ವಿದೇಶದಲ್ಲೂ ಮೋದಿ ಹವಾ
ಭರತಖಂಡ ಗೆದ್ದ ನರೇಂದ್ರ
Team Udayavani, May 24, 2019, 6:05 AM IST
ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಜಗತ್ತಿನಲ್ಲಿ ಭಾರತದ ಬಗೆಗಿನ ಬ್ರ್ಯಾಂಡ್ ಬದಲಾಗಿರುವುದು ನಿಜ.
ಬಹಳ ವಿಶೇಷವಾಗಿ ಭಯೋತ್ಪಾದನೆ ಸಂಬಂಧದ ಭಾರತದ ಹಳೆಯ ಹೋರಾಟಕ್ಕೆ ಬಲ ಬಂದಿದ್ದು ಈ ಸಂದರ್ಭದಲ್ಲೇ. ತಮ್ಮ ಅವಧಿಯಲ್ಲಿ 57 ದೇಶಗಳಿಗೆ 97 ಪ್ರವಾಸಗಳನ್ನು ಕೈಗೊಂಡಿದ್ದಾರೆ. ಎಲ್ಲವೂ ಭಾರತಕ್ಕೆ ಬಲ ತಂದಿದೆ ಎನ್ನಬಹುದು. ಆ ಸಂದರ್ಭದಲ್ಲಿ ಒಬ್ಬ ಚಾಯ್‌ವಾಲಾ ಇಷ್ಟೊಂದು ವಿದೇಶಗಳಿಗೆ ಹೋಗಿ ಏನು ಮಾಡುತ್ತಾನೆ ಎಂಬ ಕುತೂಹಲ ಇದ್ದೇ ಇತ್ತು. ಆದರೆ ಪರಿಣಾಮ ನಮ್ಮ ಕಣ್ಣ ಮುಂದಿದೆ.
ಇಷ್ಟಕ್ಕೂ ಒಬ್ಬ ಗುಜರಾತಿ, ಹಿಂದಿ ಭಾಷೆಯ ಪ್ರದೇಶದವ ವಿದೇಶದ ಜನರಲ್ಲೂ ಒಬ್ಬ ನಾಯಕರಾಗಿ ಕಂಡರು. ಅವರ ಮಾತಿನ ವರಸೆಗೆ ತಲೆದೂಗದವರೇ ಇಲ್ಲ. ಪ್ರದೇಶ, ಭಾಷೆ, ಸಂಸ್ಕೃತಿ, ಇತಿಹಾಸ, ವರ್ತಮಾನ ಎಲ್ಲವನ್ನೂ ಒಂದು ಬೊಗಸೆಯಲ್ಲಿ ಇಟ್ಟುಕೊಂಡು ಜನರೆದುರು ನಿಲ್ಲುತ್ತಾರೆ. ಆಯಾ ಜನರು ತಮಗೆ ಬೇಕಾದುದನ್ನು ಆಯ್ದುಕೊಳ್ಳುತ್ತಾರೆ. ಎಲ್ಲರನ್ನೂ ಸಮಾಧಾನಿಸಿದ ಕೀರ್ತಿ ಮೋದಿಗೆ ಸಿಕ್ಕರೆ, ತಮಗೂ ಏನೋ ಸಿಕ್ಕಿತೆಂಬ ಸಂಭ್ರಮದಲ್ಲಿ ಜನರು ಮನೆಗೆ ತೆರಳುತ್ತಾರೆ.
ಯಾವುದೇ ಸಂದರ್ಭದಲ್ಲೂ ಮತ್ತು ಪ್ರದೇಶದಲ್ಲೂ ಮೋದಿ ತಮ್ಮನ್ನು ತಾವು ಉಳಿದವರೊಂದಿಗೆ ಒಬ್ಬ ಅಪರಿಚಿತನಂತೆ ಬಿಂಬಿಸಿಕೊಳ್ಳುವುದೇ ಇಲ್ಲ; ಬದಲಾಗಿ ತೀರಾ ಪರಿಚಿತನಂತೆಯೇ ವರ್ತಿಸುತ್ತಾರೆ. ಹಾಗಾಗಿಯೇ ಸಂಬಂಧಗಳೂ ಗಟ್ಟಿಗೊಳ್ಳುತ್ತವೆ. 5 ವರ್ಷಗಳಲ್ಲಿ ಭಯೋತ್ಪಾದನೆಯ ಮೇಲಿನ ಹೋರಾಟಕ್ಕೆ ಒಬ್ಬಂಟಿಯಾಗಿದ್ದ ಭಾರತಕ್ಕೆ ಇಡೀ ಜಗತ್ತು ಸಹಕರಿಸುವಂತಾದದ್ದು ಇಂಥ ನೆಲೆಗಳಿಂದಲೇ.
