ಮೋದಿ ಮುನ್ನೂರು, ಕೈ ಮೂರು; ಪಂಚರಾಜ್ಯಗಳಲ್ಲಿ ಆಡಳಿತ ವಿರೋಧಿ ಅಲೆ
Team Udayavani, Mar 12, 2017, 3:45 AM IST
ನವದೆಹಲಿ: ನೋಟು ಅಮಾನ್ಯದ ಬಳಿಕ ರಾಷ್ಟ್ರದ ಗಮನಸೆಳೆದಿದ್ದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಉತ್ತರಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ್ದು, ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು ಇನ್ನಷ್ಟು ವೃದ್ಧಿಸಿದೆ. ಪಂಜಾಬ್‌ನಲ್ಲಿ ಹತ್ತು ವರ್ಷಗಳ ಬಳಿಕ ಸಂಪೂರ್ಣ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಮರಳಿದ್ದರೆ; ಅತಂತ್ರ ವಿಧಾನಸಭೆ ಸೃಷ್ಟಿಯಾಗಿರುವ ಗೋವಾ ಹಾಗೂ ಮಣಿಪುರದಲ್ಲಿ ದೊಡ್ಡ ಪಕ್ಷವಾಗಿ ಮೂಡಿಬಂದು
ಅಧಿಕಾರದ ಸನಿಹದಲ್ಲಿದೆ.
ವಿಶೇಷವೆಂದರೆ ಈ ಬಾರಿಯ ಫಲಿತಾಂಶ ಸಂಪೂರ್ಣ ಆಡಳಿತ ವಿರೋಧಿ ಅಲೆಯ ಭಾಗವಾಗಿ ಹೊರಬಿದ್ದಿದೆ. ಯಾವ ರಾಜ್ಯದಲ್ಲೂ ಆಡಳಿತ ನಡೆಸುತ್ತಿದ್ದ ಪಕ್ಷಕ್ಕೆ ಮತದಾರ ಜೈ ಎಂದಿಲ್ಲ. ಇದಷ್ಟೇ ಅಲ್ಲ, ಉತ್ತರಾಖಂಡ ಮುಖ್ಯಮಂತ್ರಿ ಹರೀಶ್ ರಾವತ್ ಅವರಿಗೆ ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲೂ ಸೋಲಿನ ರುಚಿ ನೀಡಿದರೆ, ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಶೇಕರ್ ಕೂಡ ಸೋತು ಸುಣ್ಣವಾಗಿದ್ದಾರೆ.
ಕಳೆದ ವರ್ಷ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು, 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದ ಮೇಲೆ ದೇಶವಾಸಿಗಳು ನಗದಿಗಾಗಿ ತೀವ್ರ ಕಷ್ಟ ಎದುರಿಸಿದ್ದರು.
ಇದನ್ನೇ ಪ್ರಮುಖ ವಿಷಯವನ್ನಾಗಿಸಿದ್ದ ಪ್ರತಿಪಕ್ಷಗಳು, ಮತದಾರ ತಮ್ಮತ್ತಲೇ ಒಲಿಯಬಹುದು ಎಂದೇ ಭಾವಿಸಿದ್ದವು. ಜತೆಗೆ ಇದಕ್ಕೆ ಪೂರಕವಾಗಿಯೇ ತಂತ್ರಗಾರಿಕೆಯನ್ನೂ ರೂಪಿಸಿದ್ದವು. ಆದರೆ, ಇಡೀ ಚುನಾವಣೆಯಲ್ಲಿ ಮತದಾರ ಬಿಜೆಪಿಯನ್ನು ಈ ನಿಟ್ಟಿನಲ್ಲಿ ನೋಡಿಯೇ ಇಲ್ಲ. ಬದಲಾಗಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಹಿಂದೆಂದೂ ಕೇಳರಿಯದ ರೀತಿಯಲ್ಲಿ ಫಲಿತಾಂಶ ಕೊಟ್ಟಿದ್ದಾನೆ.
