‘ದೇಶಕ್ಕೆ ಮೋದಿ- ಮಹಾರಾಷ್ಟ್ರಕ್ಕೆ ಶಿಂಧೆ’; ಮೂಲೆಗುಂಪಾದರೆ ಫಡ್ನವಿಸ್? ಏನಿದು ಜಾಹೀರಾತು?
Team Udayavani, Jun 13, 2023, 5:33 PM IST
ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ-ಬಿಜೆಪಿ ಮೈತ್ರಿಯಲ್ಲಿ ಬಿರುಕು ಮೂಡಿದೆ ಎಂಬ ವರದಿಗಳು ಹರಿದಾಡುತ್ತಿರುವಾಗಲೇ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಶಿವಸೇನೆ ನೀಡಿರುವ ಜಾಹೀರಾತು ಹೊಸ ವಿವಾದದ ಕೇಂದ್ರ ಬಿಂದುವಾಗಿದೆ.
“ದೇಶದಲ್ಲಿ ಮೋದಿ, ಮಹಾರಾಷ್ಟ್ರದಲ್ಲಿ ಶಿಂಧೆ” ಎಂಬ ಕ್ಯಾಚ್ ಲೈನ್ ನೊಂದಿಗೆ ನೀಡಿರುವ ಪತ್ರಿಕಾ ಜಾಹೀರಾತು ಮಹಾರಾಷ್ಟ್ರದ ರಾಜಕೀಯ ವಲಯಗಳಲ್ಲಿ ಅನೇಕ ಗುಮಾಣಿಗಳನ್ನು ಎಬ್ಬಿಸಿದೆ. ಈ ಹಿಂದೆ, “ದೆಹಲಿ ಮೇ ನರೇಂದ್ರ ಔರ್ ರಾಜ್ಯ ಮೇ ದೇವೇಂದ್ರ” ಎಂಬ ಘೋಷಣೆ ಮಹಾರಾಷ್ಟ್ರ ರಾಜ್ಯದಲ್ಲಿ ಜನಪ್ರಿಯವಾಗಿತ್ತು.
ಖಾಸಗಿ ಚಾನೆಲ್ ಮತ್ತು ಏಜೆನ್ಸಿಯ ಇತ್ತೀಚಿನ ಜಂಟಿ ಸಮೀಕ್ಷೆಯ ಆಧಾರದಲ್ಲಿ ಏಕನಾಥ್ ಶಿಂಧೆ ಅವರು ತಮ್ಮ ಡೆಪ್ಯೂಟಿ ದೇವೇಂದ್ರ ಫಡ್ನವಿಸ್ ಗಿಂತ ಹೆಚ್ಚು ಜನಪ್ರಿಯತೆಯನ್ನು ಹೊಂದಿದ್ದಾರೆ ಎಂದು ಜಾಹೀರಾತು ಹೇಳುತ್ತದೆ.
ಇದನ್ನೂ ಓದಿ:Virat Kohli ಯಾಕೆ ಹಾಗೆ ಮಾಡಿದರೆಂದು ಅವರೇ ಹೇಳಬೇಕು..: ಗಂಗೂಲಿ
ಸರ್ವೆಯ ಪ್ರಕಾರ ಮಹಾರಾಷ್ಟ್ರದ ಶೇಕಡಾ 26.1 ಜನರು ಮುಂದಿನ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಅವರನ್ನು ನೋಡಬಯಸುತ್ತಾರೆ. ಇದೇ ವೇಳೆ 23.2% ಜನರು ದೇವೇಂದ್ರ ಫಡ್ನವಿಸ್ ಅವರನ್ನು ಮುಂದಿನ ಸಿಎಂ ಆಗಿ ನೋಡುತ್ತಾರೆ.
ಸಮೀಕ್ಷೆಯ ಪ್ರಕಾರ ಬಿಜೆಪಿಗೆ 30.2% ಮತ್ತು ಶಿಂಧೆ ಸೇನೆ 16.2% ಜನರ ಬೆಂಬಲವನ್ನು ಹೊಂದಿದೆ ಎಂದು ಜಾಹೀರಾತು ಹೇಳುತ್ತದೆ. ಒಟ್ಟಾಗಿ, ಸಮೀಕ್ಷೆ ಮಾಡಿದ ಜನರ ಗುಂಪಿನಲ್ಲಿ ಮೈತ್ರಿಯು 46% ಕ್ಕಿಂತ ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ.
ಪ್ರಧಾನಿ ಮೋದಿ ಮತ್ತು ಏಕನಾಥ್ ಶಿಂಧೆ ಅವರು ಪ್ರಾರಂಭಿಸಿದ ಸಾರ್ವಜನಿಕ ಕಲ್ಯಾಣ ಯೋಜನೆಗಳ ಸರಣಿಯಿಂದಾಗಿ ಜನಪ್ರಿಯತೆ ಹೆಚ್ಚಿದೆ ಎಂದು ಜಾಹೀರಾತು ಹೇಳಿದೆ.
ಇದರ ಮಧ್ಯೆ, ಉದ್ಧವ್ ಠಾಕ್ರೆ ಅವರ ಬಣದ ಸಂಸದ, ಸಂಜಯ್ ರಾವುತ್ ಅವರು ಪಕ್ಷವನ್ನು ಸ್ಥಾಪಿಸಿದ ಬಾಳಾಸಾಹೇಬ್ ಠಾಕ್ರೆ ಬಗ್ಗೆ ಯಾವುದೇ ಉಲ್ಲೇಖವಿಲ್ಲದೇ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿ ಮಾಡಿದ ಜಾಹೀರಾತಿನ ವಿರುದ್ಧ ವಾಗ್ದಾಳಿ ನಡೆಸಿದರು.
कोट्यावधी रुपये खर्च करून केलेली ही जाहिरातबाजी.या आनंदाच्या क्षणी मा.मू. एकनाथ शिंदे यांना शिवसेना प्रमुख बाळासाहेब ठाकरे यांचा नेमका विसर पडलाय..आम्हीच
शिवसेना हा त्यांचा फुगा फुटला. जाहिरातीत शिवसेना प्रमुख बालासाहेब ठाकरे यांचा फोटो टाकायला यांची तंतरली.
मोदी शहांचे इतके… pic.twitter.com/owsumBeN12— Sanjay Raut (@rautsanjay61) June 13, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.