ಲಂಕಾಗೆ ಅಭಯ
ಉಗ್ರರ ದಾಳಿಯಿಂದ ತತ್ತರಿಸಿರುವ ದ್ವೀಪರಾಷ್ಟ್ರಕ್ಕೆ ಮೋದಿ ಬಲ
Team Udayavani, Jun 10, 2019, 6:00 AM IST
ಕೊಲಂಬೊ: ದಶಕಗಳ ನಂತರ ಮತ್ತೆ ಚಿಗುರೊಡೆದಿರುವ ಭಯೋತ್ಪಾದನೆಯಿಂದಾಗಿ ತತ್ತರಿಸಿರುವ ಶ್ರೀಲಂಕಾದ ಐಕ್ಯಮತವನ್ನು ಕಾಪಾಡುವಲ್ಲಿ ಭಾರತ ಎಂದೆಂದಿಗೂ ಆ ದೇಶದ ಬೆನ್ನಿಗೆ ನಿಂತಿರುತ್ತದೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ, ಶ್ರೀಲಂಕಾದ ನಿವಾಸಿಗಳಿಗೆ ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆ.
ತಮ್ಮ ಎರಡು ದಿನಗಳ ವಿದೇಶ ಪ್ರವಾಸದಲ್ಲಿ ಮಾಲ್ಡೀವ್ಸ್ ಭೇಟಿ ಮುಗಿಸಿ, ಭಾರತದ ಕಡೆಗೆ ಭಾನುವಾರ ಮರಳುವಾಗ, ಮಾರ್ಗ ಮಧ್ಯೆ ಶ್ರೀಲಂಕಾಕ್ಕೆ ಭೇಟಿ ನೀಡಿದರು. ಇತ್ತೀಚೆಗೆ ನಡೆದಿದ್ದ ಈಸ್ಟರ್ ಸರಣಿ ಸ್ಫೋಟಕ್ಕೆ ತುತ್ತಾದ ಚರ್ಚ್‌ಗಳಲ್ಲೊಂದಾದ ಸೇಂಟ್ ಅಂಥೋನಿಯವರ ಚರ್ಚ್‌ಗೆ ಭೇಟಿ ನೀಡಿ, ಅಲ್ಲಿನ ಘಟನಾವಳಿಗಳನ್ನು ನೆನೆದು ಮಮ್ಮಲ ಮರುಗಿದರು.
ಭಯೋತ್ಪಾದಕರ ದಾಳಿಯು ಹೇಡಿತನದ ಕೃತ್ಯವೆಂದು ಬಣ್ಣಿಸಿದ ಅವರು, ಇಂಥ ಘಟನೆಗಳ ಹೊರತಾಗಿಯೂ ಶ್ರೀಲಂಕಾ ಮತ್ತೆ ಖಂಡಿತವಾಗಿಯೂ ಪುಟಿದೇಳುತ್ತದೆ. ಸ್ಫೋಟದಲ್ಲಿ ತಮ್ಮ ಸಂಬಂಧಿಗಳನ್ನು ಕಳೆದುಕೊಂಡ ಮನೆಯವರಿಗೆ ನನ್ನ ಸಾಂತ್ವನಗಳು ಎಂದರು. ಅಂದಹಾಗೆ, ಸರಣಿ ಸ್ಫೋಟದ ನಂತರ ಲಂಕಾಕ್ಕೆ ಭೇಟಿ ನೀಡಿದ ಮೊದಲ ವಿದೇಶಿ ಗಣ್ಯರೆಂದು ಮೋದಿ ಪರಿಗಣಿಸಲ್ಪಟ್ಟಿದ್ದಾರೆ. ಅಲ್ಲದೆ, ವಿಶ್ವನಾಯಕರೊಬ್ಬರ ಭೇಟಿಯು ಉಗ್ರರ ಅಟ್ಟಹಾಸಕ್ಕೆ ನಲುಗಿರುವ ಶ್ರೀಲಂಕಾಗೆ ಭರವಸೆಯನ್ನು ಮೂಡಿಸಿದೆ.
