India-ASEAN ಗಟ್ಟಿಗೊಳಿಸಲು ಮೋದಿ 10 ಅಂಶದ ಪ್ಲಾನ್
Team Udayavani, Oct 11, 2024, 7:00 AM IST
ವಿಯೆಂಟಿಯಾನ್(ಲಾವೋಸ್): ಆಸಿ ಯಾನ್ ಮತ್ತು ಭಾರತದ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು 10 ಅಂಶಗಳ ಯೋಜನೆಯನ್ನು ಪ್ರಸ್ತಾವಿಸಿದ್ದಾರೆ.
ಇಲ್ಲಿ ನಡೆದ 21ನೇ ಇಂಡಿಯಾ-ಆಸಿಯಾನ್ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ 10 ವರ್ಷಗಳಲ್ಲಿ ಭಾರತ ಮತ್ತು ಆಸಿಯಾನ್ ನಡುವಿನ ವ್ಯಾಪಾರ ದುಪ್ಪಟ್ಟಾಗಿದ್ದು, 10 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ ಎಂದರು. “21ನೇ ಶತಮಾನ ಏಷ್ಯಾದ ಶತಮಾನ ಎಂದು ನಾನು ಭಾವಿಸುತ್ತೇನೆ. ಅಲ್ಲದೇ ಆಸಿಯಾನ್ ರಾಷ್ಟ್ರಗಳ ಶತಮಾನವಾಗಿದೆ. ಪೂರ್ವ ಏಷ್ಯಾ ಶೃಂಗಸಭೆಯೂ ಇಂಡೋ-ಪೆಸಿಫಿಕ್ ಪ್ರದೇಶಗಳಲ್ಲಿನ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯ ಸವಾಲುಗಳ ಬಗ್ಗೆ ಚರ್ಚಿಸಲು ಅವಕಾಶವನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.
10 ಅಂಶಗಳ ಯೋಜನೆ
2025ನ್ನು ಭಾರತ ಮತ್ತು ಆಸಿಯಾನ್ ರಾಷ್ಟ್ರಗಳ ಪ್ರವಾಸೋದ್ಯಮ ವರ್ಷ ಎಂದು ಆಚರಿಸುವುದು. ಯುವರಿಗೆ ಸಹಾಯವಾಗುವಂತೆ ಸ್ಟಾರ್ಟ್‌ಅಪ್ ಹಬ್ಬ, ಹ್ಯಾಕಥಾನ್, ದಿಲ್ಲಿ ಸಭೆಗಳ ಆಯೋಜನೆ, ಮಹಿಳಾ ವಿಜ್ಞಾನಿಗಳ ಸಮ್ಮೇಳನ, ನಳಂದ ವಿವಿ ಯಲ್ಲಿ ಸ್ಕಾಲರ್‌ಶಿಪ್ ಹೆಚ್ಚಳ, 2025ರಲ್ಲಿ ಭಾರತ ಮತ್ತು ಆಸಿಯಾನ್ ರಾಷ್ಟ್ರಗಳ ವ್ಯಾಪಾರ ಒಪ್ಪಂದ ಪರಿಶೀಲನೆ, 41 ಕೋಟಿ ರೂ. ವಿಪತ್ತು ನಿರ್ವಹ ಣ ನಿಧಿ ಸಂಗ್ರಹ, ಆರೋಗ್ಯಕ್ಕಾಗಿ ಆರೋಗ್ಯ ಸಚಿವರ ಸಮ್ಮೇಳನ. ಸೈಬರ್ ಪಾಲಿಸಿಗಳ ನಿರ್ವಹಣೆ. ಗ್ರೀನ್ ಹೈಡ್ರೋಜನ್ ಮೇಲೆ ಕಾರ್ಯಾಗಾರ. ಹವಾಮಾನ ಉತ್ತಮ ಪಡಿಸಲು “ತಾಯಿಗಾಗಿ ಗಿಡ ನೆಡಿ ಅಭಿಯಾನ’ಗಳನ್ನು ಮೋದಿ ಘೋಷಣೆ ಮಾಡಿದ್ದಾರೆ.
ಲಾವೋ ರಾಮಾಯಣ ವೀಕ್ಷಿಸಿದ ಮೋದಿ
ಲಾವೋಸ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಉಭಯ ದೇಶಗಳ ನಡುವಣ ಪಾರಂಪರಿಕ ಮತ್ತು ನಾಗರಿಕ ಬಾಂಧವ್ಯದ ಪ್ರತೀಕವಾದ ಲಾವೋ ರಾಮಾಯಣವನ್ನು ವೀಕ್ಷಿಸಿದರು. ಫಲಕ್ ಫಲಂ ಎಂಬ ರಾಮಾಯಣದ ಭಾಗವನ್ನು ಅವರು ವೀಕ್ಷಿಸಿದರು. ಸಾಂಸ್ಕೃತಿಕ ಬಾಂಧವ್ಯದ ಕೊಂಡಿ ಬೇರೂರಿದೆ. “ಪಾರಂಪರಿಕವಾದ ಹಲವು ತಾಣಗಳನ್ನು ಸಂರಕ್ಷಿಸಲು ಲಾವೋ ಪಿಡಿಆರ್ ಜತೆಗೂಡಿ ಕಾರ್ಯನಿರ್ವಹಿಸಲು ಹೆಮ್ಮೆ ಎನಿಸುತ್ತದೆ’ ಮೋದಿ ಟ್ವೀಟ್ ಮಾಡಿದ್ದಾರೆ.
ಬೌದ್ಧ ಬಿಕ್ಕುಗಳ ಆಶೀರ್ವಾದ ಪಡೆದ ಮೋದಿ
ಲಾವೋಸ್‌ನ ವಿಯೆಂಟಿಯಾನ್ ಭೇಟಿ ನೀಡಿದ ಪ್ರಧಾನಿ ಮೋದಿ ಅವರು, ಭಾರತೀಯ ಸಮುದಾಯವನ್ನುದ್ದೇ ಶಿಸಿ ಮಾತನಾಡಿದರು. ಈ ವೇಳೆ ಅವರು ಬೌದ್ಧ ಬಿಕ್ಕುಗಳಿಂದ ಆಶೀರ್ವಾದ ಪಡೆದರು. ಇದೇ ವೇಳೆ ಲಾವೋಸ್‌ನಲ್ಲಿ ಭಾರತ ಕೈಗೊಂಡ ಸಂರಕ್ಷಣ ಕಾರ್ಯಕ್ರಮಗಳ ಫೋಟೋಗಳನ್ನು ವೀಕ್ಷಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
MUST WATCH
ಹೊಸ ಸೇರ್ಪಡೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.