‘Mitra Shakti’: ಭಾರತ-ಶ್ರೀಲಂಕಾ ಜಂಟಿ ಸೇನಾ ಸಮರಾಭ್ಯಾಸ ಆರಂಭ
Team Udayavani, Aug 12, 2024, 10:12 PM IST
ಹೊಸದಿಲ್ಲಿ: ಪರಸ್ಪರ ಕಾರ್ಯಸಾಧ್ಯತೆ ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಅನುಕೂಲವಾಗುವಂತೆ ಭಾರತ ಮತ್ತು ಶ್ರೀಲಂಕಾದ ಮಿಲಿಟರಿ ನಡುವಿನ ಜಂಟಿ ಸಮರಾಭ್ಯಾಸಕ್ಕೆ ಸೋಮವಾರ ದ್ವೀಪ ರಾಷ್ಟ್ರದಲ್ಲಿ ಚಾಲನೆ ನೀಡಲಾಗಿದೆ ಎಂದು ರಕ್ಷಣ ಸಚಿವಾಲಯ ತಿಳಿಸಿದೆ.
ಭಾರತ-ಶ್ರೀಲಂಕಾ ಜಂಟಿ ಮಿಲಿಟರಿ ವ್ಯಾಯಾಮದ 10 ನೇ ಆವೃತ್ತಿ ‘ಮಿತ್ರ ಶಕ್ತಿ’, ಮಧುರು ಓಯಾ, ಸೇನಾ ತರಬೇತಿ ಶಾಲೆಯಲ್ಲಿ ಆಗಸ್ಟ್ 12 ರಿಂದ 25 ರವರೆಗೆ ನಡೆಯಲಿದೆ. ವಿಶ್ವಸಂಸ್ಥೆಯ ಆದೇಶದ ಅಧ್ಯಾಯ VII ಅಡಿಯಲ್ಲಿ ಉಪ-ಸಾಂಪ್ರದಾಯಿಕ ಸನ್ನಿವೇಶದಲ್ಲಿ ಪ್ರತಿ-ಬಂಡಾಯ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಇದು ಜಂಟಿ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ರಕ್ಷಣ ಸಚಿವಾಲಯ ಹೇಳಿದೆ.
ಜಂಟಿ ಸಮರಾಭ್ಯಾಸ ‘ಮಿತ್ರ ಶಕ್ತಿ’ ಭಾರತ ಮತ್ತು ಶ್ರೀಲಂಕಾದಲ್ಲಿ ಪರ್ಯಾಯವಾಗಿ ನಡೆಸುವ ವಾರ್ಷಿಕ ತರಬೇತಿ ಕಾರ್ಯಕ್ರಮವಾಗಿದೆ. ಇದರ ಕೊನೆಯ ಆವೃತ್ತಿಯನ್ನು ನವೆಂಬರ್ 2023 ರಲ್ಲಿ ಪುಣೆಯಲ್ಲಿ ನಡೆಸಲಾಗಿತ್ತು.
106 ಸೇನಾ ಸಿಬಂದಿಯನ್ನು ಒಳಗೊಂಡಿರುವ ಭಾರತೀಯ ತುಕಡಿಯನ್ನು ರಜಪೂತಾನ ರೈಫಲ್ಸ್‌ನ ಬೆಟಾಲಿಯನ್ ಮತ್ತು ಇತರ ಶಸ್ತ್ರಾಸ್ತ್ರ ಪಡೆಗಲು ಪ್ರತಿನಿಧಿಸುತ್ತಿದ್ದು, ಶ್ರೀಲಂಕಾ ತುಕಡಿಯನ್ನು ಸೇನೆಯ ಗಜಬಾ ರೆಜಿಮೆಂಟ್‌ನ ಸಿಬಂದಿ ಪ್ರತಿನಿಧಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.