ನಾನೇ ಚೌಕಿದಾರ್, ನಾನೇ ಕಾಮ್ ದಾರ್

ಸಾಮಾಜಿಕ ಜಾಲತಾಣದಲ್ಲೂ ಕಿಂಗ್‌

Team Udayavani, May 24, 2019, 10:38 AM IST

modi4

ನರೇಂದ್ರ ಮೋದಿಯವರ ವ್ಯಕ್ತಿತ್ವ, ಟ್ರೆಂಡ್‌ ಸೃಷ್ಟಿಸುವಲ್ಲಿ ಈ ಚುನಾವಣೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದು ವಿಶೇಷಣಗಳು. ಇದನ್ನು ಪ್ರಚಾರದ ಸಮಯದ ಕೆಲವೊಮ್ಮೆ ಮೋದಿಯವರೇ ಪ್ರಸ್ತಾವಿಸಿದ್ದರೆ, ಇನ್ನು ಕೆಲವನ್ನು ಬಿಜೆಪಿ ಟ್ರೆಂಡ್‌ ಆಗಿ ರೂಪಿಸಿತ್ತು.

ಚುನಾವಣೆ ಪ್ರಚಾರದ ದೃಷ್ಟಿಯಿಂದ ಈ ಬಾರಿ ಎಲ್ಲ ಪಕ್ಷಗಳೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದವು. ಆದರೆ ಬಿಜೆಪಿ ಅವುಗಳಿಗಿಂತ ದುಪ್ಪಟ್ಟು ಹಣವನ್ನು ಇದಕ್ಕೆ ಖರ್ಚು ಮಾಡಿತ್ತು. ಅಷ್ಟೇ ಅಲ್ಲದೆ ಮೋದಿಯನ್ನು ಪ್ರತಿ ಬಾರಿಯೂ ಪರಿಣಾಮಕಾರಿಯಾಗಿ ಬಿಂಬಿಸಿತು. ಮೋದಿ ಇಲ್ಲದಿದ್ದರೆ ಬೇರೆ ವಿಚಾರವೇ ಇಲ್ಲ ಎಂಬಷ್ಟರ ಮಟ್ಟಿಗೆ ಪ್ರಚಾರ ಮಾಡಿತು. ಸಾಮಾಜಿಕ ಜಾಲತಾಣದಲ್ಲಿ ಸರಕಾರದ ಯೋಜನೆಗಳ ಬಗ್ಗೆ ಶೇರ್‌ ಮಾಡುವುದರೊಂದಿಗೆ ಪ್ರತಿಪಕ್ಷಗಳ ಪ್ರತಿ ಪಟ್ಟಿಗೂ ಮರು ಪಟ್ಟು ಹಾಕುತ್ತಿತ್ತು. ಬಿಜೆಪಿಗೆ ಸಮರ್ಥವಾದ ಉತ್ತರ ನೀಡುವಲ್ಲಿ ವಿಪಕ್ಷಗಳು ಎಡವುತ್ತಿದ್ದುದರಿಂದ ಸಹಜವಾಗಿ ಸಾಮಾಜಿಕ ಜಾಲತಾಣದಲ್ಲಿ ಮೋದಿಯ ಕೈ ಮೇಲಾಗಿತ್ತು.

ಅಭಿಮಾನಿಗಳ ಪರಿಣಾಮಕಾರಿ ಬಳಕೆ
ಸಾಮಾಜಿಕ ಜಾಲತಾಣದಲ್ಲಿ ಉಳಿದೆಲ್ಲ ಪಕ್ಷಗಳಿಗೆ ಕಾರ್ಯಕರ್ತರೇ ಹೆಚ್ಚಾಗಿದ್ದರೆ, ಬಿಜೆಪಿಗೆ ಕಾರ್ಯಕರ್ತರ ಹೊರತಾಗಿ ದೊಡ್ಡ ಮಟ್ಟದ ಅಭಿಮಾನಿ ಸಮೂಹವಿತ್ತು. ಈ ಅಭಿಮಾನಿ ಸಮೂಹವನ್ನು ಬಿಜೆಪಿ ನಿರಂತರ ತಲುಪುತ್ತಿದ್ದು, ಸರಕಾರದ ಮುಖವಾಣಿಯನ್ನಾಗಿ ಸರಕಾರದ ವಿರುದ್ಧ ವಿಪಕ್ಷಗಳು ಹರಿಹಾಯ್ದರೆ, ಅವುಗಳನ್ನು ಬಗ್ಗು ಬಡಿಯಲು ಈ ಅಭಿಮಾನಿ ವರ್ಗವಿತ್ತು. ಅದು ಬಿಜೆಪಿಗೆ ಪ್ಲಸ್‌ ಆಯಿತು.