ಅಶೋಕ ಸಸಿ, ಬುದ್ಧನ ವಿಗ್ರಹ: ಮೋದಿಯವರು ಅಧ್ಯಕ್ಷರ ನಿವಾಸದ ಆವರಣದಲ್ಲಿ ಉಭಯ ದೇಶಗಳ ಸ್ನೇಹದ ಸಂಕೇತವಾಗಿ ಅಶೋಕ ಮರದ ಸಸಿಯೊಂದನ್ನು ನೆಟ್ಟರು. ಆನಂತರ, ಲಂಕಾ ಅಧ್ಯಕ್ಷ ಸಿರಿಸೇನಾ ಅವರು ಮೋದಿಯವರಿಗೆ ಸಮಾಧಿ ಸ್ಥಿತಿಯಲ್ಲಿರುವ ಬುದ್ಧನ ಪುತ್ಥಳಿಯನ್ನು ನೀಡಿ ಗೌರವಿಸಿದರು. 4ನೇ ಶತಮಾನದಿಂದ 7ನೇ ಶತಮಾನದ ಅವಧಿಯಲ್ಲಿ ಪುರಾತನ ಶ್ರೀಲಂಕಾದಲ್ಲಿ ಅನುರಾಧಾಪುರ ಎಂಬ ರಾಜ್ಯವು ಅಸ್ತಿತ್ವದಲ್ಲಿದ್ದಾಗ ಕೆತ್ತಲಾಗಿದೆ ಎಂಬ ಐತಿಹ್ಯ ಹಾಗೂ ವಿಶೇಷಣಗಳು ಈ ಪುತ್ಥಳಿಗೆ ಇದೆ.
ದ್ವಿಪಕ್ಷೀಯ ಮಾತುಕತೆ: ಮಧ್ಯಾಹ್ನದ ಹೊತ್ತಿಗೆ ಅಧ್ಯಕ್ಷರ ನಿವಾಸದಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ ಮೋದಿ ಮತ್ತು ಮೈತಿಪಾಲ ಸಿರಿಸೇನಾ ಭಾಗವಹಿಸಿದ್ದರು. ಭದ್ರತೆಯ ವಿಚಾರದಲ್ಲಿ ಪರಸ್ಪರ ಸಹಕಾರ, ವಾಣಿಜ್ಯ ಹಾಗೂ ಸಾಂಸ್ಕೃತಿಕ ವಿಚಾರಗಳ ಬಗ್ಗೆ ಮಾತುಕತೆ ಕೇಂದ್ರೀಕೃತವಾಗಿತ್ತು. ಮಾತುಕತೆಯ ನಂತರ ಸಂಜೆಯ ಹೊತ್ತಿಗೆ ಪ್ರಧಾನಿ ಲಂಕಾದಿಂದ ಸ್ವದೇಶಕ್ಕೆ ಮರಳಿದರು.
ಭಾರತೀಯರ ಜತೆ ಸಂವಾದ: ಲಂಕಾದಲ್ಲಿರುವ ಭಾರತೀಯರೊಂದಿಗೆ ಸಂವಾದ ನಡೆಸುವ ಮೂಲಕ ಅಲ್ಲಿನ ಭಾರತೀಯರಲ್ಲಿ ಮೋದಿ ವಿದ್ಯುತ್ ಸಂಚಲನ ಉಂಟು ಮಾಡಿದರು. ಕೊಲಂಬೋದಲ್ಲಿ ಆಯೋಜಿಸಲಾಗಿದ್ದ ಈ ಸಂವಾದದಲ್ಲಿ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸು ದಿನಗಳೆದಂತೆ ವೃದ್ಧಿಸುತ್ತಿದೆ. ಇದಕ್ಕೆ ಭಾರತದಿಂದ ವಿದೇಶಗಳಿಗೆ ವಲಸೆ ಹೋಗಿರುವ ಅನಿವಾಸಿ ಭಾರತೀಯರ ಪಾಲೂ ಗಣನೀಯವಾಗಿದೆ ಎಂದರು.
ಪ್ರಜಾಪ್ರಭುತ್ವ, ಭಾರತದ ಅಂತಃಸತ್ವವಾಗಿದ್ದು, ಅದರ ಆಧಾರದ ಮೇಲೆ ಕಳೆದೈದು ವರ್ಷಗಳಲ್ಲಿ ತಮ್ಮ ಸರ್ಕಾರ ಗಣನೀಯವಾದದ್ದನ್ನು ಸಾಧಿಸಿದೆ. ಇನ್ನೂ ಅನೇಕವನ್ನು ಸಾಧಿಸಬೇಕಿದೆ. ಜನರ ಆಶಯಗಳನ್ನು ಪೂರೈಸುವಲ್ಲಿ ಯಾವುದೇ ಅಪಸ್ವರ ಕಾಣಿಸಿಕೊಳ್ಳಲು ಅವಕಾಶ ಕೊಡುವುದಿಲ್ಲ ಎಂದರು.
-ನರೇಂದ್ರ ಮೋದಿ, ಪ್ರಧಾನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Successful: ರಾಜ್ಯದ 4,873 ಗ್ರಾಮಗಳು ಬಯಲು ಶೌಚ ಮುಕ್ತ: ಕೇಂದ್ರದ ಮೆಚ್ಚುಗೆ
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.