Modi ಉಪನಾಮ ಪ್ರಕರಣ: ಕ್ಷಮೆಯಾಚಿಸಲ್ಲ ಎಂದ ರಾಹುಲ್ ಗಾಂಧಿ
Team Udayavani, Aug 3, 2023, 7:00 AM IST
ನವದೆಹಲಿ: ಮೋದಿ ಉಪನಾಮ ಪ್ರಕರಣದಲ್ಲಿ ನಾನು ತಪ್ಪಿಸ್ಥನಲ್ಲ ಹಾಗಾಗಿ ಈ ಸಂಬಂಧಿಸಿದಂತೆ ಕ್ಷಮೆ ಯಾಚಿಸುವುದೂ ಇಲ್ಲವೆಂದು ಕಾಂಗ್ರೆಸ್ ನಾಯಕ, ಮಾಜಿ ಸಂಸದ ರಾಹುಲ್ ಗಾಂಧಿ ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ತಿಳಿಸಿದ್ದಾರೆ.
ಪ್ರಕರಣದಲ್ಲಿ ರಾಹುಲ್ ದೋಷಿ ಎಂದು ಗುಜರಾತ್ ನ್ಯಾಯಾಲಯ ನೀಡಿರುವ ತೀರ್ಪನ್ನು ವಜಾಗೊಳಿಸುವಂತೆ ಕೋರಿ ರಾಹುಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಅಲ್ಲದೇ, ಈ ಸಂಬಂಧಿಸಿದ ಅಫಿಡವಿಟ್ ಅನ್ನೂ ಸಲ್ಲಿಸಿದ್ದಾರೆ. ಈ ವೇಳೆ ತಾನು ಪ್ರಕರಣದಲ್ಲಿ ಕ್ಷಮೆಯಾಚಿಸಿ ಖುಲಾಸೆ ಮಾಡಿಕೊಳ್ಳಬೇಕಿದಿದ್ದರೆ, ಅದನ್ನು ಯಾವತ್ತೋ ಮಾಡಿರುತ್ತಿದ್ದೆ. ಆದರೆ, ನಾನು ದೋಷಿಯೇ ಅಲ್ಲ, ಹಾಗಿದ್ದಾಗ ಕ್ಷಮೆಯಾಚಿಸುವುದೂ ಇಲ್ಲ ಎಂದು ಹೇಳಿದ್ದಾರೆ.
ಜತೆಗೆ ಮೋದಿ ಎಂಬ ಸಮುದಾಯಕ್ಕೆ ನನ್ನ ಮಾತಿಂದ ನೋವುಂಟಾಗಿದೆ ಎಂಬುದು ಸಮಂಜಸವಲ್ಲ, ಕಾರಣ ಮೋದಿ ಎನ್ನುವ ಸಮುದಾಯವೇ ಇಲ್ಲ. ಇರುವುದು ಮೋದಿ ವನಿಕ ಸಮಾಜ್ ಹಾಗೂ ಮೋದಿ ಘಂಚಿ ಸಮಾಜ್ ಮಾತ್ರ ಎಂಬುದಾಗಿಯೂ ರಾಹುಲ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.