ಪ್ರತಿಯೊಬ್ಬರೂ ಟಾರ್ಗೆಟ್‌

ಡಿಜಿಟಲ್‌ ಮೀಡಿಯಾದ ಅನಂತ ಸಾಧ್ಯತೆ ಎಂದರೆ ಪ್ರತಿಯೊಬ್ಬರನ್ನೂ ಟಾರ್ಗೆಟ್‌ ಮಾಡಿ ಪ್ರಚಾರ ಮಾಡುವುದು. ಫೇಸ್‌ಬುಕ್‌, ವಾಟ್ಸ್‌ ಆಪ್‌ಗ್ಳ ಮೂಲಕ ಬಿಜೆಪಿ ಇದನ್ನು ತುಂಬ ಸಮರ್ಥವಾಗಿ ಮಾಡಿತು. ಮೀಮ್‌ಗಳು, ಇನ್ಫೋಕಾಡ್‌ಗಳ ಮೂಲಕ ಯುವ ಜನರನ್ನು ಹೆಚ್ಚು ತಲುಪಿತು. ಇದಕ್ಕಾಗಿ ಪ್ರತ್ಯೇಕ ಗ್ರೂಪ್‌ಗ್ಳನ್ನು ಮಾಡಿ ಸಂದೇಶಗಳನ್ನು ಹರಿಯಬಿಟ್ಟಿದೆ. ಅತಿ ಹೆಚ್ಚು ಸಂಖ್ಯೆಯಲ್ಲಿ ಟ್ವಿಟರ್‌, ಫೇಸ್‌ಬುಕ್‌ ಖಾತೆಗಳಿಗೆ, ಗ್ರೂಪ್‌ಗ್ಳಿಗೆ ಜನರನ್ನು ಸದಸ್ಯರನ್ನಾಗಿ ಮಾಡಿತು. ಈ ಮೂಲಕ ಪ್ರತಿಯೊಬ್ಬರನ್ನೂ ಟಾರ್ಗೆಟ್‌ ಮಾಡುವುದಕ್ಕೆ ಸುಲಭವಾಯಿತು.

ಪ್ರಚೋದನೆ
ಭಾರತದಲ್ಲಿ ಹೆಚ್ಚುತ್ತಿರುವ ಇಂಟರ್ನೆಟ್‌ ಬಳಕೆದಾರರನ್ನು ಗಮನಿಸಿ, ಸಾಮಾಜಿಕ ಜಾಲತಾಣದಲ್ಲಿ ಹೊಸ ಮತದಾರರನ್ನು ಗುರಿಯಾಗಿಸಿ ಮೋದಿ ಮತ್ತು ಬಿಜೆಪಿ ಮತದಾನಕ್ಕೆ ಪ್ರೇರಣೆ ನೀಡಿದರು. ಭವ್ಯ ಭಾರ ತದ ಭವಿಷ್ಯ ನಿಮ್ಮ ಕೈಲಿದೆ, ನಿಮಗಾಗಿಯೇ ನಾವು ಯೋಜನೆಗಳನ್ನು ರೂಪಿ ಸುತ್ತಿದ್ದೇವೆ. ನೀವೇ ಮುಂದೆ ಬರ ಬೇಕೆಂದು ಪ್ರಚೋದಿಸಿದರು. ಇದರ ಪರಿಣಾಮ ಬಹುಪಾಲು ಜನ ಮೋದಿಗೇ ಜೈ ಎಂದರು.

ಬಹುವಿಧದ ಪೇಜ್‌
ಅಂತರ್ಜಾಲದಲ್ಲಿ ಮೋದಿಯನ್ನು ಗರಿಷ್ಠ ಮಟ್ಟದಲ್ಲಿ ಜನರಿಗೆ ತಲುಪಿಸಲು ಬಹುವಿಧದ ವೆಬ್‌ಪೇಜ್‌ಗಳನ್ನು ಸೃಷ್ಟಿ ಮಾಡಲಾಗಿತ್ತು. ಇದರಲ್ಲಿ ಜನರು ದೂರು ದುಮ್ಮಾನಗಳನ್ನು ಆಲಿಸಲು, ಮೋದಿ ಕಾರ್ಯಕ್ರಮಗಳ ಬಗ್ಗೆ ವರದಿ, ಮೋದಿ ಭಾಷಣಗಳು, ಮೋದಿ ಟ್ವೀಟ್‌, ಫೇಸ್‌ಬುಕ್‌ ಪೋಸ್ಟ್‌ಗಳಿಗೆ ಎಂದು ಪ್ರತ್ಯೇಕ ಪೇಜ್‌ಗಳನ್ನು ರಚಿಸಿ, ಜನರನ್ನು ತಲುಪಲು ಯತ್ನಿಸಲಾಗಿತ್ತು.

