ನೀರು, ಆಹಾರ ಬೇಡುತ್ತಿದ್ದ ಎಸ್ಪಿಜಿ ಕಮಾಂಡೋ ಪತ್ತೆ
Team Udayavani, Sep 7, 2017, 11:27 AM IST
ಹೊಸದಿಲ್ಲಿ : ಕಳೆದ ಸೆ.1ರಂದು ನಾಪತ್ತೆಯಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಿವಾಸದ ಎಸ್ಪಿಜಿ ಕಮಾಂಡೋ, 31ರ ಹರೆಯದ ರಾಕೇಶ್ ಕುಮಾರ್ ಮಧ್ಯ ದಿಲ್ಲಿಯ ರಸ್ತೆಯಲ್ಲಿ ಅಲೆದಾಡುತ್ತಿದ್ದುದು ಪತ್ತೆಯಾಗಿದೆ.
ದಿಲ್ಲಿಯ ತಿಲಕ್ ಮಾರ್ಗ್ ಸಮೀಪ ನೀರು ಮತ್ತು ಆಹಾರಕ್ಕಾಗಿ ಬೇಡುತ್ತಿದ್ದ ಆತನ ಬಳಿ ಎಸ್ಪಿಜಿ ಐಡಿ ಕಾರ್ಡ್ ಇದ್ದುದನ್ನು ಕಂಡ ಯಾರೋ ದಾರಿ ಹೋಕರು ಕಂಟ್ರೋಲ್ ರೂಮಿಗೆ ಫೋನ್ ಮಾಡಿದರು.
ಒಡನೆಯೇ ಧಾವಿಸಿ ಬಂದ ಭದ್ರತಾ ಸಿಬಂದಿಗಳು ಆತನನ್ನು ಆಸ್ಪತ್ರೆಗೆ ಒಯ್ದು ಅಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಆತನನ್ನು ಆತನ ಕುಟುಂಬದವರಿಗೆ ಒಪ್ಪಿಸಿದರು ಎಂದು ಎನ್ಡಿಟಿವಿ ವರದಿ ಮಾಡಿದೆ.
ಎಸ್ಪಿಜಿ ಕಮಾಂಡೋ ರಾಕೇಶ್ ಕುಮಾರ್ಗೆ ನಾಲ್ಕು ಲಕ್ಷ ರೂ. ಸಾಲದ ಹೊರೆ ಇದ್ದು ಅದರಿಂದ ಆತ ಮಾನಸಿಕ ಖನ್ನತೆಗೆ ಗುರಿಯಾಗಿದ್ದ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ 10 ಜನಪಥ್ ನಿವಾಸದ ಭದ್ರತೆಗೆ ನಿಯೋಜಿಸಲ್ಪಟ್ಟಿದ್ದ ಆತ ಸೆ.1ರಂದು ನಾಪತ್ತೆಯಾಗಿದ್ದಾಗ ತನ್ನ ಸರ್ವಿಸ್ ರಿವಾಲ್ವರ್ ಮತ್ತು ಮೊಬೈಲ್ ಫೋನನ್ನು ಭದ್ರತಾ ಕೊಠಡಿಯಲ್ಲೇ ಬಿಟ್ಟು ಹೋಗಿದ್ದ. ಆ ದಿನದಿಂದ ಈ ವರೆಗೆ ಆತ ದಿಲ್ಲಿಯ ದ್ವಾರಕಾ ದಲ್ಲಿನ ತನ್ನ ಮನೆಗೂ ಹೋಗಿರಲಿಲ್ಲ ಎಂದು ವರದಿ ತಿಳಿಸಿದೆ.
ತನ್ನ ಮಗ ನಾಪತ್ತೆಯಾಗಿದ್ದಾನೆ ಎಂದು ರಾಕೇಶ್ ಕುಮಾರ್ ನ ತಂದೆ ಪೊಲೀಸರಲ್ಲಿ ಎಫ್ಐಆರ್ ದಾಖಲಿಸಿದ್ದರು.
