ಆಡಳಿತಕ್ಕೆ ವೇಗ ನೀಡಲು ಹೊಸ ಯೋಜನೆ: 77 ಮಂತ್ರಿಗಳನ್ನು 8 ಗುಂಪುಗಳಾಗಿ ವಿಂಗಡನೆ
Team Udayavani, Nov 15, 2021, 9:01 AM IST
ಹೊಸದಿಲ್ಲಿ: ಆಡಳಿತಕ್ಕೆ ಹೊಸ ವೇಗ ನೀಡಲು ಮೋದಿ ಸರಕಾರವು ಯುವ ವೃತ್ತಿಪರರನ್ನು ಸೆಳೆಯಲು ಯೋಜಿಸುತ್ತಿದೆ. ನಿವೃತ್ತ ಅಧಿಕಾರಿಗಳಿಂದ ಸಲಹೆಗಳನ್ನು ಪಡೆಯಲು ಮತ್ತು ಯೋಜನೆಯ ಮೇಲ್ವಿಚಾರಣೆಗಾಗಿ ತಂತ್ರಜ್ಞಾನದ ಅತ್ಯುತ್ತಮ ಬಳಕೆಯನ್ನು ಮಾಡುವುದರ ಜೊತೆಗೆ ಮೇಲ್ವಿಚಾರಣೆ ಮಾಡಬೇಕಾದ ಹಲವಾರು ಕ್ರಮಗಳನ್ನು ಸರ್ಕಾರ ಮುಂದಡಿಯಿಟ್ಟಿದೆ. ಇಡೀ ಮಂತ್ರಿ ಮಂಡಳಿಯ ಸದಸ್ಯರನ್ನು ಒಳಗೊಂಡ ಎಂಟು ವಿಭಿನ್ನ ಗುಂಪುಗಳನ್ನಾಗಿ ಮಾಡಿ ಆಡಳಿತಕ್ಕೆ ಹೆಚ್ಚಿನ ವೇಗ ನೀಡಲು ಮೋದಿ ಸರ್ಕಾರ ಮುಂದಾಗಿದೆ.
ಇದಕ್ಕಾಗಿಯೇ ಪ್ರಧಾನಿ ನೇತೃತ್ವದಲ್ಲಿ ಇತ್ತೀಚೆಗೆ ಚಿಂತನ ಶಿಬಿರಗಳನ್ನು ನಡೆಸಲಾಯಿತು. ಇವುಗಳಲ್ಲಿ, ಎಲ್ಲ ಇಲಾಖೆಗಳ ಸಚಿವರು, ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಸುಮಾರು ಐದು ಗಂಟೆಗಳ ಕಾಲ ನಡೆದ ಮೊದಲ ಶಿಬಿರದ ಅನಂತರ 77 ಸಚಿವರನ್ನು ಎಂಟು ತಂಡಗಳನ್ನಾಗಿ ವಿಭಜಿಸಲಾಯಿತು. ಈ ತಂಡಗಳು, ತಂತ್ರಜ್ಞಾನ ಆಧಾರಿತ ಸಂಪನ್ಮೂಲಗಳ ಅಭಿವೃದ್ಧಿಗಾಗಿ ಹಾಗೂ ಯುವ ವೃತ್ತಿಪರರನ್ನು ತಂಡದಲ್ಲಿ ನೇಮಿಸಿಕೊಳ್ಳುವ ಕೆಲಸ ಮಾಡಲಿವೆ. ಈ ಮೂಲಕ, ಆಡಳಿತದಲ್ಲಿ ಹೆಚ್ಚಿನ ಪಾರದರ್ಶಕತೆ, ಚುರುಕುತನ ಹಾಗೂ ಸರಕಾರದ ಫಲಪ್ರದತೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ.
ಕೊನೆಯ ಚಿಂತನ-ಮಂಥನ ಸಭೆಯಲ್ಲಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತ್ತು ರಾಜ್ಯಸಭಾ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡು ಕೂಡ ಭಾಗವಹಿಸಿದ್ದರು.
ಇದನ್ನೂ ಓದಿ:ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರದಿಂದ ಯುಜಿಸಿ – ನೆಟ್ ಪ್ರವೇಶಪತ್ರ ಬಿಡುಗಡೆ
ಕೌನ್ಸಿಲ್‌ನಲ್ಲಿರುವ ಎಲ್ಲಾ 77 ಸಚಿವರು ಈ ಎಂಟು ಗುಂಪುಗಳಲ್ಲಿ ಒಂದರ ಭಾಗವಾಗಿದ್ದಾರೆ. ಪ್ರತಿ ಗುಂಪು ಒಂಬತ್ತರಿಂದ ಹತ್ತು ಸಚಿವರನ್ನು ಒಳಗೊಂಡಿದ್ದು, ಒಬ್ಬ ಕೇಂದ್ರ ಸಚಿವರನ್ನು ಗುಂಪು ಸಂಯೋಜಕರಾಗಿ ನೇಮಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರತಿ ಸಚಿವರ ಕಛೇರಿಯಲ್ಲಿ ಕೇಂದ್ರದ ಪ್ರಮುಖ ಯೋಜನೆಗಳು ಮತ್ತು ನೀತಿಗಳ ಕಾರ್ಯಕ್ಷಮತೆಯ ಬಗ್ಗೆ ನವೀಕರಣಗಳನ್ನು ನೀಡುವ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸುವುದು, ಆಯಾ ಸಚಿವರು ಮಾಡಿದ ನಿರ್ಧಾರಗಳನ್ನು ಮೇಲ್ವಿಚಾರಣೆ ಮಾಡಲು ಡ್ಯಾಶ್‌ಬೋರ್ಡ್ ಮತ್ತು ಸಭೆಗಳನ್ನು ನಿಗದಿಪಡಿಸುವ ವ್ಯವಸ್ಥೆ ಮತ್ತು ಪತ್ರವ್ಯವಹಾರವನ್ನು ನಿರ್ವಹಿಸುವುದು ಈ ಗುಂಪುಗಳಿಗೆ ನಿಯೋಜಿಸಲಾದ ಕಾರ್ಯಗಳಲ್ಲಿ ಸೇರಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Borewell Tragedy: ಹತ್ತು ದಿನಗಳ ಕಾರ್ಯಾಚರಣೆ… ಕೊನೆಗೂ ಬದುಕಿ ಉಳಿಯಲಿಲ್ಲ ಚೇತನಾ
Borewell Tragedy: 10 ದಿನದ ಕಾರ್ಯಾಚರಣೆ ಬಳಿಕ ಬದುಕಿ ಬಂದ ಬಾಲೆ, ಇದು ಪವಾಡ ಎಂದ ಪೋಷಕರು
Navy: ಜ.15ಕ್ಕೆ ನೌಕಾಪಡೆಗೆ 2 ಯುದ್ಧ ನೌಕೆ, 1 ಸಬ್‌ಮರೀನ್ ಸೇರ್ಪಡೆ
Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್
Viral: ಫೇಸ್‌ಬುಕ್ ಪ್ರೇಯಸಿ ಭೇಟಿಗೆ ಅಕ್ರಮವಾಗಿ ಪಾಕ್‌ಗೆ ತೆರಳಿ ಸಿಕ್ಕಿಬಿದ್ದ ಭಾರತೀಯ ಯುವಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.