ರಣವಿಕ್ರಮ “ಮೋದಿ’; ಕೋವಿಡ್ 19 ಎದುರಿಸುವಲ್ಲಿ ಅಗ್ರ ನಾಯಕ
Team Udayavani, Apr 23, 2020, 6:00 AM IST
ಹೊಸದಿಲ್ಲಿ: ತಮ್ಮ ದೇಶ ಗಳಲ್ಲಿ ಕೋವಿಡ್ 19 ಚಿವುಟಿ ಹಾಕಲು ಉತ್ಕೃಷ್ಟ ಕ್ರಮಗಳನ್ನು ಕೈಗೊಂಡ ವಿಶ್ವದ ಟಾಪ್10 ನಾಯಕ ರಲ್ಲಿ ಪ್ರಧಾನಿ ನರೇಂದ್ರ ಮೋದಿ ಯವರಿಗೆ ಅಗ್ರಸ್ಥಾನ ಲಭಿಸಿದೆ.
ಜ. 1ರಿಂದ ಎ. 14ರ ವರೆಗೆ ಕೋವಿಡ್ 19 ವಿರುದ್ಧ ಕ್ರಮ ಕೈಗೊಂಡ ವಿಶ್ವದ 10 ಪ್ರಮುಖ ರಾಷ್ಟ್ರಗಳಲ್ಲಿ ಅಮೆರಿಕದ “ಮಾರ್ನಿಂಗ್ ಕನ್ಸಲ್ಟ್ ಏಜೆನ್ಸಿ’ ನಡೆಸಿರುವ ಸಮೀಕ್ಷೆ ಆಧಾರಿತ ಸಂಶೋಧನೆಯಲ್ಲಿ ಮೋದಿ ಕ್ರಮಗಳೇ ಪರಿಣಾಮಕಾರಿ ಎಂಬುದು ಸಾಬೀತಾಗಿದೆ.
ಪ್ರತಿ ರಾಷ್ಟ್ರದಲ್ಲಿ 18ಕ್ಕಿಂತ ಹೆಚ್ಚಿನ ವಯೋಮಾನದ ನಾಗರಿಕರ ಅಭಿಪ್ರಾಯ ಪಡೆದು ಒಟ್ಟಾರೆ ಜನಮನ್ನಣೆ (ನೆಟ್ ಅಪ್ರೂವಲ್) ಆಧಾರದಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿತ್ತು. ಒಟ್ಟಾರೆ ಜನ ಮನ್ನಣೆಯನ್ನು ಸಮೀಕ್ಷಾ ವರದಿ ಯಲ್ಲಿ ರೇಖಾ ನಕ್ಷೆಗಳ ಮೂಲಕ ವಿಷದೀಕರಿಸಲಾಗಿದೆ.
ಆ ರೇಖಾ ನಕ್ಷೆಗಳ ಪ್ರಕಾರ, ಪ್ರಧಾನಿ ಮೋದಿ ಜನ ಮನ್ನಣೆಯಲ್ಲಿ 68 ಅಂಕ ಗಳಿಸಿ ನಂಬರ್ 1 ಪಟ್ಟಕ್ಕೇರಿದ್ದಾರೆ. 2ನೇ ಸ್ಥಾನದಲ್ಲಿ ಮೆಕ್ಸಿಕೋ ಅಧ್ಯಕ್ಷ ಆಂದ್ರೆಸ್ ಮನ್ಯು ಯೆಲ್ ಲೊಪೇಜ್ ಒಬ್ರಾಂಡನ್ (39 ಅಂಕ) ಹಾಗೂ 3ನೇ ಸ್ಥಾನದಲ್ಲಿ ಯು.ಕೆ. ಪ್ರಧಾನಿ ಬೋರಿಸ್ ಜಾನ್ಸನ್ (35 ಅಂಕ) ಇದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
Maha Election; ಚು.ಆಯೋಗದಿಂದ ಉದ್ಧವ್ ಠಾಕ್ರೆ ಬ್ಯಾಗ್ ಪರಿಶೀಲನೆ, ವಿವಾದ
Manipura: ಇಬ್ಬರು ಶವ ಪತ್ತೆ, ಮಕ್ಕಳು ಸೇರಿ 6 ಮಂದೆ ಕಾಣೆ
ದಾವೂದ್, ನಟ ಸಲ್ಮಾನ್ ಸಂಪರ್ಕ ಇದ್ದಿದ್ದಕ್ಕೆ ಸಿದ್ಧಿಕಿ ಹತ್ಯೆ: ಶೂಟರ್
Ranchi: ವಕ್ಫ್ ಮಂಡಳಿಯು ಕರ್ನಾಟಕದಲ್ಲಿ ದೇಗುಲ, ರೈತರ ಭೂಮಿಯ ಕಸಿದಿದೆ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.