರರಾಗಿದ್ದಾರೆ. 10.69 ಲಕ್ಷ ಮತಗಳ ಪೈಕಿ ಮೀರಾ 3.67 ಲಕ್ಷ ಮತ ಪಡೆದಿ ದ್ದಾರೆ. ಇದು ಪರಾಜಿತ ರಾಷ್ಟ್ರಪತಿ ಅಭ್ಯರ್ಥಿಯೊಬ್ಬರು ಈವರೆಗೆ ಪಡೆದ ಅತಿ ಹೆಚ್ಚು ಮತಗಳಾಗಿವೆ. ಹಿಂದೆ 1967ರ ರಾಷ್ಟ್ರಪತಿ ಚುನಾವಣೆ ಯಲ್ಲಿ ಜಾಕಿರ್ ಹುಸೇನ್ ವಿರುದ್ಧ ಸ್ಪರ್ಧಿಸಿದ್ದ ನ್ಯಾ.ಕೆ. ಸುಬ್ಬರಾವ್ 3.63 ಲಕ್ಷ ಮತ ಪಡೆದದ್ದೇ ಈವರೆಗಿನ ಅಧಿಕ ಮತ ಗಳಿಕೆಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್ಶೂಟರ್ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.