PM Modi U.S. visit: ಇಂದಿನಿಂದ 3 ದಿನಗಳ ಕಾಲ ಮೋದಿ ಅಮೆರಿಕ ಪ್ರವಾಸ
ಪ್ರಧಾನಿಯಾದ ಬಳಿಕ 9ನೇ ಬಾರಿ ಮೋದಿ ಅಮೆರಿಕಕ್ಕೆ
Team Udayavani, Sep 21, 2024, 7:20 AM IST
ಹೊಸದಿಲ್ಲಿ: ಪ್ರಧಾನಿ ಮೋದಿ ಅವರ 3 ದಿನಗಳ ಅಮೆರಿಕ ಪ್ರವಾಸ ಶನಿವಾರ (ಸೆ. 21) ಆರಂಭವಾಗಲಿದೆ. ಈ ಭೇಟಿ ಸಮಯದಲ್ಲಿ ಕ್ವಾಡ್ ಶೃಂಗಸಭೆ, ದ್ವಿಪಕ್ಷೀಯ ಮಾತುಕತೆ, ಬೈಡೆನ್ ಭೇಟಿ, ವಿಶ್ವಸಂಸ್ಥೆಯಲ್ಲಿ ನಡೆಯುವ ಚರ್ಚೆಯಲ್ಲಿ ಭಾಗಿಯಾಗಲಿದ್ದಾರೆ.
ಪ್ರಧಾನಿಯಾದ ಬಳಿಕ ಇದು ಮೋದಿ ಅವರ 9ನೇ ಅಮೆರಿಕ ಭೇಟಿಯಾಗಲಿದೆ. ಅಮೆರಿಕದಲ್ಲಿ ನಡೆಯುತ್ತಿರುವ ಕ್ವಾಡ್ ಶೃಂಗಸಭೆಯಲ್ಲಿ ಭಾಗಿಯಾಗುವುದು ಈ ಪ್ರವಾಸದ ಪ್ರಮುಖ ಉದ್ದೇಶವಾಗಿದ್ದರೂ ಕ್ವಾಡ್ ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಸಂಬಂಧ, ಇಂಡೋ ಫೆಸಿಫಿಕ್ ಪ್ರದೇಶದಲ್ಲಿ ಸ್ಥಿರತೆ, ಉಕ್ರೇನ್ ಯುದ್ಧ, ಗಾಜಾ ಬಿಕ್ಕಟ್ಟು, ಜಾಗತಿಕ ದಕ್ಷಿಣ (ಗ್ಲೋಬಲ್ ಸೌತ್) ಅಭಿವೃದ್ಧಿ ಮಾತುಕತೆಗಳನ್ನು ಈ ಭೇಟಿ ಒಳಗೊಂಡಿದೆ ಎನ್ನಲಾಗಿದೆ.
ಡೆಲಾವೆರ್‌ಗೆ ಭೇಟಿ
ಭಾರತದಿಂದ ಪ್ರಯಾಣ ಆರಂಭಿಸುವ ಮೋದಿ ಮೊದಲು ಡೆಲಾವೆರ್ ತಲುಪಲಿದ್ದು, ಇಲ್ಲಿ ನಡೆಯುವ ಕ್ವಾಡ್ ಸಭೆಯಲ್ಲಿ ಭಾಗಿ ಯಾಗಲಿದ್ದಾರೆ. ಬಳಿಕ ನ್ಯೂಯಾರ್ಕ್‌ಗೆ ಪ್ರಯಾಣಿಸಿ ವಿಶ್ವಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಸೆ. 22ರಂದು ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಟ್ರಂಪ್ ಭೇಟಿ ಖಚಿತ ಇಲ್ಲ
ಅಮೆರಿಕ ಭೇಟಿಯ ಸಮಯ ದಲ್ಲಿ ಮೋದಿ ಅವರನ್ನು ಭೇಟಿ ಮಾಡುವುದಾಗಿ ಟ್ರಂಪ್ ತಿಳಿಸಿದ್ದರು. ಆದರೆ ಈ ಭೇಟಿಗೆ ಸಂಬಂಧಿಸಿ ಅಮೆರಿಕ ಅಥವಾ ಭಾರತದ ಸಚಿವಾಲಯಗಳು ಖಾತ್ರಿ ನೀಡಿಲ್ಲ.
ಅಮೆರಿದಲ್ಲಿ ಮೋದಿ ಕಾರ್ಯಕ್ರಮ
1. ಕ್ವಾಡ್ ಶೃಂಗಸಭೆಯಲ್ಲಿ ಭಾಗಿ
2. ದ್ವಿಪಕ್ಷೀಯ ಮಾತುಕತೆ
3. ಕ್ಯಾನ್ಸರ್ ಉಪಕ್ರಮಗಳ ಘೋಷಣೆ
4. ಜಾಗತಿಕ ಸಮಸ್ಯೆಗಳ ಬಗ್ಗೆ ಚರ್ಚೆ
5. ಅಮೆರಿಕ ಟೆಕ್ ನಾಯಕರೊಂದಿಗೆ ಚರ್ಚೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್!
Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.