2ವರ್ಷದಿಂದ ನಾಪತ್ತೆ-ತೆಲಂಗಾಣದ ಸಾಫ್ಟ್ ವೇರ್ ಇಂಜಿನಿಯರ್ Pak ಕೈಗೆ ಸಿಕ್ಕಿ ಬಿದ್ದದ್ದು ಹೇಗೆ

Team Udayavani, Nov 20, 2019, 4:41 PM IST

Software-enginear

ಹೈದರಾಬಾದ್: ಕಳೆದ ಎರಡು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ತೆಲಂಗಾಣ ಮೂಲದ ಸಾಫ್ಟ್ ವೇರ್ ಇಂಜಿನಿಯರ್ ಪ್ರಶಾಂತ್ ವೈನ್ದಂ ಇದೀಗ ಪಾಕಿಸ್ತಾನದ ಪೊಲೀಸರ ವಶದಲ್ಲಿ ಇದ್ದಿರುವ ವಿಷಯ ಬೆಳಕಿಗೆ ಬಂದಿದೆ ಎಂದು ವರದಿ ತಿಳಿಸಿದೆ.

ತೆಲಂಗಾಣದ ಸಾಫ್ಟ್ ವೇರ್ ಇಂಜಿನಿಯರ್ ಪ್ರಶಾಂತ್ ಕಳೆದ 31 ತಿಂಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದರು. ಪ್ರಶಾಂತ್ ಪೋಷಕರ ಮಾಹಿತಿ ಪ್ರಕಾರ, ತಮ್ಮ ಮಗ ಪ್ರಶಾಂತ್ ಜೀವಂತವಾಗಿರುವುದನ್ನು ಕಂಡಿದ್ದು, ಆತ ಬಹಾವಾಲ್ಪುರ್ ನ ಪಾಕಿಸ್ತಾನದ ಪೊಲೀಸರ ವಶದಲ್ಲಿ ಇದ್ದಿರುವುದಾಗಿ ತಿಳಿಸಿದ್ದಾರೆ.

ತಮ್ಮ ಮಗನಿಗೆ ದೇಶ ಸುತ್ತುವ ಗೀಳು ಇದೆಯೇ ಹೊರತು ಗೂಢಚಾರನಲ್ಲ ಎಂದು ಪ್ರಶಾಂತ್ ಪೋಷಕರು ತಿಳಿಸಿದ್ದಾರೆ. ಇದೀಗ ಪಾಕಿಸ್ತಾನದ ವಶದಲ್ಲಿರುವ ತಮ್ಮ ಮಗನನ್ನು ವಿದೇಶಾಂಗ ಸಚಿವಾಲಯದ ನೆರವಿನೊಂದಿಗೆ ಭೇಟಿಯಾಗುವ ನಿರೀಕ್ಷೆ ಹೊಂದಿರುವುದಾಗಿ ತಿಳಿಸಿದ್ದಾರೆ.

ಚೋಲಿಸ್ತಾನ್ ಮರುಭೂಮಿಯಲ್ಲಿ ಪ್ರಶಾಂತ್ ಹಾಗೂ ಮಧ್ಯಪ್ರದೇಶದ ವ್ಯಕ್ತಿಯೊಬ್ಬನ ಜತೆ ಪಾಕಿಸ್ತಾನದ ಪೊಲೀಸರು ಬಂಧಿಸಿದ್ದರು. 2010ರಲ್ಲಿ ವಿಶಾಖಪಟ್ಟಣದಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್ ಪೂರ್ಣಗೊಳಿಸಿದ್ದ. ನಂತರ ಬೆಂಗಳೂರಿನಲ್ಲಿ ಚೀನಾ ಮೂಲದ ಹುವಾಯಿ ಟೆಕ್ನಾಲಜಿ ಎಂಎನ್ ಸಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂದು ವರದಿ ತಿಳಿಸಿದೆ.

