ಮಿಜೋರಾಂ: ಕನಿಷ್ಠ ಅಂತರದ ಜಯ 3 ಮತ, ಗರಿಷ್ಠ ಅಂತರದ ಜಯ 2,720
Team Udayavani, Dec 13, 2018, 4:30 PM IST
ಐಜಾಲ್ : ಈಚೆಗೆ ನಡೆದ ಮಿಜೋರಾಂ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ ಅಂತರದ ಜಯ 3 ಮತಗಳಲ್ಲೂ ಗರಿಷ್ಠ ಅಂತರದ ಜಯ 2,720 ಮತಗಳ ಅಂತರದಲ್ಲಿ ದಾಖಲಾಗಿರುವುದು ಗಮನಾರ್ಹವಾಗಿದೆ.
ಕೇವಲ ಮೂರು ಮತಗಳ ಅಂತರದಲ್ಲಿ ಜಯ ಸಾಧಿಸಿದವರು ಮಿಜೋರಾಂ ನ್ಯಾಶನಲ್ ಫ್ರಂಟ್ (ಎಂಎನ್‌ಎಫ್)ನ ಲಾಲ್‌ಛಂದಮಾ ರಾಲ್ಟೆ. ಅವರಿಗೆ ತುಯಿವಾಲ್ ಕ್ಷೇತ್ರದಿಂದ ಈ ಅತ್ಯಂತ ಕಡಿಮೆ ಅಂತರದ ಜಯ ದೊರಕಿತು.
ರಾಲ್ಟೆ ಅವರಿಗೆ 5,207 ಮತಗಳು ಸಿಕ್ಕಿದ್ದವು. ಇವರ ನಿಕಟ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಆರ್ ಎಲ್ ಪಿಯನಾವಿಯಾ ಅವರು 5,204 ಮತ ಗಳಿಸಿದ್ದರು.
ಕೇವಲ 3 ಅಂತರಗಳಲ್ಲಿ ದಾಖಲಾದ ಈ ಜಯವನ್ನು ಪ್ರಶ್ನಿಸಿ ಪಿಯನಾವಿಯಾ ಅವರು ಮತ ಮರು ಎಣಿಕೆಯನ್ನು ಆಗ್ರಹಿಸಿದ್ದರು. ಆ ಪ್ರಕಾರ ನಡೆದ ಮರು ಎಣಿಕೆಯಲ್ಲಿ ಕೂಡ 3 ಮತಗಳಲ್ಲೇ ಜಯದ ಅಂತರ ದೃಢಪಟ್ಟಿತು.
ಗರಿಷ್ಠ 2,720 ಮತಗಳ ಅಂತರದಲ್ಲಿ ಜಯಸಾಧಿಸಿದವರೆಂದರೆ ಹಾಲಿ ಎಂಎನ್‌ಎಫ್ ಶಾಸಕ ಲಾಲ್‌ರುವಾತ್ಕಿಮಾ ಅವರು.
ಲಾಲ್‌ರುವಾತ್ಕಿಮಾ ಅವರಿಗೆ ಐಜಾಲ್ 2ನೇ ಪಶ್ಚಿಮ ಕ್ಷೇತ್ರದ ಸ್ಪರ್ಧೆಯಲ್ಲಿ 7,626 ಮತಗಳು ಬಂದಿದ್ದವು; ಅವರ ನಿಕಟ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಲಾಲ್‌ಮಾಲ್‌ಸ್ವಾಮಾ ಅವರಿಗೆ 2,720 ಮತಗಳು ದೊರಕಿದವು. ಹೀಗಾಗಿ ಲಾಲ್‌ರುವಾತ್ಕಿಮಾ ಅವರ ವಿಜಯ ಗರಿಷ್ಠ ಅಂತರದ 2,720 ಮತಗಳಲ್ಲಿ ದಾಖಲಾಯಿತು.
ಮಿಜೋರಾಂ ನಲ್ಲಿ ಏಕೈಕ ಸ್ಥಾನಗೆದ್ದು ಖಾತೆ ಆರಂಭಿಸಿದ್ದ ಬಿಜೆಪಿ ಅಭ್ಯರ್ಥಿ ಬುದ್ಧ ಧನ ಚಕಾ ಅವರಿಗೆ ಎಂಎನ್‌ಎಫ್ ನ ರಸಿಕ ಮೋಹನ ಛಕಾ ವಿರುದ್ಧ 1,594 ಮತಗಳ ಅಂತರದ ಜಯ ಪ್ರಾಪ್ತವಾಯಿತು.
40 ಸದಸ್ಯ ಬಲದ ಮಿಜೋರಾಂ ವಿಧಾನಸಭೆಯಲ್ಲಿ ಎಂಎನ್‌ಎಫ್ 26 ಸ್ಥಾನಗಳನ್ನು ಗೆದ್ದುಕೊಂಡಿದೆ. ಕಾಂಗ್ರೆಸ್ ಕೇವಲ ಐದು ಸ್ಥಾನಗಳನ್ನು ಗೆದ್ದುಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.