ಮಿಷನ್ ಶಕ್ತಿ ಭಾಷಣ: ಮೋದಿಗೆ ಕ್ಲೀನ್‌ಚಿಟ್
Team Udayavani, Mar 30, 2019, 6:00 AM IST
ಹೊಸದಿಲ್ಲಿ: ಉಪಗ್ರಹ ನಿಗ್ರಹ ತಂತ್ರಜ್ಞಾನ “ಮಿಷನ್ ಶಕ್ತಿ’ ಪ್ರಕಟನೆಗೆ ಸಂಬಂಧಿ ಪ್ರಕರಣದಲ್ಲಿ ಪ್ರಧಾನಿ ಮೋದಿಯವರಿಗೆ ಕೇಂದ್ರ ಚುನಾವಣ ಆಯೋಗ ಕ್ಲೀನ್ ಚಿಟ್ ನೀಡಿದೆ. ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ನೀಡಿದ್ದ ದೂರಿನನ್ವಯ ಸಮಿತಿಯೊಂದನ್ನು ರಚಿಸಿದ್ದ ಆಯೋಗ ತನಿಖೆ ನಡೆಸಿದೆ. ಈ ಸಮಿತಿಯು ಪ್ರಧಾನಿ ಮೋದಿ ನೀತಿ ಸಂಹಿತೆ ಉಲ್ಲಂಘನೆ ಮಾಡಿಲ್ಲ ಎಂಬ ತೀರ್ಮಾನಕ್ಕೆ ಬಂದಿದೆ.
ಸರಕಾರಿ ದೂರದರ್ಶನದಲ್ಲೂ ಮೋದಿ ಭಾಷಣ ನೇರಪ್ರಸಾರವಾಗಿತ್ತು. ಹೀಗಾಗಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂಬ ಯೆಚೂರಿ ಅವರ ಆಕ್ಷೇಪಣೆಗೆ ಸಮಿತಿ ಉತ್ತರಿಸಿದೆ. ಈ ಬಗ್ಗೆ ಡಿಡಿ ನ್ಯೂಸ್‌ನಿಂದ ಸ್ಪಷ್ಟೀಕರಣ ಕೇಳಿದಾಗ, ಅದು ಖಾಸಗಿ ಸುದ್ದಿಸಂಸ್ಥೆ ಎಎನ್‌ಐನಿಂದ ದೃಶ್ಯಾವಳಿ ಪಡೆದಿದ್ದಾಗಿ ತಿಳಿಸಿದೆ. ಇಲ್ಲೂ ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲ ಎಂದು ಸಮಿತಿ ಉತ್ತರಿಸಿದೆ.
ಉಪಗ್ರಹ ನಿಗ್ರಹ ತಂತ್ರಜ್ಞಾನವನ್ನು ಡಿಆರ್‌ಡಿಒ ವಿಜ್ಞಾನಿಗಳು ಬುಧವಾರ ಯಶಸ್ವಿಯಾಗಿ ಪರೀಕ್ಷಿಸಿದ್ದರು. ಆ ಮೂಲಕ ಭಾರತ, ಈ ತಂತ್ರಜ್ಞಾನವುಳ್ಳ 4ನೇ ರಾಷ್ಟ್ರವಾಗಿತ್ತು. ಈ ಯಶಸ್ಸನ್ನು ಬುಧವಾರ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿ ಘೋಷಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ
MUST WATCH
ಹೊಸ ಸೇರ್ಪಡೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.