ಭಾರತದಲ್ಲಿ ಚೀನೀ ಮೊಬೈಲುಗಳದ್ದೇ ರಾಜ್ಯಭಾರ!
Team Udayavani, Feb 14, 2017, 8:04 AM IST
ಹೊಸದಿಲ್ಲಿ: ಚೀನೀ ಸ್ಮಾರ್ಟ್ಫೋನ್ಗಳು ಭಾರತೀಯ ಮಾರುಕಟ್ಟೆಯನ್ನು ಆಳುತ್ತಿವೆ ಎನ್ನುವುದಕ್ಕೆ ಇಂಟರ್ನ್ಯಾಶನಲ್ ಡಾಟಾ ಕಾಪೊìರೇಶನ್ (ಐಡಿಸಿ) ಅಂಕಿ-ಅಂಶಗಳ ಸಮೇತ ಸಾಕ್ಷಿ ಕೊಟ್ಟಿದೆ. ಅಚ್ಚರಿಯೆಂದರೆ, ಐಡಿಸಿ ನೀಡಿರುವ ಟಾಪ್ 5 ಪಟ್ಟಿಯಲ್ಲಿ ಭಾರತೀಯ ಯಾವ ಮೊಬೈಲ್ ಉತ್ಪನ್ನಗಳೂ ಜಾಗ ಪಡೆಯದೆ ಇರುವುದು ಇದೇ ಮೊದಲು!
ಐಡಿಸಿ ಬಿಡುಗಡೆ ಮಾಡಿರುವ ನಾಲ್ಕನೇ ತ್ತೈಮಾಸಿಕದ ವರದಿಯಂತೆ, ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ನಂ.1 ಸ್ಥಾನದಲ್ಲಿದ್ದು, ಶೇ.25.1 ರಷ್ಟು ಮಾರುಕಟ್ಟೆಯನ್ನು ವಶಪಡಿಸಿಕೊಂಡಿದೆ. ಟಾಪ್ 5 ಪಟ್ಟಿಯಲ್ಲಿ ಉಳಿದಂತೆ ನಾಲ್ಕೂ ಸ್ಥಾನಗಳನ್ನು ಚೀನೀ ಫೋನುಗಳೇ ಆಕ್ರಮಿಸಿವೆ. ಕ್ಸಿಯೋಮಿ ಶೇ.10.7ರಷ್ಟು ಮಾರಾಟಗೊಂಡು, ದ್ವಿತೀಯ ಸ್ಥಾನದಲ್ಲಿದೆ.
3ನೇ ತ್ತೈಮಾಸಿಕಕ್ಕೆ ಹೋಲಿ ಸಿದರೆ, 4ರ ಅವಧಿ ಯಲ್ಲಿ ಕ್ಸಿಯೋಮಿ 15.3 ಚೇತ ರಿಕೆ ಕಂಡಿದೆ.
3ನೇ ಸ್ಥಾನದ ಲೆನೋವಾ ಶೇ. 9.9ರಷ್ಟು ಮಾರಾಟ ಗೊಂಡಿದ್ದರೂ -17.4ರಷ್ಟು ಮಾರುಕಟ್ಟೆ ಕಳೆದುಕೊಂಡಿದೆ. 4ನೇ ಸ್ಥಾನದಲ್ಲಿರುವ ಆಪ್ಪೋ ಸ್ಮಾರ್ಟ್ಫೋನುಗಳು ಶೇ.8.6ರಷ್ಟು ಮಾರುಕಟ್ಟೆಯನ್ನು ಆಕ್ರಮಿಸಿದ್ದು, ಕಳೆದ ಅವಧಿಗೆ ಹೋಲಿಸಿದರೆ ಶೇ.29.9ರಷ್ಟು ಗಣನೀಯ ಏರಿಕೆ ಕಂಡಿದೆ. ಮತ್ತೂಂದು ಚೀನೀ ಕಂಪೆನಿ ವಿವೋ ಶೇ.50ರಷ್ಟು ಚೇತರಿಕೆ ಕಂಡಿದ್ದು, ಶೇ.7.6ರಷ್ಟು ವಿವೋ ಮೊಬೈಲುಗಳು ಮಾರಾಟ ಕಂಡಿವೆ. ಭಾರತದ ಮೈಕ್ರೋಮ್ಯಾಕ್ಸ್, ಇಂಟೆಕ್ಸ್, ಲಾವಾ, ಕಾರ್ಬನ್ ಮೊಬೈಲುಗಳು ಗಣನೀಯ ಪ್ರಮಾಣದಲ್ಲಿ ಮಾರುಕಟ್ಟೆ ಕಳೆದುಕೊಂಡಿವೆ. “ನಾಲ್ಕನೇ ತ್ತೈಮಾಸಿಕದಲ್ಲಿ ದೇಶದಲ್ಲಿ ಒಟ್ಟಾರೆ 2.5 ಕೋಟಿ ಮೊಬೈಲುಗಳು ಮಾರಾಟವಾಗಿದ್ದರೂ ಶೇ.20.3ರಷ್ಟು ಮಾರುಕಟ್ಟೆ ಕುಗ್ಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.