ಪ್ರತಿ ಮನೆಯಿಂದ ಮೋದಿ ಅಲೆ
ಪ್ರಧಾನಿ ನರೇಂದ್ರ ಮೋದಿ ಘೋಷಣೆ
Team Udayavani, May 14, 2019, 6:00 AM IST
ರತ್ಲಾಂ/ಸೋಲನ್/ಭಟಿಂಡಾ: ದೇಶದ ಪ್ರತಿಯೊಂದು ಮನೆಯಿಂದಲೂ ಮೋದಿ ಅಲೆ ಹೊರ ಹೊಮ್ಮಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಕೆಲವು ಮಂದಿ ಪಂಡಿತರು ಹೊಸದಿಲ್ಲಿಯಲ್ಲಿ ಕುಳಿತುಕೊಂಡು 2014ರಂತೆ ದೇಶದಲ್ಲಿ ಮೋದಿ ಅಲೆ ಇಲ್ಲ ಎಂದು ಪ್ರತಿಪಾದಿಸುತ್ತಿದ್ದಾರೆ ಎಂದು ಹೇಳಿದ್ದಾರೆ. 19ರಂದು ನಡೆಯಲಿರುವ ಕೊನೆಯ ಹಂತದ ಮತದಾನಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರದೇಶದ ರತ್ಲಾಂ, ಹಿಮಾಚಲ ಪ್ರದೇಶದ ಸೋಲನ್, ಪಂಜಾಬ್‌ನ ಭಟಿಂಡಾಗಳಲ್ಲಿ ಪ್ರಚಾರ ನಡೆಸಿದರು. ರತ್ಲಾಂನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ಕೆಲ ರಾಜಕೀಯ ಪಂಡಿತರಿಗೆ 2 ರೀತಿಯ ಜನರು ಇದ್ದಾರೆ ಎನ್ನುವ ವಿಚಾರ ಗೊತ್ತಿಲ್ಲ. ಮೊದಲು ಮತ ಹಾಕುವ ಯುವಕರು, ತಾಯಂದಿರು ಮತ್ತು ಸಹೋದರಿಯರು ಸಹೋದರನನ್ನು ಚುನಾಯಿಸಲು ಮನಸ್ಸು ಮಾಡಿದ್ದಾರೆ. ಏಕೆಂದರೆ ಅತ್ಯಾಚಾರ ಎಸಗುವವರಿಗೆ ಗಲ್ಲು ಶಿಕ್ಷೆ ಎಂದು ಕಾನೂನು ತಂದು ಅವರನ್ನು ರಕ್ಷಿಸುತ್ತಿದ್ದಾನೆ’ ಎಂದಿದ್ದಾರೆ. ಇದೇ ವೇಳೆ ಐಎನ್‌ಎಸ್ ವಿರಾಟ್ ಅನ್ನು ರಾಜೀವ್ ಗಾಂಧಿ ವೈಯಕ್ತಿಕ ಟ್ಯಾಕ್ಸಿಯಂತೆ ಬಳಕೆ ಮಾಡಿದ್ದರು ಎಂದು ಹೇಳಲು ಪ್ರಧಾನಿ ಮರೆಯಲಿಲ್ಲ.
ಪಾಪ ಮಾಡಿದ್ದಾರೆ: ಆರನೇ ಹಂತದ ಮತದಾನದ ವೇಳೆ ಹಕ್ಕು ಚಲಾಯಿಸದೆ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಮಹಾಪಾಪ ಎಸಗಿದ್ದಾರೆ ಎಂದು ಟೀಕಿಸಿದ್ದಾರೆ. ‘ದಿಗ್ವಿಜಯ ಸಿಂಗ್ ಅವರೇ, ಪ್ರಜಾಪ್ರಭುತ್ವದ ಹಬ್ಬದಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಸಾಲಿನಲ್ಲಿ ನಿಂತು ಹಕ್ಕು ಚಲಾವಣೆ ಮಾಡಿದರು. ಆದರೆ ನೀವು ಮತ ಚಲಾಯಿಸಲಿಲ್ಲ’ ಎಂದು ಟೀಕಿಸಿದ್ದಾರೆ. ಅವರು ಮತದಾನ ಮಾಡಿ ಎಂದು ಹೇಳುವಲ್ಲಿ ಬ್ಯುಸಿಯಾಗಿದ್ದರು ಎಂದು ಲೇವಡಿ ಮಾಡಿದ್ದಾರೆ ಪ್ರಧಾನಿ.