ಮೋದಿ ವಿದೇಶಾಂಗ ನೀತಿ ವಿಚಾರದಲ್ಲಿ ಅನುಭವಿಯಲ್ಲ. ಮೊದಲ ಬಾರಿಗೆ ಸಂಸದರಾದರು, ಆಗಲೇ ಪ್ರಧಾನಿಯಾದರು. ಯಾವಾಗಲೂ ಒಬ್ಬ ನಾಯಕ ತಂಡಕ್ಕೆ ಅನುಕೂಲಕರ ವಾತಾವರಣ ನಿರ್ಮಿಸುತ್ತಾನೆ. ಉಳಿದ ಸದಸ್ಯರು ಅದನ್ನು ಬಳಸಿಕೊಂಡು ಸಾಧಿಸುತ್ತಾರೆ. ಅದನ್ನೇ ಮೋದಿ ಮಾಡಿದ್ದು ವಿದೇಶಾಂಗ ನೆಲೆಯಲ್ಲಿ.
ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭ ನಡೆದ ಗೋಧಾÅ ಗಲಭೆ ಸಂಬಂಧದ ಆರೋಪದಲ್ಲಿ ಅಮೆರಿಕ ಮೋದಿಗೆ ವೀಸಾ ನೀಡಿರಲಿಲ್ಲ. ಆದರೆ ಪ್ರಧಾನಿಯಾದ ಮೇಲೆ 2014ರಲ್ಲಿ ಅಮೆರಿಕ ಪ್ರವಾಸ ಮಾಡಿ, ಆಗಿನ ಅಧ್ಯಕ್ಷ ಬರಾಕ್ ಒಬಾಮಾರನ್ನು ಭೇಟಿಯಾದರು. ಹೀಗೆ ಸಂಬಂಧದ ಕೊಂಡಿ ಮುಂದುವರಿಯಿತು. ಉಗ್ರ ಮಸೂದ್ ಅಜರ್‌ನನ್ನು ಜಾಗತಿಕ ಉಗ್ರನ ಪಟ್ಟಿಗೆ ಸೇರಿಸುವ ಪ್ರಯತ್ನ ಕೈಗೂಡಲು ಮೋದಿ ಬ್ರ್ಯಾಂಡ್‌ನ ಸಹಾಯವೂ ಇದೆ.
ಹೋದಲ್ಲೆಲ್ಲ ಜನ
ಮೋದಿಯವರು ವಿದೇಶ ಪ್ರವಾಸ ಸಂದರ್ಭ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಆ ಮೂಲಕ ಭಾರತೀಯ ಅಸ್ಮಿತೆಯನ್ನು ಬಡಿದೆಬ್ಬಿಸಿದರು. ಹಾಗಾಗಿ ವಿದೇಶದಲ್ಲೂ ಭಾರತ ಪ್ರಜ್ವಲಿಸಲು ಕಾರಣವಾಯಿತು.
ಸ್ವಿಟ್ಸರ್ಲಂಡ್‌ನಲ್ಲಿ ಬಾಲಿವುಡ್ ಮನನ
ಸ್ವಿಟ್ಸರ್ಲಂಡ್‌ಗೆ ಭೇಟಿ ನೀಡಿದ ಪ್ರಧಾನಿ ಮೋದಿ ಅಲ್ಲಿನ ಪ್ರಾಕೃತಿಕ ಸೌಂದರ್ಯ ಮತ್ತು ನಗರಗಳ ವಿಹಂಗಮ ನೋಟಕ್ಕೆ ಮನಸೋತಿದ್ದರು. ಈ ವೇಳೆ ಅಲ್ಲಿ ಮಾತನಾಡುತ್ತಾ ಬಾಲಿವುಡ್ ಚಿತ್ರತಂಡದವನ್ನು ಉಲ್ಲೇಖೀಸುತ್ತಾರೆ. ಅಲ್ಲಿನ ಟೆನ್ನಿಸ್ ತಾರೆ ಮಾರ್ಟಿನಾ ಹಿಂಗೀಸ್ ಉಲ್ಲೇಖೀಸಿ, ಅವರು ಭಾರತದ ಸಾನಿಯಾ ಮಿರ್ಜಾ ಮತ್ತು ಲಿಯಾಂಡರ್ ಪೇಸ್ ಜತೆ ಜೋಡಿಯಾಗಿ ಆಡಿದ ನೆನಪನ್ನು ಬಿಚ್ಚಿಟ್ಟರು.
