Panaji: 79 ಸಾವಿರ ಮೌಲ್ಯದ ಮೊಬೈಲ್ ಫೋನ್ ಗಳು ಕಳವು
Team Udayavani, Sep 18, 2023, 3:51 PM IST
ಪಣಜಿ: ರಾಜ್ಯದಲ್ಲಿ ಕಳ್ಳತನ ಪ್ರಕರಣಗಳು ತೀವ್ರ ಏರಿಕೆಯಾಗಿದ್ದು, ಕಲಾಂಗುಟೆಯಲ್ಲಿ ಮೊಬೈಲ್ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ.
ಅಲ್ಲಿನ ರೆಸ್ಟೋರೆಂಟ್ ಕಾರ್ಯಕರ್ತೆಯೊಬ್ಬರ ಕೊಠಡಿಯಲ್ಲಿದ್ದ ಒಟ್ಟು 79 ಸಾವಿರ ಮೌಲ್ಯದ 4 ಮೊಬೈಲ್ ಗಳನ್ನು ಕಳವು ಮಾಡಿರುವ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಪಶ್ಚಿಮ ಬಂಗಾಳ ಮೂಲದ ರಿಜ್ವಾನ್ ಮುಲ್ಲಾ ಮತ್ತು ಮೌಸೆರುಲ್ ಮುಲ್ಲಾ ಎಂಬಾತರನ್ನು ಪೋಲಿಸರು ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆ: ಮಾಹಿತಿ ಪ್ರಕಾರ ಬರ್ದೇಶದ ಬಾರ್ ಎಂಡ್ ರೆಸ್ಟೊರೆಂಟ್ ಫಿಶ್ ಅಂಡ್ ಕರಿಯಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಕಾರ್ಮಿಕರ ಕೊಠಡಿಯಿಂದ 79 ಸಾವಿರ ಮೌಲ್ಯದ 4 ಫೋನ್ ಗಳು ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. ಘಟನೆಯ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತಕ್ಷಣ ಕಳ್ಳರಿಗಾಗಿ ಹುಡುಕಾಟ ಆರಂಭಿಸಿದ್ದು, ಆರೋಪಿಗಳಿಂದ ಸುಮಾರು 1,50,000 ಲಕ್ಷ ಮೌಲ್ಯದ ಒಟ್ಟು 8 ಫೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM Modi ದೇಶವನ್ನು ನಡೆಸಬಲ್ಲ ಎತ್ತರದ ನಾಯಕ: ರಾಜ್ಯ ಸಭೆಯಲ್ಲಿ ದೇವೇಗೌಡ
BJP win; ಮಸಾಜ್ ಮತ್ತು ಸ್ಪಾ ಕಂಪನಿಗಳಿಂದ ಸಮೀಕ್ಷೆ: ಆಪ್ ನಾಯಕ ಸಂಜಯ್ ಸಿಂಗ್
THANE: ರೈಲ್ವೆ ನಿಲ್ದಾಣದಲ್ಲಿ ಇಬ್ಬರು ಕಳ್ಳರ ಬಂಧನ; 6.79 ಲಕ್ಷ ಮೌಲ್ಯದ 42 ಮೊಬೈಲ್ ವಶ
Noida; 4 ಶಾಲೆಗಳಿಗೆ ಬಾಂಬ್ ಬೆದರಿಕೆ: 9 ನೇ ತರಗತಿ ವಿದ್ಯಾರ್ಥಿ ಪೊಲೀಸ್ ಕಸ್ಟಡಿಗೆ
Nashik: ಪಾರ್ಕಿಂಗ್ ಪ್ರದೇಶದಲ್ಲಿ ಆಟವಾಡುತ್ತಿದ್ದ ಮಗುವಿಗೆ ಕಾರು ಡಿಕ್ಕಿ; ಆಗಿದ್ದೇನು?