ಪ್ರಧಾನಿ ಮೋದಿ ಬಲಿಷ್ಠ ವ್ಯಕ್ತಿ: ರಜನಿ
Team Udayavani, Nov 14, 2018, 9:44 AM IST
ಚೆನ್ನೈ: ಮುಂದಿನ ಲೋಕಸಭೆ ಚುನಾವಣೆಗಾಗಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ವಿಪಕ್ಷಗಳ ಮೈತಿಕೂಟ ರಚನೆಗೆ ಮುಂದಾಗುತ್ತಿರುವಂತೆಯೇ ತಮಿಳುನಾಡಿನಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ. ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಪ್ರಧಾನಿ ನರೇಂದ್ರ ಮೋದಿಯೇ ಅತ್ಯಂತ ಬಲಿಷ್ಠ ವ್ಯಕ್ತಿ ಎಂದು ಪರೋಕ್ಷ ವಾಗಿ ಹೇಳಿದ್ದಾರೆ. ಚೆನ್ನೈನಲ್ಲಿ ಮಂಗಳವಾರ ಮಾತನಾಡಿದ ಅವರು, ಬಲಶಾಲಿಯಾಗಿರುವ ಒಬ್ಬನ ವಿರುದ್ಧ ಹತ್ತು ಮಂದಿ ಒಟ್ಟುಗೂಡುತ್ತಾರೆ ಎಂದಾದರೆ ಶಕ್ತಿಶಾಲಿ ಯಾರು ಎಂದು ತಿಳಿಯ ಬೇಕಾಗುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ. ಹಾಗಿದ್ದರೆ ಪ್ರಧಾನಿ ಮೋದಿಯವರು ಬಲಶಾಲಿಯೇ ಎಂಬ ಪ್ರಶ್ನೆಗೆ “2019ರಲ್ಲಿ ನಿರ್ಧಾರವಾಗಲಿದೆ’ ಎಂದರು.
ಸೋಮವಾರ ಮಾತನಾಡಿದ್ದ ವೇಳೆ ಬಿಜೆಪಿ ಇತರ ಪಕ್ಷಗಳಿಗೆ ಅಪಾಯಕಾರಿ ಯಾಗಿದೆ ಎಂಬ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ ಎಂದು ವಿವರಣೆ ನೀಡಿದ್ದಾರೆ ತಲೈವಾ. ಒಂದು ವೇಳೆ ಪ್ರತಿಪಕ್ಷಗಳು ಬಿಜೆಪಿ ಅಪಾಯಕಾರಿ ಎಂದು ತಿಳಿದುಕೊಂಡರೆ ಅದು ಅವರಿಗೆ ಅಪಾಯಕಾರಿಯಾಗಿರ ಲಿದೆ ಎಂದು ಹೇಳಿದ್ದಾರೆ. ಬಿಜೆಪಿ ಏನು ಎಂಬುದರ ಬಗ್ಗೆ ಜನರೇ ನಿರ್ಧರಿಸಲಿದ್ದಾರೆ ಎಂದಿದ್ದಾರೆ. ತಮ್ಮ ಮಾತುಗಳ ಹಿಂದೆ ಬಿಜೆಪಿ ಇದೆ ಎಂಬ ವಾದ ಸರಿಯಲ್ಲ. ತಮ್ಮ ನಡೆ-ನುಡಿಯ ಹಿಂದೆ ದೇವರು ಮತ್ತು ತಮಿಳುನಾಡಿನ ಜನರು ಇದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇದೇ ವೇಳೆ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಮಂಗÙ ವಾರ ಚೆನ್ನೈನಲ್ಲಿ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌ರನ್ನು ಭೇಟಿ ಯಾಗಿದ್ದರು. ಬಳಿಕ ಮಾತನಾಡಿದ ಅವರು, ಮಹಾಮೈತ್ರಿ ಕೂಟ ಎನ್ನುವುದು ನಿಜವಾಗಲಿದೆ ಎಂದಿದ್ದಾರೆ. ರಜನಿಕಾಂತ್ ಪ್ರಧಾನಿ ಮೋದಿ ಬಲಿಷ್ಠ ವ್ಯಕ್ತಿ ಎಂದಿರುವ ಬಗ್ಗೆ ಉತ್ತರಿಸಿದ ಯೆಚೂರಿ 2004ರಲ್ಲಿ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜ ಪೇಯಿ ಚುನಾವಣೆಯಲ್ಲಿ ಸೋತಿದ್ದರು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಪತ್ನಿಯನ್ನು ಕೊಂದು ದೇಹವನ್ನು ತುಂಡರಿಸಿ ಕುಕ್ಕರ್ ನಲ್ಲಿ ಬೇಯಿಸಿದ ನಿವೃತ್ತ ಯೋಧ
Mumbai: ಸೈಫ್ ಮೇಲೆ ಹಲ್ಲೆಗೆ ಬಳಸಿದ್ದ ಚಾಕುವಿನ ಮೂರನೇ ಭಾಗ ಬಾಂದ್ರಾ ಕೆರೆ ಬಳಿ ಪತ್ತೆ
Holy Dip: ಮಹಾಕುಂಭದಲ್ಲಿ ಸಿಎಂ ಯೋಗಿ ಸಂಪುಟ ಸದಸ್ಯರ ಪವಿತ್ರ ಸ್ನಾನ
Crew Module: ಗಗನಯಾನಕ್ಕೆ ಮಾನವರ ಕರೆದೊಯ್ಯುವ ನೌಕೆ ಶ್ರೀಹರಿಕೋಟಾಕ್ಕೆ ರವಾನೆ
Mosque Survey: ಮಥುರಾ ಮಸೀದಿ ಸಮೀಕ್ಷೆ… ಸುಪ್ರೀಂ ತಡೆಯಾಜ್ಞೆ ಮುಂದುವರಿಕೆ