ಉಪರಾಷ್ಟ್ರಪತಿ ಹುದ್ದೆಯಲ್ಲೂ ಮೋದಿ, ಅಮಿತ್‌ ಸರ್‌ಪ್ರೈಸ್‌?

Team Udayavani, Jul 1, 2017, 3:45 AM IST

30-PTI-12.jpg

ನವದೆಹಲಿ: ಯಾರಿಗೂ ಗೊತ್ತಾಗದ ರೀತಿಯಲ್ಲಿ ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿಯ ಹೆಸರು ಘೋಷಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ ಮಾದರಿಯನ್ನೇ ಉಪರಾಷ್ಟ್ರಪತಿ ಚುನಾವಣಾ ಅಭ್ಯರ್ಥಿಯ ವಿಚಾರದಲ್ಲೂ ಅನುಸರಿಸಲು ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ತಂತ್ರ ರೂಪಿಸಿದ್ದಾರೆ. 

ಉಪರಾಷ್ಟ್ರಪತಿ ಹುದ್ದೆಗೆ ಬಿಜೆಪಿ ನಾಯಕರೊಬ್ಬರನ್ನು ಕೂರಿಸಲು ಇವರಿ ಬ್ಬರೂ ಚಾಣಕ್ಯತಂತ್ರಕ್ಕೆ ಮೊರೆ ಹೋಗಿದ್ದಾರೆ. ಉಪರಾಷ್ಟ್ರಪತಿಯಾಗಿ ಭೈರೋನ್‌ಸಿಂಗ್‌ ಶೆಖಾವತ್‌ ಅವರು ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿ ಒಂದು ದಶಕದ ನಂತರ ಈ ಗುರುತರ ಹುದ್ದೆಗೆ ಬಿಜೆಪಿಗೆ ಸೇರಿದ ವ್ಯಕ್ತಿಯನ್ನೇ ಕೂರಿಸಲು ಇಬ್ಬರು ನಾಯಕರೂ ಪ್ರಯತ್ನ ಚುರುಕುಗೊಳಿದ್ದಾರೆ. 

ಈಶಾನ್ಯದ ನಾಯಕನತ್ತ ಒಲವು: ಆಗಸ್ಟ್‌ 5 ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದ್ದು , ಹಾಲಿ ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ ಅವರ ಆಧಿಕಾರಾವಧಿ ಆ.7ಕ್ಕೆ ಮುಕ್ತಾಯವಾಗಲಿದೆ. ಈಶಾನ್ಯ ರಾಜ್ಯಗಳಿಗೆ ಸೇರಿದ ಪ್ರಮುಖ ನಾಯಕರೊಬ್ಬರನ್ನು ಈ ಹುದ್ದೆಗೆ ತಂದು ಕೂರಿಸಲು ಇಬ್ಬರೂ ಚಿಂತನೆ ಮಾಡಿದ್ದಾರೆ ಎಂದು ಪಕ್ಷದ ಮೂಲಗಳು ಹೇಳುತ್ತಿವೆ. ಇದರಿಂದ ರಾಜಕೀಯವಾಗಿ ಈ ವಲಯದಲ್ಲಿ ಬೆಳೆಯಲು ಬಿಜೆಪಿಗೆ ಬಹಳ ಅನುಕೂಲವಾಗಲಿದೆ ಎಂಬ ಲೆಕ್ಕಾಚಾರವನ್ನು ಹಾಕಿಕೊಂಡೇ ಇಲ್ಲಿನ ನಾಯಕರಿಗೆ ಪಟ್ಟಕಟ್ಟಲು ಅಲೋಚನೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಕಳೆದೆ ಕೆಲವು ವರ್ಷಗಳಿಂದ ಈ ವಲಯದಲ್ಲಿ ಸಂಘ ಪರಿವಾರದ ಚಟುವಟಿಕೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಬೇರೆ ಕಡೆಗಿಂತ ಇಲ್ಲಿನ ನಾಯಕರನ್ನೇ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು ಎಂಬ ಮಾತುಗಳು ಕೇಳಿಬರುತ್ತಿವೆ.

