Money Laundering Case: ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಗೆ ಇ.ಡಿ ಸಮನ್ಸ್
Team Udayavani, Oct 3, 2024, 12:49 PM IST
ಹೈದರಾಬಾದ್: ಹೈದರಾಬಾದ್ ಕ್ರಿಕೆಟ್ ಸಂಸ್ಥೆಯಲ್ಲಿ ನಡೆದಿರುವ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಹಾಗೂ ಕಾಂಗ್ರೆಸ್ ಮುಖಂಡ ಮೊಹಮ್ಮದ್ ಅಜರುದ್ದೀನ್ ಅವರಿಗೆ ಜಾರಿ ನಿರ್ದೇಶನಾಲಯ ಗುರುವಾರ (ಅ.3) ರಂದು ಸಮನ್ಸ್ ಜಾರಿ ಮಾಡಿದೆ.
ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ 20 ಕೋಟಿ ಅವ್ಯವಹಾರ ನಡೆದಿದೆ ಎನ್ನಲಾಗಿದ್ದು ಈ ಕುರಿತು ತೆಲಂಗಾಣದ ಎಸಿಬಿ ಎಫ್ ಐಆರ್ ದಾಖಲು ಮಾಡಿತ್ತು ಇದರ ಆಧಾರದ ಮೇಲೆ ಇಡಿ ಪ್ರಕರಣ ದಾಖಲು ಮಾಡಿಕೊಂಡಿದೆ. ಅದರಂತೆ ಇಂದು ಅ.3 ರಂದು ಇಡಿ ಅಧಿಕಾರಿಗಳ ಮುಂದೆ ಅಜರುದ್ದೀನ್ ಹಾಜರಾಗಲಿದ್ದಾರೆ.
ಅಜರುದ್ದೀನ್ ಅವರು ಸೆಪ್ಟೆಂಬರ್ 2019 ರಲ್ಲಿ ಹೈದರಾಬಾದ್ ಕ್ರಿಕೆಟ್ ಸಂಸ್ಥೆ (HCA) ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಈ ನಡುವೆ ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣದಲ್ಲಿ ಹಣಕಾಸಿನ ಅಕ್ರಮ ಎಸಗಿದ್ದಾರೆ. ಖಾಸಗಿ ಕಂಪನಿಗಳಿಗೆ ಹೆಚ್ಚಿನ ದರದಲ್ಲಿ ಗುತ್ತಿಗೆ ನೀಡಿ ಕೋಟ್ಯಂತರ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ ಎನ್ನಲಾಗಿದೆ ಅಲ್ಲದೆ ಇದಕ್ಕೆ ಸಂಬಂಧಿಸಿ ಮೂರು ಎಫ್‌ಐಆರ್‌ಗಳನ್ನು ದಾಖಲು ಮಾಡಲಾಗಿತ್ತು ಎನ್ನಲಾಗಿದೆ
ಪ್ರಕರಣಕ್ಕೆ ಸಂಬಂಧಿಸಿ ಇಡಿ ತೆಲಂಗಾಣದ 9 ಸ್ಥಳಗಳಲ್ಲಿ ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳು ಮತ್ತು ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಂಡಿದೆ.
ಇದನ್ನೂ ಓದಿ: ಗ್ವಾಟೆಮಾಲಾ ಗಡಿಯಲ್ಲಿ ಮೆಕ್ಸಿಕೋ ಸೇನೆಯಿಂದ ಗುಂಡಿನ ದಾಳಿ-6 ವಲಸಿಗರು ಮೃತ್ಯು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Achieve: 100 ಗಿಗಾ ವ್ಯಾಟ್ ಸೌರ ವಿದ್ಯುತ್: ಭಾರತದಿಂದ ಹೊಸ ಮೈಲುಗಲ್ಲು
Introduce: ಸೈಬರ್ ವಂಚನೆ ತಡೆಗೆ ಬ್ಯಾಂಕ್‌ಗಳಿಗೆ ಹೊಸ ಡೊಮೈನ್
Allege: ಮಹಾರಾಷ್ಟ್ರ ಮತಪಟ್ಟಿಯಲ್ಲೇ ಭಾರೀ ಅವ್ಯವಹಾರ: ವಿಪಕ್ಷ ಮಹಾ ವಿಕಾಸ ಅಘಾಡಿ
Cabinet Approves: ನೂತನ ಆದಾಯ ತೆರಿಗೆ ಮಸೂದೆಗೆ ಕೇಂದ್ರ ಸಂಪುಟ ಅನುಮತಿ
Space Station: ಸುನೀತಾ ವಿಲಿಯಮ್ಸ್ ವಾಪಸ್ ವಿಳಂಬ: ಶುಭಾಂಶು ಯಾತ್ರೆಗೂ ತೊಡಕು
MUST WATCH
ಹೊಸ ಸೇರ್ಪಡೆ
Achieve: 100 ಗಿಗಾ ವ್ಯಾಟ್ ಸೌರ ವಿದ್ಯುತ್: ಭಾರತದಿಂದ ಹೊಸ ಮೈಲುಗಲ್ಲು
Introduce: ಸೈಬರ್ ವಂಚನೆ ತಡೆಗೆ ಬ್ಯಾಂಕ್‌ಗಳಿಗೆ ಹೊಸ ಡೊಮೈನ್
Allege: ಮಹಾರಾಷ್ಟ್ರ ಮತಪಟ್ಟಿಯಲ್ಲೇ ಭಾರೀ ಅವ್ಯವಹಾರ: ವಿಪಕ್ಷ ಮಹಾ ವಿಕಾಸ ಅಘಾಡಿ
Fraud Case ಸೈಬರ್ ಅಪರಾಧ: ಒಂದೇ ವರ್ಷ 3 ಸಾವಿರ ಕೋ. ರೂ. ವಂಚನೆ
Cabinet Approves: ನೂತನ ಆದಾಯ ತೆರಿಗೆ ಮಸೂದೆಗೆ ಕೇಂದ್ರ ಸಂಪುಟ ಅನುಮತಿ