ಆಸಿಯಾನ್ ರಾಷ್ಟ್ರಗಳಿಗೆ ಧೈರ್ಯ ತುಂಬಿದ ಮೋದಿ
Team Udayavani, Nov 13, 2020, 12:52 AM IST
ನವದೆಹಲಿ: ಚೀನಾ ಜತೆಗಿನ ಸಮುದ್ರ ಗಡಿಬಿಕ್ಕಟ್ಟು ಹೊಂದಿರುವ ರಾಷ್ಟ್ರಗಳಿಗೆ ಪ್ರಧಾನಿ ನರೇಂದ್ರ ಮೋದಿ ಧೈರ್ಯ ತುಂಬಿದ್ದಾರೆ. “ಆಸಿಯಾನ್ ರಾಷ್ಟ್ರಗಳೊಂದಿಗಿನ ಸಂಪರ್ಕ ವರ್ಧನೆ ಭಾರತದ ಪ್ರಮುಖ ಆದ್ಯತೆ’ ಎಂದು ಭರವಸೆ ನೀಡಿದ್ದಾರೆ.
ಆಸಿಯಾನ್ ರಾಷ್ಟ್ರಗಳೊಂದಿಗಿನ ವರ್ಚುವಲ್ ಶೃಂಗದಲ್ಲಿ ಅವರು, “ಸಾಮಾಜಿಕ, ತಂತ್ರಜ್ಞಾನ, ಆರ್ಥಿಕತೆ ಸೇರಿದಂತೆ ಆಸಿಯಾನ್ನ ಎಲ್ಲ ಕ್ಷೇತ್ರಗಳೊಂದಿಗೆ ಸಂಪರ್ಕ ಸಾಧಿಸುವುದು ಭಾರತದ ಮುಖ್ಯ ಉದ್ದೇಶ. ಕೆಲವು ವರ್ಷಗಳಿಂದ ನಾವು ಈ ಎಲ್ಲ ರಂಗದಲ್ಲೂ ಹತ್ತಿರ ಬಂದಿದ್ದೇವೆ ಎಂದರು.
ಆಸಿಯಾನ್ ಯಾವಾಗಲೂ ನಮ್ಮ ಪೂರ್ವ ನೀತಿ ಕಾಯ್ದೆಯ ಪ್ರಮುಖ ಭಾಗವೇ ಆಗಿದೆ. ಭಾರತದ ಇಂಡೋ- ಪೆಸಿಫಿಕ್ ಕಾರ್ಯ ತಂತ್ರಗಳು, ಆಸಿಯಾನ್ ಕೂಟದ ಇಂಡೋ-ಪೆಸಿಫಿಕ್ ದೃಷ್ಟಿಕೋನಗಳ ನಡುವೆ ಬಹಳ ಸಾಮ್ಯತೆ ಇದೆ. ಆಸಿಯಾನ್ನ ಎಲ್ಲ ವಲಯಗಳ ಭದ್ರತೆ ಮತ್ತು ಅಭಿ ವೃದ್ಧಿಗೆ ಭಾರತ ಸ್ಪಂದಿಸಲಿದೆ ಎಂದು ಹೇಳಿದರು.
ಸಭೆಯಲ್ಲಿ ಮೋದಿ ಜತೆಗೆ ವಿಯೆಟ್ನಾಂ ಪ್ರಧಾನಿ ಎನ್ಗ್ಯುಯೆನ್ ಕ್ಸುವಾನ್ ಫುಕ್ ಗಣ್ಯ ಉಪಸ್ಥಿತಿ ವಹಿಸಿದ್ದರು. ಇಂಡೋ ನೇಷ್ಯಾ, ಥಾಯ್ಲೆಂಡ್, ಸಿಂಗಾಪುರ, ಫಿಲಿಪ್ಪೀನ್ಸ್, ವಿಯೆಟ್ನಾಂ, ಬ್ರುನೀ, ಕಾಂಬೋ ಡಿಯಾ, ಮ್ಯಾನ್ಮಾರ್, ಲಾವೋಸ್- ಆಸಿಯಾನ್ನ ಸದಸ್ಯ ರಾಷ್ಟ್ರ ಗಳು. ಈ ಎಲ್ಲ ರಾಷ್ಟ್ರಗಳೂ ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಯಲ್ಲಿದ್ದು, ಚೀನಾ ಜತೆಗೆ ಗಡಿ ಬಿಕ್ಕಟ್ಟನ್ನು ಹೊಂದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!
Enforcement Directorate: ಕ್ರಿಮಿನಲ್ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ
Sabarimala: ತಂಗಅಂಗಿ ಶೋಭಾಯಾತ್ರೆ ಆರಂಭ
Encounter: ಉತ್ತರಪ್ರದೇಶದಲ್ಲಿ ಎನ್ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Koteshwara: ಟಯರ್ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?
2nd ODI: ವನಿತಾ ಏಕದಿನ ಸರಣಿ: ಇಂದು ಭಾರತ-ವಿಂಡೀಸ್ 2ನೇ ಪಂದ್ಯ
Enforcement Directorate: ಕ್ರಿಮಿನಲ್ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.