ಅಮೆರಿಕದಲ್ಲಿ ಗಾಂಧಿ ನೆನೆಪು
ಮಹಾತ್ಮಾ ಗಾಂಧೀಜಿಯವರ ಕುರಿತು ವಿಶ್ವದ ಎಲ್ಲ ರಾಷ್ಟ್ರಗಳಿಗೆ ಅತೀವ ಗೌರವವಿದೆ. ಮೋದಿ ಅಮೆರಿಕಕ್ಕೆ ಭೇಟಿ ನೀಡಿದಾಗ ಗಾಂಧಿ ಚಿಂತನೆಯಿಂದ ಪ್ರೇರೇಪಿತವಾದ ಮಾರ್ಟಿನ್ ಲೂಥರ್ ಕಿಂಗ್ ಅವರನ್ನು ಸ್ಮರಿಸುತ್ತಾರೆ. ವಿಶೇಷ ಎಂದರೆ ಅಮೆರಿಕ ಗಾಂಧಿಯಾಗಿ ಮಾರ್ಟಿನ್ ಲೂಥರ್ ಕಿಂಗ್ ಅವರನ್ನು ಕರೆಯುತ್ತಾರೆ. ಇಲ್ಲಿ ಅವರು ಸ್ವಾಮಿ ವಿವೇಕಾನಂದರನ್ನು ನೆನಪಿಸಿಕೊಳ್ಳುತ್ತಾರೆ. ಕೊಲಂಬಿಯಾ ವಿಶ್ವವಿದ್ಯಾನಿಲಯದ ಕುರಿತು ಮಾತನಾಡಿದ ಪ್ರಧಾನಿ, ಡಾ| ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರೂಪಿಸಲು ನೆರವಾಗಿದೆ ಎಂದು ಸ್ಮರಿಸುತ್ತಾರೆ.
ಸಂಬಂಧದ ಎಳೆ ಬಿಚ್ಚಿಡುವ ಮೋದಿ
ಮೋದಿ ಯಾವುದೇ ರಾಷ್ಟ್ರಕ್ಕೆ ಹೋಗಲಿ, ಭಾರತದೊಂದಿಗೆ ಆ ದೇಶದ ಸಂಬಂಧವೇನು ಎಂಬುದನ್ನು ಒತ್ತಿ ಹೇಳಲು ಬಯಸುತ್ತಾರೆ. ಈ ಹಿಂದೆ ಅಪಾ^ನಿಸ್ಥಾನಕ್ಕೆ ಹೋದಾಗಲೂ ಹೀಗೆಯೇ, ಕುರಾನ್‌ನ ವಾಕ್ಯವೊಂದನ್ನು ಉಲ್ಲೇಖೀಸಿ “ನದಿಗಳೆಂದರೆ ಸ್ವರ್ಗ’ ಎಂದು ಹೇಳಿದೆ. ಹಾಗೆಯೇ ಹಿಂದೂಗಳಲ್ಲಿ ಜೀವನದಿ ಎಂಬ ಕಲ್ಪನೆ ಇದೆ ಎಂದು ಹೇಳಿ ಹತ್ತಿರ ತರುವ ಕೆಲಸ ಮಾಡುತ್ತಾರೆ. ಇದು ಒಂದು ರೀತಿಯ ಬಾಂಧವ್ಯ, ಆಪ್ಯಾಯಮಾನತೆ ವೃದ್ಧಿಗೆ ಕಾರಣವಾಯಿತು. ಈ ಭೇಟಿಯಲ್ಲಿ ಅವರು ಹರಿಯುವ ನದಿ ವಿರುದ್ಧ ಮಾತು ಮುಂದುವರಿಸುತ್ತ, ಈ ನದಿ ಭಾರತದಲ್ಲಿ ಇತಿಹಾಸ ಸೃಷ್ಟಿಸಿದ ಸೂಫಿ ಪಂಥದ ಉಗಮಕ್ಕೆ ಕಾರಣವಾಗಿದೆ ಎನ್ನುತ್ತಾರೆ. ಅಷ್ಟೇ ಅಲ್ಲದೆ ಆಗತಾನೆ ಜೀವ ಪಡೆದುಕೊಂಡಿದ್ದ ಅಪಾ^ನ್ ಕ್ರಿಕೆಟ್ ತಂಡಕ್ಕೆ ಶುಭಾಶಯ ಕೋರಲು ಮೋದಿ ಮರೆಯಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Kollegala: ಶಾಲಾ ಮಕ್ಕಳಿಗೆ ನೀಡುವ KMF ಹಾಲಿನ ಪುಡಿ ಅಕ್ರಮ ದಾಸ್ತಾನು… ಓರ್ವನ ಬಂಧನ
Dangerous Stunt: 5 ವರ್ಷದ ಬಾಲಕನನ್ನು ಕಾರಿನ ಬಾನೆಟ್ ಮೇಲೆ ಕೂರಿಸಿ ಸ್ಟಂಟ್
BBK11: ಕ್ಯಾಪ್ಟನ್ ಆಗುವ ಆತುರದಲ್ಲಿ ಗೇಮ್‌ನಲ್ಲಿ ಮೋಸ? – ಭವ್ಯ ವಿರುದ್ದ ಗಂಭೀರ ಆರೋಪ
INDWvWIW: ದೀಪ್ತಿ ಶರ್ಮಾ ಆಲ್ ರೌಂಡ್ ಶೋ; ಸರಣಿ ಕ್ಲೀನ್‌ಸ್ವೀಪ್ ಮಾಡಿದ ವನಿತೆಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.