ರಕ್ಷಣಾ ಡೀಲ್ ಎಟಿಎಂ: ಹಿಂದಿನ ಸಂದರ್ಭಗಳಲ್ಲಿ ಅಧಿಕಾರದಲ್ಲಿದ್ದ ವೇಳೆ ಕಾಂಗ್ರೆಸ್ ರಕ್ಷಣಾ ವ್ಯವಹಾರಗಳು ಎಟಿಎಂನಂತೆ ಇರುತ್ತಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ. ಹಿಮಾಚಲ ಪ್ರದೇಶದ ಸೋಲನ್‌ನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ರಕ್ಷಣಾ ಅಗತ್ಯಕ್ಕಾಗಿ ಶೇ.70ರಷ್ಟು ವಿದೇಶಗಳನ್ನೇ ಅವಲಂಬಿಸಬೇಕಾಗುತ್ತಿತ್ತು. ರಕ್ಷಣಾ ಖರೀದಿಯನ್ನು ಎಟಿಎಂ ಆಗಿಸುವ ನಿಟ್ಟಿನಲ್ಲಿಯೇ ಈ ಕ್ರಮ ಕೈಗೊಳ್ಳಲಾಗುತ್ತಿತ್ತು ಎಂದಿದ್ದಾರೆ ನರೇಂದ್ರ ಮೋದಿ. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ಅವಧಿಯಲ್ಲಿ 150 ವರ್ಷಗಳಷ್ಟು ರಕ್ಷಣಾ ಉತ್ಪಾದನೆಯ ಅನುಭವ ಹೊಂದಿತ್ತು. ಅದೇ ಸಮಯದಲ್ಲಿ ಚೀನಾಕ್ಕೆ ಅಂಥ ಯಾವುದೇ ಅನುಭವ ಇರಲಿಲ್ಲ. ಆದರೆ ಈಗ ನಮ್ಮ ನೆರೆಯ ರಾಷ್ಟ್ರ ದೊಡ್ಡ ಪ್ರಮಾಣದಲ್ಲಿ ರಕ್ಷಣಾ ವಸ್ತುಗಳನ್ನು ಉತ್ಪಾದಿಸಿ ರಫ್ತು ಮಾಡುತ್ತದೆ ಎಂದು ಹೇಳಿದ್ದಾರೆ. ಯುಪಿಎ ಸರಕಾರದ ಅವಧಿಯಲ್ಲಿ ಸೈನಿಕರಿಗೆ ಬುಲೆಟ್ಪ್ರೂಫ್ ಜಾಕೆಟ್ ನೀಡಲು ಕ್ರಮ ಕೈಗೊಳ್ಳಲಾಗಿರಲಿಲ್ಲ ಎಂದು ಟೀಕಿಸಿದ್ದಾರೆ.
ನಾಮ್‌ಧಾರ್ ನಿಮಗೇ ನಾಚಿಕೆಯಾಗಬೇಕು
1984ರಲ್ಲಿ ನಡೆದ ಸಿಕ್ಖ್ ದಂಗೆ ಸಮರ್ಥಿಸಿ ಮಾತನಾಡಿದ ಕಾಂಗ್ರೆಸ್ ಸ್ಯಾಮ್ ಪಿತ್ರೋಡಾರನ್ನು ನಾಚಿಕೆಯಾಗಬೇಕು ಎಂದ ನಾಮ್‌ಧಾರ್ (ರಾಹುಲ್ ಗಾಂಧಿ)ಗೇ ನಾಚಿಕೆಯಾಗಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಭಟಿಂಡಾದಲ್ಲಿ ಮಾತನಾಡಿದ ಪ್ರಧಾನಿ ಸ್ಯಾಮ್ ಪಿತ್ರೋಡಾ ತಮ್ಮ ಮನಸ್ಸಿನಿಂದ ಅಂಥ ಮಾತುಗಳನ್ನು ಹೇಳಿದ್ದಾರೆ. ಹೀಗಾಗಿ ಅವರನ್ನೇಕೆ ನೀವು ಬೈಯ್ಯಬೇಕು ಎಂದು ಪ್ರಶ್ನಿಸಿದ್ದಾರೆ. 