ಮೈಭಿಚೌಕಿದಾರ್‌
ದೇಶದ ರಕ್ಷಣೆ ಹಾಗೂ ಭ್ರಷ್ಟಾಚಾ ರ  ನಿಯಂತ್ರಣಕ್ಕಾಗಿ ದೇಶದಲ್ಲಿ ಚೌಕಿದಾರ್‌ (ಕಾವಲುಗಾರ)ನಂತೆ ಕೆಲಸ ನಿರ್ವಹಿಸಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಚುನಾವಣೆ ಭಾಷಣದಲ್ಲಿ ಹೇಳಿದ್ದರು. ವಿಪಕ್ಷಗಳು ಇದನ್ನು ಚೌಕಿದಾರ್‌ ಚೋರ್‌ ಹೈ ಅಂದಾಗ ಮೈ ಭೀ ಚೌಕಿದಾರ್‌ ಘೋಷಣೆಯನ್ನು ಬಿಜೆಪಿ ಟ್ರೆಂಡ್‌ ಆಗಿ ರೂಪಿಸಿತ್ತು. ಇದನ್ನು ಬಿಜೆಪಿ ನಾಯಕರು, ಕಾರ್ಯಕರ್ತರು ತಮ್ಮ ಹೆಸರಿನ ಮುಂದೆ ಚೌಕಿದಾರ್‌ ಎಂಬ ವಿಶೇಷಣ ಸೇರಿಸಿ ವಿಪಕ್ಷಗಳಿಗೆ ತಕ್ಕ ಉತ್ತರ ಕೊಡುವ ಯತ್ನ ಮಾಡಿದ್ದರು.


ಫಕೀರ್

ನನಗ್ಯಾರ ಭಯವಿಲ್ಲ, ನಾನೊಬ್ಬ ಫ‌ಕೀರ. ದೇಶ ಸೇವೆಯೇ ನನ್ನ ಗುರಿ ಎಂದು ನರೇಂದ್ರ ಮೋದಿ ಅವರು ಚುನಾವಣೆ ಕಣದಲ್ಲಿ ತಮ್ಮನ್ನು ಕರೆದುಕೊಂಡಿದ್ದರು. ಮೋದಿ ಅವರ ಈ ಫ‌ಕೀರ ಎಂಬ ಪದವೂ ವಾಗ್ಯುದ್ಧಕ್ಕೆ ಕಾರಣವಾ ಗಿತ್ತು. ವಿರೋಧ ಪಕ್ಷದವರು ಇದರ ಬಗ್ಗೆ ಕಾಲೆಳೆದರೂ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿ ಗಳು ಮೋದಿ ಅವರನ್ನು ಫ‌ಕೀರ ನಾಮ ವಿಶೇಷಣೆಯಿಂದ ಕರೆಯುವುದುಂಟು.

ಕಾಮ್ ದಾರ್
ರಾಹುಲ್‌ ಗಾಂಧಿಯವರ, ಕಾಂಗ್ರೆಸ್‌ನ ವಿಚಾರಕ್ಕೆ ಬಂದಾಗ ಅವರನ್ನು ಟೀಕಿಸಲು ಮೋದಿ ಬಳಸಿದ್ದು ಕಾಮ್‌ದಾರ್‌-ನಾಮ್‌ದಾರ್‌ ವಿಶೇಷಣಗಳು. ಕೆಲಸ ಮಾಡುವವ ಎಂಬ ದೃಷ್ಟಿಯಿಂದ ಕಾಮ್‌ದಾರ್‌ ಎಂದವರು ತಮ್ಮನ್ನೇ ಕರೆದುಕೊಂಡರೆ, ಬರೀ ಹೆಸರು ಪಡೆದುಕೊಳ್ಳುವವರು ಎಂದು ರಾಹುಲ್‌ ಅವರನ್ನು ನಾಮ್‌ದಾರ್‌ ಎಂದು ಟೀಕಿಸುತ್ತಿದ್ದರು. ಇದೂ ವ್ಯಾಪಕ ಪ್ರಚಾರ ಗಿಟ್ಟಿಸಿಕೊಂಡಿತು.

ಜಗದ ಜನರ ಅಭಿಯಾನ
ಮೋದಿ ತಮ್ಮ ಬಾಲ್ಯದಲ್ಲಿ ಚಹಾ ಮಾರಿ ಜೀವನ ಸಾಗುತ್ತಿದ್ದ ಬಾಲಕ. ಇಂದು ಭಾರತ ದಂಥ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ನಾಯಕನಾಗಿರುವುದು ಹೆಮ್ಮೆಯ ವಿಷಯ . ಅವರ ಈ ಮಹತ್ವದ ಸಾಧನೆ ಭಾರತದ ಏಳಿಗೆಯನ್ನು ಸೂಚಿಸುತ್ತದೆ.
ಬರಾಕ್‌ ಒಬಾಮಾ, ಅಮೆರಿಕದ ಮಾಜಿ ಅಧ್ಯಕ್ಷ (ಟೈಮ್‌ ಮ್ಯಾಗ್‌ ಜಿನ್‌ಗೆ ಬರೆದ ಲೇಖನದಲ್ಲಿ ).