ಪ್ರಧಾನಿ ಮೋದಿ ಪಾಲಿಗೆ ಇದು, “ಮಾಡು ಇಲ್ಲವೇ ಮಡಿ’ ಎಂಬಂತಿದ್ದ ಚುನಾವಣೆ. ರಾಜ್ಯಸಭೆಯಲ್ಲಿ ಸ್ಥಾನಗಳ ಕೊರತೆ, ಸದ್ಯದಲ್ಲೇ ಎದುರಾಗಲಿರುವ ರಾಷ್ಟ್ರಪತಿ ಚುನಾವಣೆ ವೇಳೆ ಬೇರೆ ಬೇರೆ ಪಕ್ಷಗಳ ಅಂಗಲಾಚುವ ಸ್ಥಿತಿಯನ್ನು ಎದುರಿಗೆ ಇಟ್ಟುಕೊಂಡಿದ್ದ ಮೋದಿ-ಶಾ ಜೋಡಿ, ಉತ್ತರ ಪ್ರದೇಶದಲ್ಲಿ ಗೆದ್ದರೆ ಸಾಕು, ಅರ್ಧ ಸಮಸ್ಯೆ ಈಡೇರಿದಂತಾಗುತ್ತದೆ ಎಂದೇ ಲೆಕ್ಕಾಚಾರ ಹಾಕಿತ್ತು. ಅದರಂತೆಯೇ ಕಾರ್ಯತಂತ್ರ ರೂಪಿಸಿ ಯಶವನ್ನೂ ಕಂಡಿದೆ.
ಉತ್ತರ ಪ್ರದೇಶದ ವಿಚಾರಕ್ಕೆ ಬಂದರೆ, ಇಲ್ಲಿ ಬಿಜೆಪಿಯದ್ದು ಅಭೂತಪೂರ್ವ ದಿಗ್ವಿಜಯ. ಕಳೆದ ಬಾರಿಯ 48 ಸೀಟುಗಳಿಂದ 324ಕ್ಕೆ ಏರಿಸಿಕೊಂಡ ಕೀರ್ತಿ. ಆದರೆ ಕಾಂಗ್ರೆಸ್ ಪಾಲಿಗೆ ಇದು ಕನಸಲ್ಲೂ ಕಾಡುವ ಫಲಿತಾಂಶ. 2012ರಲ್ಲಿ 28 ಸ್ಥಾನ ಗೆದಿದ್ದ ರಾಹುಲ್ ಪಡೆ ಈ ಬಾರಿ ಕೇವಲ ಏಳು ಸ್ಥಾನಕ್ಕೇ ತೃಪ್ತಿಪಟ್ಟಿದೆ. ಆದರೆ ಕಳೆದೈದು ವರ್ಷಗಳ ಕಾಲ “ಯೂಥ್ ಐಕಾನ್’ ರೀತಿಯಲ್ಲೇ ಆಡಳಿತ ನಡೆಸಿದ್ದ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಅಖೀಲೇಶ್ ಯಾದವ್ ಅವರು ತಮ್ಮ ತಂದೆ ಮತ್ತು ಚಿಕ್ಕಪ್ಪನ ಜಗಳದ ಮಧ್ಯೆ ಮೋದಿ ಅಲೆಯಲ್ಲಿ ಕೊಚ್ಚಿ ಹೋಗಿದ್ದಾರೆ. ಬಹುಜನ ಸಮಾಜವಾದಿ ಪಕ್ಷದ ಮಾಯಾವತಿ ಅವರು, ಫಲಿತಾಂಶ ಕಂಡು “ಇದು ಹೇಗಾಯಿತು’ ಎಂದು ಕೇಳುವಷ್ಟರ ಮಟ್ಟಿಗೆ ಬಂದಿದೆ.
