“ಮಿಶನ್ ಮಂಗಲ್’ಗೂ ತಟ್ಟಿತು ವಿವಾದದ ಬಿಸಿ
ನಟಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
Team Udayavani, Aug 11, 2019, 8:30 PM IST
ಮುಂಬಯಿ: ಅಗಸ್ಟ್ 15ರಂದು ಬಿಡುಗಡೆಯಾಗಬೇಕಿರುವ ಹೈ ಪ್ರೊಫೈಲ್ ಚಿತ್ರ ‘ಮಿಷನ್ ಮಂಗಲ್’ಗೆ ಈಗ ವಿವಾದವೊಂದು ಸುತ್ತಿಕೊಂಡಿದೆ. ಈ ವಿವಾದಕ್ಕೆ ಚಿತ್ರದಲ್ಲಿರುವ ಒಂದು ಹಾಸ್ಯ ಸನ್ನಿವೇಶ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಇದು ಗ್ರಾಸವಾಗಿದೆ.
ಆಷ್ಟಕ್ಕೂ ಆಗಿದ್ದೇನು?
ಬಹುಭಾಷಾ ನಟಿ ತಾಪ್ಸಿ ಪನ್ನು ಅವರ ಒಂದು ಹಾಸ್ಯ ದೃಶ್ಯ ಟೀಕೆಗೆ ಗುರಿಯಾಗಿರುವುದು. ಚಿತ್ರದ ಟ್ರೇಲರ್ ನಲ್ಲಿ ಡ್ರೈವಿಂಗ್ ಕಲಿಯುವ ತಾಪ್ಸಿ ಪನ್ನು ಪಕ್ಕದ ಸೀಟಿನಲ್ಲಿರುವ ಡ್ರೈವಿಂಗ್ ಟೀಚರ್ ನ ಪ್ಯಾಂಟ್ ಮಧ್ಯಕ್ಕೆ ಕೈ ಹಾಕುವ ದೃಶ್ಯವೊಂದು ನಟಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಕಾರಿನ ಗೇರ್ ಬದಲಾಗಿ ಕೈ ತಪ್ಪಿನಿಂದ ಪ್ಯಾಂಟ್ ಮಧ್ಯಕ್ಕೆ ಕೈ ಹಾಕುತ್ತಾಳೆ. ಈ ಸನ್ನಿವೇಶದಲ್ಲಿ ಡ್ರೈವಿಂಗ್ ಮಾಷ್ಟ್ರು ಕಸಿವಿಸಿಗೊಂಡು ಚೀರುವುದು ದೃಶ್ಯದಲ್ಲಿದೆ.
ಈ ಕುರಿತಾಗಿ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ಕೇಳಿಬಂದಿದೆ. ತಾಪ್ಸಿ ಪನ್ನು ವಿರುದ್ಧ ಭಾರೀ ಟ್ರೋಲ್ ಗಳಿಗೆ ಸಾಮಾಜಿಕ ಜಾಲತಾಣ ಸಾಕ್ಷಿಯಾಗಿದೆ. ಹಾಸ್ಯ ಎಂದು ಯಾವುದೇ ಭಾಷೆಯಲ್ಲಿ ಆದರೂ ಪುರುಷನೊಬ್ಬ ಈ ದೃಶ್ಯ ಮಾಡಿದ್ದರೆ ಅವನ ವಿರುದ್ಧ ಯಾವ ರೀತಿ ಸಮಾಜ ಆಕ್ರೋಶಿಸುತ್ತಿತ್ತು ಎಂದು ನೆಟ್ಟಿಗರು ಕೇಳಿದ್ದಾರೆ. ಆದರೆ ಈಗ ಈ ದೃಶ್ಯದ ವಿರುದ್ದ ಯಾರೊಬ್ಬರ ತುಟಿ ಪಿಟಿಕ್ ಎನ್ನದಿರುವುದು ಆಶ್ಚರ್ಯ ಮೂಡಿಸಿದೆ ಎಂಬ ಮಾತುಗಳು ಟ್ವೀಟರ್ ನಲ್ಲಿ ವ್ಯಕ್ತವಾಗಿದೆ.
ಚಿತ್ರದ ವಿಷಯ ಏನು?
ಮಂಗಳನ ಅಂಗಳದಲ್ಲಿ ಮೊದಲ ಬಾರಿ ಸ್ಯಾಟಲೈಟ್ ಇಳಿಸಿದ ಭಾರತದ ಸಾಧನೆಯನ್ನು ಪ್ರತಿಬಿಂಬಿಸುವ ಚಿತ್ರ ಇದಾಗಿದ್ದು, ‘ಮಿಶನ್ ಮಂಗಲ್’ ಎಂದು ಹೆಸರಿಡಲಾಗಿದೆ. ಇದು ಅ. 15ರ ಸ್ವಾತಂತ್ರ್ಯ ದಿನಾಚರಣೆಯಂದು ದೇಶಾದ್ಯಂತ ತೆರೆ ಕಾಣಲಿದೆ. ಜಗನ್ ಶಕ್ರಿ ಎಂಬವರು ಇದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಖ್ಯಾತ ನಟ ಅಕ್ಷಯ್ ಕುಮಾರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಾಪ್ಸಿಪನ್ನು, ವಿದ್ಯಾ ಬಾಲನ್, ಕೀರ್ತಿ ಕುಲ್ಹಾರಿ, ಸೋನಾಕ್ಷಿ ಸಿನ್ಹಾ ಮೊದಲಾದವರ ತಾರಾಗಣ ಇದೆ.
Funny video of Tapsee Nunnu. pic.twitter.com/Cee9rcmbO2
— Kachra Peti (@kachra_peti) August 8, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.