ದಕ್ಷಿಣದ ನಾಯಕ?: ಇನ್ನೊಂದು ಮೂಲಗಳ ಪ್ರಕಾರ, ದಕ್ಷಿಣ ಭಾರತದ ವ್ಯಕ್ತಿಯನ್ನೂ ಅಭ್ಯರ್ಥಿಯನ್ನಾಗಿ ಘೋಷಿಸುವ ಸಾಧ್ಯತೆ ಇದೆ. ಈ ಪಟ್ಟಿಯಲ್ಲಿ ಮಹಾರಾಷ್ಟ್ರ ರಾಜ್ಯಪಾಲ ವಿದ್ಯಾಸಾಗರ್‌ ರಾವ್‌ ಅವರ ಹೆಸರೂ ಇದೆ. ಆದರೆ, ದಕ್ಷಿಣದಲ್ಲಿ ಒಂದು ರಾಜ್ಯದಿಂದ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಿದರೆ, ಇತರೆ ಮೂರು ರಾಜ್ಯಗಳ ಮೇಲೆ ಪರಿಣಾಮ ಬೀರದು. ಆದರೆ, ಈಶಾನ್ಯದಿಂದ ಆಯ್ಕೆ ಮಾಡಿದರೆ ಇಡೀ ಈಶಾನ್ಯ ರಾಜ್ಯಗಳ ಮೇಲೆ ಪ್ರಭಾವ ಬೀರಿದಂತಾಗುತ್ತದೆ ಎನ್ನುವುದು ಮೋದಿ, ಶಾ ಲೆಕ್ಕಾಚಾರ.

ರಾಜ್ಯಸಭೆಯಲ್ಲಿ ಬಲ: ಬಿಜೆಪಿಗೆ 2 ರೀತಿಯ ಲಾಭ. ಒಂದು ರಾಜ್ಯಸಭೆ ಸಭಾಧ್ಯಕ್ಷರಾಗಿ ತಮ್ಮದೇ ಸಿದ್ಧಾಂತದ ವ್ಯಕ್ತಿ ನೇಮಕಗೊಳ್ಳುತ್ತಾರೆ. ಮತ್ತೂಂದೆಡೆ, ರಾಜ್ಯಸಭೆಯಲ್ಲಿ ಎನ್‌ಡಿಎ ಬಲಾಬಲವೂ ಏಪ್ರಿಲ್‌ನಿಂದ ಹೆಚ್ಚುವ ಕಾರಣ, ವಿಧೇಯಕಗಳ ಅಂಗೀಕಾರಕ್ಕೆ ಆಗುತ್ತಿದ್ದ ಅಡ್ಡಿಯೂ ತಪ್ಪಲಿದೆ.

ಇಲ್ಲೂ ಇದೆ ಜಾತಿ ಸಮೀಕರಣ 
ದಲಿತರೊಬ್ಬರನ್ನು ರಾಷ್ಟ್ರಪತಿ ಹುದ್ದೆಗೆ ಏರಿಸಲು ಬಿಜೆಪಿ ಹೊರಟಿದೆ. ಪ್ರಧಾನಿ ಮೋದಿ ಅವರು ಹಿಂದುಳಿದ ವರ್ಗಕ್ಕೆ ಸೇರಿದವರು. ಹಾಗಾಗಿ, ಉಪರಾಷ್ಟ್ರಪತಿಯ ಆಯ್ಕೆ ವೇಳೆ ಈ ಎರಡೂ ವರ್ಗಗಳನ್ನು ಹೊರತು ಪಡಿಸಿದವರಿಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚು. ಮಹಿಳೆಯೊಬ್ಬರಿಗೆ ಈ ಹುದ್ದೆ ಕೊಡಬಹುದೇ ಎಂಬ ಅನುಮಾನ ಇದ್ದರೂ, ಈಗಾಗಲೇ ಲೋಕಸಭೆ ಸ್ಪೀಕರ್‌ ಸ್ಥಾನವನ್ನು ಸುಮಿತ್ರಾರಿಗೆ ನೀಡಿರುವ ಕಾರಣ, ರಾಜ್ಯಸಭೆ ಸಭಾಧ್ಯಕ್ಷರ ಸ್ಥಾನವೂ ಮಹಿಳೆಗೆ ಸಿಗುವ ಸಾಧ್ಯತೆ ಕಡಿಮೆ. ಉಪರಾಷ್ಟ್ರಪತಿ ಹುದ್ದೆಯನ್ನು ರಾಜಕೀಯೇತರ ವ್ಯಕ್ತಿಗೆ ನೀಡಲು ಬಿಜೆಪಿ-ಆರೆಸ್ಸೆಸ್‌ಗೆ ಇಷ್ಟವಿಲ್ಲ ಎನ್ನಲಾಗಿದೆ.