50 ಸ್ಥಾನಗಳನ್ನು ಗೆಲ್ಲಲು ಕಾಂಗ್ರೆಸ್ ಪರದಾಡುತ್ತಿದೆ. ಏಕೆಂದರೆ ಆ ಪಕ್ಷದ ನಾಯಕನಿಗೇ ಹಲವು ರೀತಿಯ ಗೊಂದಲಗಳು ಇವೆ ಎಂದು ಲೇವಡಿ ಮಾಡಿದ್ದಾರೆ ಪ್ರಧಾನಿ. ‘ಕಾಂಗ್ರೆಸ್‌ನ ನೀತಿ ನಿರೂಪಕರಾಗಿದ್ದ ದಿ| ರಾಜೀವ್ ಗಾಂಧಿಯವರ ಪ್ರಮುಖ ಸಲಹೆಗಾರ ಮತ್ತು ನಾಮ್‌ದಾರ್ ಅವರ ಗುರು 1984ರ ಘಟನೆ ಬಗ್ಗೆ ಆದದ್ದು ಆಯಿತು ಎಂದಿದ್ದಾರೆ. ಅವರು ಅಮೆರಿಕದಿಂದ ಬಂದಿದ್ದಾರೆ. ಈ ನಿಲುವು ಕಾಂಗ್ರೆಸ್‌ನ ಅಹಂಕಾರ ಮತ್ತು ನಿಲುವನ್ನು ತೋರಿಸುತ್ತದೆ’ ಎಂದು ಹೇಳಿದ್ದಾರೆ.
ನಾಚಿಕೆಯಾಗಬೇಕು; ಕ್ಷಮೆ ಕೇಳಬೇಕು
‘ನಿಮಗೆ ನಾಚಿಕೆಯಾಗಬೇಕು. ಇದು ಸಂಪೂರ್ಣ ತಪ್ಪು’ ಹೀಗೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪಕ್ಷದ ನಾಯಕ ಸ್ಯಾಮ್ ಪಿತ್ರೋಡಾ ವಿರುದ್ಧ ಟೀಕೆ ಮಾಡಿದ್ದಾರೆ. ಪಂಜಾಬ್‌ನ ಖನ್ನಾದಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ‘1984ರ ಸಿಕ್ಖ್ ವಿರೋಧಿ ದಂಗೆ ಬಗ್ಗೆ ಸ್ಯಾಮ್ ಪಿತ್ರೋಡಾ ವ್ಯಕ್ತಪಡಿಸಿದ ಅಭಿಪ್ರಾಯ ಸರಿಯಾದು ದಲ್ಲ. ಅವರು ಸಾರ್ವಜನಿಕವಾಗಿ ದೇಶದ ಕ್ಷಮೆ ಯಾಚಿಸಬೇಕು. ಈ ಅಂಶವನ್ನು ಬಹಿರಂಗವಾಗಿಯೇ ಹೇಳುತ್ತಿದ್ದೇನೆ. ಇಷ್ಟು ಮಾತ್ರವಲ್ಲ ಪಿತ್ರೋಡಾ ಜತೆಗೆ ಫೋನ್‌ನಲ್ಲಿ ಮಾತನಾಡಿದ್ದೇನೆ’ ಎಂದು ಹೇಳಿದ್ದಾರೆ. ಸ್ಯಾಮ್ ಪಿತ್ರೋಡಾ ದಂಗೆ ಆದದ್ದು ಆಯಿತು ಏನೀಗ ಎಂದು ಹೇಳಿಕೆ ನೀಡಿ ಉಂಟಾಗಿರುವ ವಿವಾದದ ಬಿಸಿಯನ್ನು ತಗ್ಗಿಸಲು ಕಾಂಗ್ರೆಸ್ ಅಧ್ಯಕ್ಷ ಈ ಮೂಲಕ ಪ್ರಯತ್ನ ನಡೆಸಿದ್ದಾರೆ. ಬಿಜೆಪಿ ನಾಯಕ ರಂತೂ ರಾಹುಲ್ ಗಾಂಧಿ ವಿರುದ್ಧ ಪ್ರಬಲ ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಲಘುವಾಗಿ ಮಾತನಾಡಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.