ಪ್ರಧಾನಿ ನರೇಂದ್ರ ಮೋದಿ ಒಬ್ಬ ಕ್ರಾಂತಿಕಾರಿ ನಾಯಕ. ಅವರ ಆಡಳಿತ ಜ್ಞಾನ ಅಂತಾರಾಷ್ಟ್ರೀಯ ಬಂಧವನ್ನು ಗಟ್ಟಿಗೊಳಿಸಲು ನೆರವಾಗುತ್ತಿದೆ. ಸದಾ ಅಭಿವೃದ್ಧಿ ಕುರಿತು ಚಿಂತಿಸುವ ಅವರ ಗುಣ ಭಾರತವನ್ನು ಎತ್ತರಕ್ಕೆ ಕೊಂಡೊಯ್ಯಲಿದೆ.
ಬೆಂಜಮಿನ್‌ ನೆತಾನ್ಯಾಹು,
ಇಸ್ರೇಲ್‌ ಪ್ರಧಾನಿ

ಮೋದಿ ಅವರು ಅಂತಾರಾಷ್ಟ್ರೀಯ ಸಹಕಾರ ವೃದ್ಧಿಗೆ ತೀವ್ರ ಶ್ರಮಿಸುತ್ತಿದ್ದಾರೆ. ಭಾರತ ಅಭಿವೃದ್ಧಿ ಹೊಂದಲು ಇಂತಹ ನಾಯಕತ್ವದ ಆವಶ್ಯಕತೆ ಇದೆ. ದೇಶದ ಅಭಿವೃದ್ಧಿ ಮತ್ತು ಎಲ್ಲರನ್ನೂ ಒಗ್ಗೂಡಿಸಿ ಕರೆದುಕೊಂಡು ಹೋಗುವ ಗುಣ ನಾನು ಅವರಲ್ಲಿ ಕಂಡೆ.
ಮಹಮ್ಮದ್‌ ಬಿನ್‌ ಸಲ್ಮಾನ್‌ ಅಲ್‌ ಸೌದ್‌
(ಸೌದಿ ಅರೇಬಿಯಾದ ರಾಜ, ಭೇಟಿಯೊಂದರಲ್ಲಿ ಹೇಳಿದ್ದು )

ಪ್ರಧಾನಿ ನರೇಂದ್ರ ಮೋದಿ ಅವರ ದೂರ ದೃಷ್ಟಿ ಗುರಿಯಿಂದಾಗಿ ಇಂದು ಭಾರತವೂ ಪ್ರಪಂಚದ ಉದ್ಯಮಶೀಲ ಹಾಗೂ ಮಾನವ ಬಂಡವಾಳದ ದೇಶದತ್ತ ಸಾಗಿದೆ. ಪ್ರಬಲತಂತ್ರ ಜ್ಞಾನವೂ ಮಾನವ ಅಭಿವೃದ್ಧಿ ಗೆ ಪೂರಕವಾಗಲಿದೆ ಎಂಬುದನ್ನು ಅವರು ಪ್ರಬಲವಾಗಿ ಅರ್ಥೈ ಸಿ ಕೊಂಡಿದ್ದಾರೆ.
ಸತ್ಯ ನಾದೆಲ್ಲ, ಸಿಇಒ, ಮೈಕ್ರೋ ಸಾಫ್ಟ್ ಕೋ-ಆಪರೇಶನ್‌

ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್‌ ಇಂಡಿಯಾ ಯೋಜನೆಯೂ ಶ್ಲಾಘನೀಯವಾದುದು. ಇದರಿಂದಾಗಿ ಭಾರತ ಅಭಿವೃದ್ಧಿ ಪಥದತ್ತ ಸಾಗಲಿದೆ. ಭಾರತಕ್ಕೆ ಮೋದಿ ಅಂತಹ ದೂರದೃಷ್ಟಿ ನಾಯಕತ್ವ ಅವಶ್ಯವಿದೆ.
ಮಾರ್ಕ್‌ ಝುಗರ್‌ ಬರ್ಕ್‌,  ಸಂಸ್ಥಾಪಕ, ಫೇಸ್‌ಬುಕ್‌

ಶಿವು ಸ್ಥಾವರಮಠ

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Adani: ಲಂಚ ಕೇಸ್‌; ಜಗನ್‌ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ

Adani: ಲಂಚ ಕೇಸ್‌; ಜಗನ್‌ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ

Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ

Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ

Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ

Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.