ಸಾಬರಮತಿ ಆಶ್ರಮದಿಂದ ಮೀರಾ ಪ್ರಚಾರ ಆರಂಭ
ಅಹಮದಾಬಾದ್‌:
ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಮೀರಾಕುಮಾರ್‌ ಅವರು ಶುಕ್ರ ವಾರ ಗುಜರಾತ್‌ನ ಸಾಬರಮತಿ ಆಶ್ರಮದಿಂದ ತಮ್ಮ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.  ಪ್ರಧಾನಿ ಮೋದಿ ಅವರು ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿದ ಮಾರನೇ ದಿನವೇ ಇಲ್ಲಿಗೆ ಆಗಮಿಸಿದ ಮೀರಾಕುಮಾರ್‌ 40 ನಿಮಿಷಗಳ ಕಾಲ ಇಲ್ಲಿ ಕಳೆದರು. ಇವರೊಂ ದಿಗೆ ಗುಜರಾತ್‌ ಕಾಂಗ್ರೆಸ್‌ ನಾಯಕರಾದ ಭರತ್‌ಸಿನ್ಹ ಸೋಲಂಕಿ ಮತ್ತು ಶಂಕರಸಿಂಗ್‌ ವಘೇಲಾ ಅವರಿದ್ದರು. ಪ್ರಚಾರ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮೀರಾ, “ನಾನು ಮಹಾತ್ಮ ಗಾಂಧಿಯ ಸಿದ್ಧಾಂತಕ್ಕಾಗಿ ಹೋರಾಡುತ್ತಿದ್ದೇನೆ. ಈ ಸ್ಥಳದಲ್ಲಿ ಒಂದು ವಿಶಿಷ್ಟ ಶಕ್ತಿಯಿದೆ. ಅದನ್ನು ಪಡೆದುಕೊಳ್ಳಲೆಂದು ಇಲ್ಲಿಗೆ ಬಂದೆ. ಈ ಹೋರಾಟವನ್ನು ಮುಂದಕ್ಕೆ ಕೊಂಡೊಯ್ಯಲು ನನಗೆ ಸಾಕಷ್ಟು ಶಕ್ತಿ ಈಗ ಸಿಕ್ಕಿದೆ,’ ಎಂದಿದ್ದಾರೆ. ಇದೇ ವೇಳೆ, ಅವರು ಸ್ವಲ್ಪ ಹೊತ್ತು ಚರಕದ ಮುಂದೆ ಕುಳಿತು ನೂಲು ತೆಗೆದರು.