2016ರಲ್ಲಿ ಪ್ರಶಾಂತ್ ಹೈದರಬಾದ್ ನಲ್ಲಿ ಮತ್ತೊಂದು ಸಾಫ್ಟ್ ವೇರ್ (ಶೋರ್ ಇನ್ಫೋ ಟೆಕ್) ಕಂಪನಿಗೆ ಸೇರಿದ್ದ. ಈ ಕಂಪನಿಯ ಕೆಲಸದ ಮೇಲೆ ಪ್ರಶಾಂತ್ ಹಾಂಗ್ ಕಾಂಗ್, ಐವರಿಕೋಸ್ಟ್ ಗೆ ಭೇಟಿ ಕೊಡುತ್ತಿದ್ದ. 2017ರಲ್ಲಿ ಪ್ರಶಾಂತ್ ನಾಪತ್ತೆಯಾಗಿರುವುದಾಗಿ ವರದಿ ವಿವರಿಸಿದೆ.

ನನ್ನ ಮಗ 2017ರ ಏಪ್ರಿಲ್ 11ರಂದು ಬೆಳಗ್ಗೆ 9ಗಂಟೆಗೆ ಆಫೀಸ್ ನಿಂದ ತೆರಳಿದವನು, ಈವರೆಗೂ ಪತ್ತೆಯಾಗಿರಲಿಲ್ಲವಾಗಿತ್ತು ಎಂದು ತಂದೆ ಬಾಬು ರಾವ್ ವೈನ್ದಂ ತಿಳಿಸಿದ್ದಾರೆ. ಈ ಬಗ್ಗೆ 2017ರ ಏಪ್ರಿಲ್ 29ರಂದು ಮಾಧಾಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತದನಂತರ ಆತನ ಗೆಳೆಯರು, ಸಂಬಂಧಿಗಳು ಸೇರಿದಂತೆ ಎಲ್ಲಾ ರೀತಿಯಿಂದಲೂ ವಿಚಾರಿಸಿದಾಗಲೂ ಪ್ರಶಾಂತ್ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲವಾಗಿತ್ತು. ಸುಮಾರು 31 ತಿಂಗಳ ನಂತರ ಮಂಗಳವಾರ ಟಿವಿ ಚಾನೆಲ್ ವೀಕ್ಷಿಸುತ್ತಿದ್ದಾಗ ಮಗನನ್ನು ಪಾಕಿಸ್ತಾನದ ಪೊಲೀಸರು ಸೆರೆ ಹಿಡಿದಿರುವುದು ಗಮನಕ್ಕೆ ಬಂದಿತ್ತು. ಆತ ತೆಲುಗಿನಲ್ಲಿ ಮಾತನಾಡುತ್ತಿದ್ದ ವೀಡಿಯೋ ಕ್ಲಿಪ್ ಅನ್ನು ಟಿವಿಯಲ್ಲಿ ನೋಡಿದೇವು.ಹೀಗಾಗಿ ನಮ್ಮ ಮಗ ಬದುಕಿದ್ದಾನೆ ಎಂಬುದು ತಿಳಿದು ಸಂತೋಷವಾಯ್ತು. ನಮ್ಮ ಮಗನನ್ನು ವಾಪಸ್ ಕರೆದುಕೊಂಡು ಬರುವ ನಿಟ್ಟಿನಲ್ಲಿ ಪೊಲೀಸರು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳ ಜತೆ ಸಂಪರ್ಕದಲ್ಲಿ ಇದ್ದಿರುವುದಾಗಿ ಬಾಬು ರಾವ್ ತಿಳಿಸಿದ್ದಾರೆ.

ನಾವು ಪ್ರಶಾಂತ್ ನನ್ನು ಸಂಪರ್ಕಿಸಲು ತುಂಬಾ ಪ್ರಯತ್ನಿಸಿದ್ದೇವು. ಆದರೆ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಪತ್ತೆಹಚ್ಚಲು ಕಷ್ಟವಾಗಿತ್ತು ಎಂದು ಹೈದರಾಬಾದ್ ಪೊಲೀಸರು ತಿಳಿಸಿದ್ದಾರೆ. ಕೆಲವು ಪಾಕಿಸ್ತಾನದ ಸ್ಥಳೀಯ ಮಾಧ್ಯಮಗಳು, ಪ್ರಶಾಂತ್ ನನ್ನು ಭಾರತದ ಗೂಢಚಾರಿ ಎಂದು ವರದಿ ಮಾಡಿವೆ. ಆದರೆ ಇದು ಸತ್ಯಕ್ಕೆ ದೂರವಾದ ಆರೋಪ ಎಂದು ಪ್ರಶಾಂತ್ ಪೋಷಕರು ತಿಳಿಸಿದ್ದಾರೆ.

