ದಶಮಿಯಂದು 7 ರಕ್ಷಣಾ ಪಿಎಸ್‌ಯುಗಳು ಲೋಕಾರ್ಪಣೆ
Team Udayavani, Oct 12, 2021, 10:00 PM IST
ನವದೆಹಲಿ: ಏಳು ಹೊಸ ಸಾರ್ವಜನಿಕ ವಲಯದ ರಕ್ಷಣಾ ಕಂಪನಿಗಳನ್ನು ಇದೇ 15ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.
ದೇಶದ ರಕ್ಷಣಾ ಉತ್ಪಾದನಾ ವಲಯದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಆರ್ಡನನ್ಸ್ ಫ್ಯಾಕ್ಟರಿ ಬೋರ್ಡ್(ಒಎಫ್ಬಿ) ಅನ್ನು ವಿಸರ್ಜಿಸಲು ಕೇಂದ್ರ ಸಂಪುಟ ಅನುಮೋದನೆ ನೀಡಿದ 4 ತಿಂಗಳಲ್ಲೇ ಈ ಬೆಳವಣಿಗೆ ನಡೆದಿದೆ.
ಒಎಫ್ ಬಿ ವ್ಯಾಪ್ತಿಯಲ್ಲಿದ್ದ 41 ಫ್ಯಾಕ್ಟರಿಗಳನ್ನು ವಿಭಜಿಸಿ ರಚಿಸಲಾದ ಈ 7 ಪಿಎಸ್‌ಯುಗಳನ್ನು ವಿಜಯದಶಮಿ ದಿನ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಈ ಪಿಎಸ್‌ಯುಗಳಿಗಾಗಿ ಬರೋಬ್ಬರಿ 65 ಸಾವಿರ ಕೋಟಿ ರೂ.ಗಳ ಕಾಂಟ್ರ್ಯಾಕ್ಟ್ಗಳಿಗೆ ರಕ್ಷಣಾ ಸಚಿವಾಲಯ ಅನುಮತಿ ನೀಡಿದೆ.
ಈ ಕಂಪನಿಗಳು ದೇಶದ ರಕ್ಷಣೆಗೆ ಅಗತ್ಯವಿರುವ ಶಸ್ತ್ರಾಸ್ತ್ರಗಳು, ಸ್ಫೋಟಕಗಳು, ವಾಹನಗಳು, ಅಸ್ತ್ರಗಳು ಹಾಗೂ ಇತರೆ ಸಲಕರಣೆಗಳು, ಸೇನಾಪಡೆಗಳಿಗೆ ಬೇಕಾಗುವ ವಸ್ತುಗಳು, ಆಪ್ಟೋ-ಎಲೆಕ್ಟ್ರಾನಿಕ್ಸ್ ಗೇರ್‌ಗಳು, ಪ್ಯಾರಾಚೂಟ್‌ನಂತಹ ಉತ್ಪನ್ನಗಳನ್ನು ತಯಾರಿಸಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.