ರಾಷ್ಟ್ರಪತಿ ಹುದ್ದೆ: “ದೇವರ’ ಅರ್ಜಿಯೂ ತಿರಸ್ಕೃತ!
ರಾಷ್ಟ್ರಪತಿ ಹುದ್ದೆಗಾಗಿ ಅರ್ಜಿ ಸಲ್ಲಿಸಿ ತಿರಸ್ಕೃತಗೊಂಡ 93 ಅಭ್ಯರ್ಥಿಗಳ ಪೈಕಿ “ದೇವರು’ ಕೂಡ ಒಬ್ಬರು! ಅಷ್ಟೇ ಅಲ್ಲ, ಅಬ್ರಹಾಂ ಲಿಂಕನ್‌, ಐನ್‌ಸ್ಟಿàನ್‌ರಂಥ ಮಹಾನ್‌ ವ್ಯಕ್ತಿಗಳು ಅನುಮೋದನೆ ಮಾಡಿ ದ್ದರೂ, ಹಲವರ ಅರ್ಜಿಗಳು ತಿರಸ್ಕೃತ ಗೊಂಡಿವೆ. ಅಚ್ಚರಿಯಾದರೂ ಇದು ಸತ್ಯ. ತಿರಸ್ಕೃತಗೊಂಡ ಅರ್ಜಿಗಳಲ್ಲಿದ್ದ ನಗೆಪಾಟಲಿಗೀಡಾಗುವ ವಿಚಾರಗಳು ಇದೀಗ ಬಹಿರಂಗಗೊಂಡಿವೆ. ಪಾಣಿಪತ್‌ನ ದೇವಿದಯಾಳ್‌ ಅಗರ್ವಾಲ್‌ ಎಂಬವರು “ಗಾಡ್‌’ ಎಂಬ ಹೆಸರಿನಲ್ಲಿ ಅರ್ಜಿ ಸಲ್ಲಿಸಿದ್ದರಂತೆ. “ನಾನು ಸರ್ವೋತ್ಛ ಶಕ್ತಿ. ನನಗೆ 50 ಶಾಸಕರು, ಸಂಸದರ ಅನುಮೋದನೆ ಬೇಕಿಲ್ಲ,’ ಎಂದು ಅವರು ಹೇಳಿದ್ದರಂತೆ. ಜತೆಗೆ, “ಮೀರಾಕುಮಾರ್‌ ಅಥವಾ ಕೋವಿಂದ್‌ರಲ್ಲಿ ಮಂತ್ರದಂಡವಿದೆಯೇ? ನನ್ನ ಅರ್ಜಿಯನ್ನೇನಾದರೂ ತಿರಸ್ಕರಿಸಿದರೆ ದೆಹಲಿಯಲ್ಲಿ ಪ್ರಬಲ ಭೂಕಂಪ ಸಂಭವಿಸಲಿದೆ’ ಎಂದೂ ನಾಮಪತ್ರದಲ್ಲಿ ಅವರು ಬರೆದಿದ್ದರು ಎನ್ನಲಾಗಿದೆ. ಇನ್ನು ಹರ್ಯಾಣದ ವಿನೋದ್‌ ಕುಮಾರ್‌ ಎಂಬವರು, ತಮಗೆ ಅನುಮೋದಕರಾಗಿ ಭಗತ್‌ಸಿಂಗ್‌, ವಿವೇಕಾನಂದ, ನೆಲ್ಸನ್‌ ಮಂಡೇಲಾ, ಬಿ.ಆರ್‌.ಅಂಬೇಡ್ಕರ್‌, ಸುಭಾಷ್‌ಚಂದ್ರ ಬೋಸ್‌, ಜೆ.ಎಫ್.ಕೆನಡಿ, ಲೆನಿನ್‌, ಲಿಂಕನ್‌, ಐನ್‌ಸ್ಟಿನ್‌ರ ಹೆಸರನ್ನು ಬರೆದಿದ್ದರು.

ಟಾಪ್ ನ್ಯೂಸ್

Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್‌ ವಿರುದ್ಧ ವರ್ಮಾ

Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್‌ ವಿರುದ್ಧ ವರ್ಮಾ

Divorce Rumours: ಚಹಾಲ್‌ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?

Divorce Rumours: ಚಹಾಲ್‌ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?