ಹೊಸದಿಲ್ಲಿ, ಎಸ್ಪಿಜಿ ಕಮಾಂಡೋ ಪತ್ತೆ, ಅನ್ನ, ನೀರಿಗಾಗಿ ಭಿಕ್ಷೆ
ಹೊಸದಿಲ್ಲಿ ; ಕಳೆದ ಸೆ.1ರಂದು ನಾಪತ್ತೆಯಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಿವಾಸದ ಎಸ್ಪಿಜಿ ಕಮಾಂಡೋ, 31ರ ಹರೆಯದ ರಾಕೇಶ್ ಕುಮಾರ್ ಮಧ್ಯ ದಿಲ್ಲಿಯ ರಸ್ತೆಯಲ್ಲಿ ಅಲೆದಾಡುತ್ತಿದ್ದುದು ಪತ್ತೆಯಾಗಿದೆ.
ದಿಲ್ಲಿಯ ತಿಲಕ್ ಮಾರ್ಗ್ ಸಮೀಪ ನೀರು ಮತ್ತು ಆಹಾರಕ್ಕಾಗಿ ಬೇಡುತ್ತಿದ್ದ ಆತನ ಬಳಿ ಎಸ್ಪಿಜಿ ಐಡಿ ಕಾರ್ಡ್ ಇದ್ದುದನ್ನು ಕಂಡ ಯಾರೋ ದಾರಿ ಹೋಕರು ಕಂಟ್ರೋಲ್ ರೂಮಿಗೆ ಫೋನ್ ಮಾಡಿದರು.
ಒಡನೆಯೇ ಧಾವಿಸಿ ಬಂದ ಭದ್ರತಾ ಸಿಬಂದಿಗಳು ಆತನನ್ನು ಆಸ್ಪತ್ರೆಗೆ ಒಯ್ದು ಅಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಆತನನ್ನು ಆತನ ಕುಟುಂಬದವರಿಗೆ ಒಪ್ಪಿಸಿದರು ಎಂದು ಎನ್ಡಿಟಿವಿ ವರದಿ ಮಾಡಿದೆ.
ಎಸ್ಪಿಜಿ ಕಮಾಂಡೋ ರಾಕೇಶ್ ಕುಮಾರ್ಗೆ ನಾಲ್ಕು ಲಕ್ಷ ರೂ. ಸಾಲದ ಹೊರೆ ಇದ್ದು ಅದರಿಂದ ಆತ ಮಾನಸಿಕ ಖನ್ನತೆಗೆ ಗುರಿಯಾಗಿದ್ದ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ 10 ಜನಪಥ್ ನಿವಾಸದ ಭದ್ರತೆಗೆ ನಿಯೋಜಿಸಲ್ಪಟ್ಟಿದ್ದ ಆತ ಸೆ.1ರಂದು ನಾಪತ್ತೆಯಾಗಿದ್ದಾಗ ತನ್ನ ಸರ್ವಿಸ್ ರಿವಾಲ್ವರ್ ಮತ್ತು ಮೊಬೈಲ್ ಫೋನನ್ನು ಭದ್ರತಾ ಕೊಠಡಿಯಲ್ಲೇ ಬಿಟ್ಟು ಹೋಗಿದ್ದ. ಆ ದಿನದಿಂದ ಈ ವರೆಗೆ ಆತ ದಿಲ್ಲಿಯ ದ್ವಾರಕಾ ದಲ್ಲಿನ ತನ್ನ ಮನೆಗೂ ಹೋಗಿರಲಿಲ್ಲ ಎಂದು ವರದಿ ತಿಳಿಸಿದೆ.
ತನ್ನ ಮಗ ನಾಪತ್ತೆಯಾಗಿದ್ದಾನೆ ಎಂದು ರಾಕೇಶ್ ಕುಮಾರ್ ನ ತಂದೆ ಪೊಲೀಸರಲ್ಲಿ ಎಫ್ಐಆರ್ ದಾಖಲಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ
Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.