ಇನ್ನು ಉತ್ತರಾಖಂಡದಲ್ಲೂ ಬಿಜೆಪಿ ಕಾರ್ಯಧಿತಂತ್ರ ವಕೌìಟ್ ಆಗಿದ್ದು, ಕಾಂಗ್ರೆಸ್ ಭಾರಿ ಪ್ರಮಾಣದಲ್ಲೇ ಸೋಲನುಭವಿಸಿದೆ. ಸ್ವತಃ ಸಿಎಂ ಹರೀಧಿಶ್ ರಾವತ್ ಅವರೇ ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲೂ ಸೋತು, ಆಡಳಿತ ವಿರೋಧಿ ಅಲೆಗೆ ಕೊಚ್ಚಿ ಹೋಗಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದ, ಮಾಜಿ ಸಿಎಂ ವಿಜಯ ಬಹುಗುಣ ಅವರ ಜತೆಗೆ 9 ಕಾಂಗ್ರೆಸ್ ಶಾಸಕರನ್ನು ಸೆಳೆದುಕೊಂಡಿದ್ದ ಬಿಜೆಪಿ, ಪಕ್ಷವನ್ನು ಇನ್ನಷ್ಟು ಬಲ ಮಾಡಿಕೊಂಡಿತ್ತು. ಇದೆಲ್ಲದರ ಪರಿಣಾಮ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪಕ್ಷವೊಂದು 57 ಸ್ಥಾನ ಗೆದ್ದ ಕೀರ್ತಿಯನ್ನೂ ಪಡೆದಿದೆ.
ಈ ಮಧ್ಯೆ ಪಂಜಾಬ್, ಅಚ್ಚರಿಯ ಫಲಿತಾಂಶಕ್ಕೆ ಕಾರಣವಾಗಿದೆ. ಕಾಂಗ್ರೆಸ್ ನೇತಾರ ಕ್ಯಾಪ್ಟನ್ ಅಮರೀಂದರ್
ಸಿಂಗ್‌ಗೆ 75ನೇ ಜನ್ಮದಿನದಂದೇ ಪುನರುಜ್ಜೀವನ ನೀಡಿದೆ.
ಚುನಾವಣೋತ್ತರ ಸಮೀಕ್ಷೆಗಳು ಆಪ್ ಮತ್ತು ಕಾಂಗ್ರೆಸ್ ನಡುವೆ ತೀವ್ರ ಬಲಾಬಲದ ಸ್ಪರ್ಧೆ ಇರುತ್ತದೆ ಎಂದು ಹೇಳಿದ್ದವಾದರೂ, ಕಡೆಗೆ ಫಲಿತಾಂಶದಲ್ಲಿ ಮಾತ್ರ ಕ್ಯಾಪ್ಟನ್ ಪಡೆಗೆಬಹುಮತ ಸಿಕ್ಕಿದೆ. ಜತೆಗೆ, ಶಿರೋಮಣಿ ಅಕಾಲಿದಳ ಮತ್ತು ಬಿಜೆಪಿ ಮೈತ್ರಿಕೂಟಕ್ಕೆ ಸೋಲುಣಿಸುವ ಮೂಲಕ ಕಾಂಗ್ರೆಧಿಸ್‌ಗೆ ಕೊಂಚ ಮಟ್ಟಿನ ಸಮಾಧಾನ ಮೂಡಲೂ ಕಾರಣರಾಗಿದ್ದಾರೆ ಎಂದರೆ ತಪ್ಪಾಗಲಾರದು. ಇನ್ನು ಪುಟ್ಟ ರಾಜ್ಯ ಗೋವಾದಲ್ಲಿ ಮತ್ತೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಲಕ್ಷ್ಮೀಕಾಂತ್ ಪರ್ಶೇಕರ್ ಅಲ್ಲ ಸಿಎಂ, ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಅವರಿಗೇ ಮತ ನೀಡಿ ಎಂದು ಪ್ರಚಾರ ಮಾಡಿದ್ದರೂ ಮತದಾರ ಆಡಳಿತದಲ್ಲಿದ್ದ ಬಿಜೆಪಿಯತ್ತ ವಾಲಿಲ್ಲ. ಬದಲಾಗಿ ಆಡಳಿತ ವಿರೋಧಿ ಅಲೆಯಂತೆ, ಕಾಂಗ್ರೆಸ್ ಕಡೆ ಮನಸ್ಸು ಮಾಡಿದ್ದಾನೆ. ಒಟ್ಟಾರೆ 40 ಕ್ಷೇತ್ರಗಳಲ್ಲಿ 18ರಲ್ಲಿ ಗೆದ್ದಿರುವ ಕಾಂಗ್ರೆಸ್
ಬಹುಮತಕ್ಕೆ ಮೂರು ಸ್ಥಾನಗಳ ಕೊರತೆ ಎದುರಿಸುತ್ತಿದೆ.