New Delhi; Argument with classmates;

New Delhi; ಸಹಪಾಠಿಗಳೊಂದಿಗೆ ವಾಗ್ವಾದ; 7ನೇ ತರಗತಿ ವಿದ್ಯಾರ್ಥಿಯನ್ನು ಇರಿದು ಹತ್ಯೆ

Thane; Businessman, key witness in criminal case,

Thane; ಕ್ರಿಮಿನಲ್‌ ಕೇಸ್‌ ನ ಮುಖ್ಯ ಸಾಕ್ಷಿ, ಉದ್ಯಮಿಯನ್ನು ಗುಂಡಿಕ್ಕಿ ಹತ್ಯೆ

13-bng

Road Mishap: ಎಚ್ಚರ! ಬೆಂಗ್ಳೂರಲ್ಲಿದೆ 64 ಆಕ್ಸಿಡೆಂಟ್‌ ಡೇಂಜರ್‌ ಸ್ಪಾಟ್‌

12-chowta

Brijesh Chowta: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾದ ಕ್ಯಾ. ಬ್ರಿಜೇಶ್‌ ಚೌಟ

11-udupi

Udupi: ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಆರೋಪಿ ಬಂಧನ: 3.25 ಲಕ್ಷ ಮೌಲ್ಯದ MDMA, ಚರಸ್ ವಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್‌ ವಿರುದ್ಧ ವರ್ಮಾ

Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್‌ ವಿರುದ್ಧ ವರ್ಮಾ

New Delhi; Argument with classmates;

New Delhi; ಸಹಪಾಠಿಗಳೊಂದಿಗೆ ವಾಗ್ವಾದ; 7ನೇ ತರಗತಿ ವಿದ್ಯಾರ್ಥಿಯನ್ನು ಇರಿದು ಹತ್ಯೆ

Thane; Businessman, key witness in criminal case,

Thane; ಕ್ರಿಮಿನಲ್‌ ಕೇಸ್‌ ನ ಮುಖ್ಯ ಸಾಕ್ಷಿ, ಉದ್ಯಮಿಯನ್ನು ಗುಂಡಿಕ್ಕಿ ಹತ್ಯೆ

ಹಿರಿಯ ಪರಮಾಣು ವಿಜ್ಞಾನಿ ರಾಜಗೋಪಾಲ್‌ ಚಿದಂಬರಂ ವಿಧಿವಶ: ಪ್ರಧಾನಿ ಮೋದಿ ಸಂತಾಪ

ಹಿರಿಯ ಪರಮಾಣು ವಿಜ್ಞಾನಿ ರಾಜಗೋಪಾಲ್‌ ಚಿದಂಬರಂ ವಿಧಿವಶ: ಪ್ರಧಾನಿ ಮೋದಿ ಸಂತಾಪ

Tamilnadu:  ಪಟಾಕಿ ತಯಾರಿಕೆ ಕಾರ್ಖಾನೆಯಲ್ಲಿ ಸ್ಫೋಟ- ಆರು ಮಂದಿ ಸಾ*ವು

Tamilnadu:  ಪಟಾಕಿ ತಯಾರಿಕೆ ಕಾರ್ಖಾನೆಯಲ್ಲಿ ಸ್ಫೋಟ- ಆರು ಮಂದಿ ಸಾ*ವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್‌ ವಿರುದ್ಧ ವರ್ಮಾ

Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್‌ ವಿರುದ್ಧ ವರ್ಮಾ

Divorce Rumours: ಚಹಾಲ್‌ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?

Divorce Rumours: ಚಹಾಲ್‌ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?

14-aranthodu

Aranthodu: ವ್ಯಕ್ತಿಯ ಮೇಲೆ ಕಾಡಾನೆ ದಾಳಿ

kuladalli keelyavudo movie

Sandalwood: ಫಸ್ಟ್‌ಲುಕ್‌ನಲ್ಲಿ”ಕುಲದಲ್ಲಿ ಕೀಳ್ಯಾವುದೋ’

New Delhi; Argument with classmates;

New Delhi; ಸಹಪಾಠಿಗಳೊಂದಿಗೆ ವಾಗ್ವಾದ; 7ನೇ ತರಗತಿ ವಿದ್ಯಾರ್ಥಿಯನ್ನು ಇರಿದು ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.