ಸ್ವಿರ್ಟ್ಜರ್ ಲ್ಯಾಂಡ್ ಯುವತಿಯ ಪ್ರೀತಿಗಾಗಿ ತೆರಳಿ ಸಿಕ್ಕಿಬಿದ್ದ ಪ್ರಶಾಂತ್?

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರಶಾಂತ್ ಒಬ್ಬಳು ಯುವತಿಯನ್ನು ಪ್ರೀತಿಸುತ್ತಿದ್ದ. ಈ ಬಗ್ಗೆ ಪ್ರಶಾಂತ್ ತನ್ನ ತಾಯಿ ಬಳಿ ಹೇಳಿಕೊಂಡಿದ್ದನಂತೆ. ಆದರೆ ತನಗೆ ಆತ ಆ ಯುವತಿಯನ್ನು ಇಷ್ಟಪಟ್ಟಿರುವ ಬಗ್ಗೆ ತಿಳಿದಿರಲಿಲ್ಲವಾಗಿತ್ತು ಎಂದು ಪ್ರಶಾಂತ್ ತಂದೆ ಬಾಬು ರಾವ್ ತಿಳಿಸಿದ್ದಾರೆ. ನಂತರ ತಿಳಿದ ಮಾಹಿತಿ ಪ್ರಕಾರ, ಪ್ರಶಾಂತ್ ನನ್ನು ಪ್ರೀತಿಸಿದ ಯುವತಿ ಸ್ವಿರ್ಟ್ಜ್ ರ್ ಲ್ಯಾಂಡ್ ನವಳಾಗಿದ್ದು, ಆಕೆ ಬೆಂಗಳೂರಿನಿಂದ ತನ್ನ ದೇಶಕ್ಕೆ ವಾಪಸ್ ಹೋಗಿದ್ದಳು. ಯುವತಿ ತನ್ನ ಬಿಟ್ಟು ಹೋಗಿರುವ ಬಗ್ಗೆ ಪ್ರಶಾಂತ್ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿದ್ದ. ನಂತರ ಆತ ಸಹಜ ಸ್ಥಿತಿಗೆ ಬಂದು ಕೆಲಸ ಮಾಡಲು ಆರಂಭಿಸಿದ್ದ. ನನ್ನ ಶಂಕೆಯ ಪ್ರಕಾರ ಆತ ರಾಜಸ್ಥಾನ್ ಗಡಿ ಮೂಲಕ ಸ್ವಿಟ್ಜರ್ ಲ್ಯಾಂಡ್ ಗೆ ಹೋಗುವ ಪ್ರಯತ್ನ ನಡೆಸಿರಬಹುದು ಎಂಬುದು ತಂದೆ ಬಾಬು ರಾವ್ ಹೇಳಿಕೆಯಾಗಿದೆ.

ತನ್ನ ಪ್ರೀತಿಯ ಹುಡುಗಿಯನ್ನು ಭೇಟಿಯಾಗಲು ಪ್ರಶಾಂತ್ ಭಾರತದ ಮೂಲಕ ಪಾಕಿಸ್ತಾನ ತಲುಪಿ ಅಲ್ಲಿಂದ ಇರಾನ್, ಟರ್ಕಿ ಮೂಲಕ ಯುರೋಪ್ ದೇಶಕ್ಕೆ ತೆರಳಿ ಸ್ವಿಟ್ಜರ್ ಲ್ಯಾಂಡ್ ಗೆ ಹೋಗುವ ಸಿದ್ದತೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ ಎಂದು ವರದಿ ತಿಳಿಸಿದೆ.

ಟಾಪ್ ನ್ಯೂಸ್

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.