ಜಿ7 ಶೃಂಗಕ್ಕೆ ಮೋದಿಗೆ ಆಹ್ವಾನ
Team Udayavani, Jan 18, 2021, 6:53 AM IST
ಹೊಸದಿಲ್ಲಿ: ಜೂನ್ ತಿಂಗಳಲ್ಲಿ ನಡೆ ಯುವ ಜಿ7 ಶೃಂಗದಲ್ಲಿ ಅತಿಥಿಯಾಗಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯುನೈಟೆಡ್ ಕಿಂಗ್‌ಡಮ್(ಯು.ಕೆ.) ಆಹ್ವಾನ ನೀಡಿದೆ. ಜತೆಗೆ ಈ ಶೃಂಗ ಆರಂಭಕ್ಕೂ ಮುನ್ನ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿಯನ್ನೂ ಬ್ರಿಟಿಷ್ ಹೈಕಮಿಷನ್ ನೀಡಿದೆ.
ಶೃಂಗದಲ್ಲಿ ಕೊರೊನಾ ಸೋಂಕು, ಹವಾಮಾನ ವೈಪರೀತ್ಯ, ತಂತ್ರಜ್ಞಾನಕ್ಕೆ ಸಂಬಂಧಿಸಿದ ಬದಲಾವಣೆಗಳು, ವೈಜ್ಞಾನಿಕ ಸಂಶೋಧನೆಗಳು, ಮುಕ್ತ ವ್ಯಾಪಾರ ಮತ್ತಿತರ ವಿಚಾರಗಳ ಕುರಿತು ಪ್ರಮುಖವಾಗಿ ಚರ್ಚೆಯಾಗಲಿದೆ.
ಜೂನ್ 11ರಿಂದ 13ರ ವರೆಗೆ ಯುಕೆಯ ಕಾರ್ನ್ವಾಲ್‌ನಲ್ಲಿ ಜಿ7 ಶೃಂಗ ನಡೆಯಲಿದ್ದು, ಭಾರತದ ಜತೆಗೆ ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾಗೂ “ಅತಿಥಿ ದೇಶ’ಗಳಾಗಿ ಪಾಲ್ಗೊ ಳ್ಳಲು ಆಹ್ವಾನ ನೀಡಲಾಗಿದೆ. ಜಿ7ನಲ್ಲಿ ಜಗತ್ತಿನ 7 ಪ್ರಜಾಸತ್ತಾತ್ಮಕ ರಾಷ್ಟ್ರಗಳಾದ ಯುಕೆ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಯುಎಸ್‌ಎ ಮತ್ತು ಐರೋಪ್ಯ ಒಕ್ಕೂಟ ಒಳಗೊಂಡಿದೆ. ಆಹ್ವಾನ ನೀಡುವ ವೇಳೆ ಭಾರತವನ್ನು “ಜಗತ್ತಿನ ಫಾರ್ಮಸಿ’ ಎಂದು ಬಣ್ಣಿಸಿರುವ ಯುಕೆ, ಕೊರೊನಾ ಲಸಿಕೆ ಅಭಿವೃದ್ಧಿಯ ವಿಚಾರಕ್ಕೆ ಸಂಬಂಧಿಸಿ ಭಾರತದ ಪರಿಶ್ರಮವನ್ನು ಶ್ಲಾ ಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ
Tirupati Tragedy: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ; ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?
Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
Odisha: ‘ಪ್ರವಾಸಿ ಭಾರತೀಯ ದಿವಸ್’ ಉದ್ಘಾಟಿಸಿದ ಪ್ರಧಾನಿ ಮೋದಿ; ವಿಶೇಷ ರೈಲಿಗೂ ಚಾಲನೆ
MUST WATCH
ಹೊಸ ಸೇರ್ಪಡೆ
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Friendship: ಸ್ನೇಹವೇ ಸಂಪತ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.