ಆದರೆ ಕೇವಲ 14 ಸ್ಥಾನ ಗೆದ್ದಿರುವ ಬಿಜೆಪಿಗೆ ಅಧಿಕಾರದ ಆಸೆ ಕೊಂಚ ದೂರದಲ್ಲೇ ಇದೆ. ಇಲ್ಲೂ ಸ್ವತಃ ಸಿಎಂ ಪರ್ಶೇಕರ್ ಅವರೇ ಆಡಳಿತ ವಿರೋಧಿ ಅಲೆಗೆ ಕೊಚ್ಚಿ ಹೋಗಿದ್ದಾರೆ. ಇನ್ನೊಂದು ಪುಟ್ಟ ರಾಜ್ಯ ಮಣಿಪುರ ವಿಧಾನಸಭೆಯಲ್ಲೂ ಅತಂತ್ರ ಸ್ಥಿತಿ. ಆಡಳಿತದಲ್ಲಿದ್ದ ಕಾಂಗ್ರೆಸ್ 28ರಲ್ಲಿ ಗೆದ್ದಿದ್ದರೆ, ಬಿಜೆಪಿ 21ರಲ್ಲಿ ಜಯಗಳಿಸಿದೆ. ಆದರೆ ಕಳೆದ ಬಾರಿ ಈ ರಾಜ್ಯದಲ್ಲಿ ಏನೂ ಇಲ್ಲದಂಥ ಪರಿಸ್ಥಿತಿ ಇದ್ದ ಬಿಜೆಪಿ, ಈ ಪ್ರಮಾಣದ ಸ್ಥಾನ ಗಳಿಸಿರುವುದು ಮಹತ್ವದ್ದೇ. ಈಶಾನ್ಯ ರಾಜ್ಯಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿಗೆ ಈ ಫಲಿತಾಂಶ ಸ್ವಲ್ಪ ಮಟ್ಟಿನ ಸಮಾಧಾನ ತಂದಿದ್ದರೂ, ಸರ್ಕಾರ ರಚನೆಯ ಹಾದಿ ಸದ್ಯಕ್ಕೆ ಕಠಿಣವಾಗಿದೆ.
ಉತ್ತರ ಪ್ರದೇಶದಲ್ಲಿ 300 ಸ್ಥಾನ ದಾಟಿದ ಬಿಜೆಪಿ
ಮೂರರಲ್ಲಿ ಕಾಂಗೆÅಸ್, ಎರಡರಲ್ಲಿ ಬಿಜೆಪಿ ಅಧಿಕಾರಕ್ಕೆ
ನರೇಂದ್ರ ಮೋದಿ, ಅಮಿತ್ ಶಾ ಜೋಡಿ ಅದ್ವಿತೀಯ
ಪಂಚರಾಜ್ಯಗಳಲ್ಲೂ ಆಡಳಿತ ವಿರೋಧಿ ಅಲೆ ಸ್ಪಷ್ಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.