![Kanadka-Dooja](https://www.udayavani.com/wp-content/uploads/2025/02/Kanadka-Dooja-415x249.jpg)
![Kanadka-Dooja](https://www.udayavani.com/wp-content/uploads/2025/02/Kanadka-Dooja-415x249.jpg)
Team Udayavani, Oct 13, 2021, 5:20 PM IST
ನವದೆಹಲಿ;- ಕಲ್ಲಿದ್ದಲು ಸಚಿವಾಲಯವು ಬುಧವಾರ(ಅಕ್ಟೋಬರ್ 13) 40 ಹೊಸ ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಇದರಲ್ಲಿ 21 ಹೊಸ ಗಣಿಗಳನ್ನು ಕಲ್ಲಿದ್ದಲು ಗಣಿಗಳ (ವಿಶೇಷ ನಿಬಂಧನೆಗಳು ಅಡಿಯಲ್ಲಿ) ಕಾಯ್ದೆ 2015 ಮತ್ತು 19 ರ ಅಡಿಯಲ್ಲಿ ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ 1957ರ ಅಡಿಯಲ್ಲಿ ನೀಡಲಾಗಿದೆ.
ಕೇಂದ್ರ ಇಂಧನ ಸಚಿವ ರಾಜ್ ಕುಮಾರ್ ಸಿಂಗ್ ಹೇಳಿಕೆಯ ಪ್ರಕಾರ, ಪ್ರಸ್ತುತ 88 ಕಲ್ಲಿದ್ದಲು ಗಣಿಗಾರಿಕಾ ಕಂಪನಿಗಳು ಬೇಡಿಕೆಯಲ್ಲಿವೆ. ಆದರೆ ಮೊದಲ ಎರಡು ಹಂತಗಳಲ್ಲಿ ಒಟ್ಟು 28 ಕಲ್ಲಿದ್ದಲು ಕಂಪನಿಗಳಿಗೆ ಗಣಿಗಾರಿಕೆ ವಹಿಸಿಕೊಳ್ಳಲು ಬೇಕಾದ ಎಲ್ಲಾ ಹರಾಜು ಪ್ರಕ್ರಿಯೆಗಳನ್ನು ಹಂತ ಹಂತವಾಗಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಈ 88 ಗಣಿಗಳಿಂದ ಸುಮಾರು 55 ಶತಕೋಟಿ ಟನ್‌ಗಳಷ್ಟು ಕಲ್ಲಿದ್ದಲಿನ ಒಟ್ಟು ಭೌಗೋಳಿಕ ಸಂಪನ್ಮೂಲಗಳು ಲಭ್ಯವಿವೆ, ಅದರಲ್ಲಿ 57 ಸಂಪೂರ್ಣ ಪರಿಶೋಧಿತ ಗಣಿಗಳು ಮತ್ತು 31 ಭಾಗಶಃ ಪರಿಶೋಧಿತ ಗಣಿಗಳಾಗಿವೆ. ನಾಲ್ಕು ಕೋಕಿಂಗ್ ಕಲ್ಲಿದ್ದಲು ಗಣಿಗಳಿವೆ,” ಎಂದು ಕಲ್ಲಿದ್ದಲು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಿದೆ.
ಮಾಧ್ಯಮಗಳೊಂದಗೆ ಮಾತನಾಡಿದ ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಕಲ್ಲಿದ್ದಲು ಸಚಿವಾಲಯ ಮತ್ತು ಭಾರತ ಸರ್ಕಾರವು ಕಲ್ಲಿದ್ದಲು ವಲಯವನ್ನು ಸುಧಾರಿಸಲು ಮತ್ತು ರಾಷ್ಟ್ರದ ಆರ್ಥಿಕತೆಯ ಮೌಲ್ಯಗಳನ್ನು ಹೆಚ್ಚಿಸಲು ಪ್ರಧಾನಿ ಮೋದಿಯವರ ನೇತ್ರುತ್ವದಲ್ಲಿ ನಿರಂತರ ಪ್ರಯತ್ನ ನಡೆಸುತ್ತಿದೆ ಹೇಳಿದರು. ಮಾತು ಮುಂದುವರೆಸಿದ ಜೋಶಿ ದೇಶದ ಇಂಧನ ಬಳಕೆಯ ಮಾದರಿಯ ಬಗ್ಗೆ ಮತ್ತು ಕೋವಿಡ್ ಪೂರ್ವಕ್ಕಿಂತ ಈಗ ಇಂಧನ ಬಳಕೆಯಲ್ಲಿ ಹೇಗೆ ಹೆಚ್ಚಳವಾಗಿವೆ ಎಂಬ ವಿಷಯಗಳ ಬಗ್ಗೆ ಬೆಳಕು ಚೆಲ್ಲಿದರು.
ಇದನ್ನೂ ಓದಿ;- ಸಲೀಂ–ಉಗ್ರಪ್ಪ ಮಾತುಕತೆ ಪಕ್ಷಕ್ಕೆ ಮುಜುಗರವಾಗಿದೆ: ಡಿ.ಕೆ. ಶಿವಕುಮಾರ್ |
ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಭಾರತವು ತಲಾ ಅತ್ಯಂತ ಕಡಿಮೆ ಇಂಧನ ಬಳಕೆ ಮಾಡುತ್ತಿದೆ. 2040 ರ ವೇಳೆಗೆ ದೇಶದ ವಿದ್ಯುತ್ ಬೇಡಿಕೆಯು ದ್ವಿಗುಣಗೊಳ್ಳುವ ನಿರೀಕ್ಷೆಯಿದೆ, ಇದಕ್ಕೆ ಸರ್ಕಾರವು ದುರ್ಗಮ ಹಳ್ಳಿಗಳನ್ನು ಇಂಧನ ಮತ್ತು ಕಲ್ಲಿದ್ದಲು ಸಂಪನ್ಮೂಲಗಳ ಸಹಾಯದೊಂದಿಗೆ ಸಂಪರ್ಕಿಸಲು ಕೈಗೊಂಡ ಪ್ರಮುಖ ಕ್ರಮಗಳು ಕಾರಣ ಎಂದರು. ಮುಂದಿನ 35-40 ವರ್ಷಗಳಲ್ಲಿ ದೇಶದ ಇಂಧನ ಮಿಶ್ರಣದಲ್ಲಿ ಕಲ್ಲಿದ್ದಲು ಪ್ರಮುಖ ಪಾತ್ರ ವಹಿಸುತ್ತದೆ ” ಎಂದು ಪುನರುಚ್ಛರಿಸಿದರು.
ಕಲ್ಲಿದ್ದಲು ಅನಿಲೀಕರಣ ಅಥವಾ ದ್ರವೀಕರಣಕ್ಕಾಗಿ ಕಲ್ಲಿದ್ದಲಿನ ಮಾರಾಟ ಅಥವಾ ಬಳಕೆಯ ಅಂತಿಮ ಕೊಡುಗೆಯ ಮೇಲೆ ಶೇಕಡಾ 20 ರಷ್ಟು ರಿಯಾಯಿತಿಯನ್ನು ಹೆಚ್ಚಿಸಲಿದ್ದೇವೆ ಎಂದು ಅವರು ಘೋಷಿಸಿದರು.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Surathkal: ಆರು ಬಾರಿಯ ಚಾಂಪಿಯನ್, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
You seem to have an Ad Blocker on.
To continue reading, please turn it off or whitelist Udayavani.