Mohammed Shami: ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ದೇವರಂತೆ ರಕ್ಷಿಸಿದ ಮಹಮ್ಮದ್ ಶಮಿ
Team Udayavani, Nov 26, 2023, 9:44 AM IST
ಡೆಹ್ರಾಡೂನ್: ಕೆಲ ದಿನಗಳ ಹಿಂದೆಯಷ್ಟೇ ಮುಗಿದ ವಿಶ್ವಕಪ್ ಪಂದ್ಯಾವಳಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಮೊಹಮದ್ ಶಮಿ ಸದ್ಯ ರಿಲ್ಯಾಕ್ಸ್ ಮೂಡ್ ಗೆ ತೆರಳಿದ್ದಾರೆ ತನ್ನ ಫ್ಯಾಮಿಲಿ ಜೊತೆ ನೈನಿತಾಲ್ ನಲ್ಲಿ ದಿನ ಕಳೆಯಲು ತೆರಳಿದ್ದಾರೆ ಆದರೆ ಈ ವೇಳೆ ಅಲ್ಲಿ ಓರ್ವರ ಕಾರು ಅಪಘಾತವಾಗಿದ್ದು ಅವರ ಜೀವ ಉಳಿಸುವಲ್ಲಿ ಶಮಿ ಅವರ ಪಾತ್ರ ಮಹತ್ತರವಾಗಿದೆ.
ಹೌದು ಭಾರತ ಕ್ರಿಕೆಟ್ ತಂಡದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ನೈನಿತಾಲ್ ಪ್ರವಾಸದಲ್ಲಿದ್ದು ಈ ವೇಳೆ ತಾನು ಪ್ರಯಾಣಿಸತ್ತಿದ್ದ ಕಾರಿನ ಮುಂಭಾಗದಲ್ಲಿ ಒಂದು ಕಾರು ಅಪಘಾತವಾಗಿ ಬಿದ್ದಿದೆ ಈ ವೇಳೆ ಸಹಾಯಕ್ಕೆ ಮುಂದಾದ ಶಮಿ ಕಾರಿನಲ್ಲಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ವ್ಯಕ್ತಿಗೆ ಮರುಜನ್ಮ ನೀಡಿದ್ದಾರೆ.
ಶನಿವಾರ ಮಧ್ಯರಾತ್ರಿ ಶಮಿ ಉತ್ತರಾಖಂಡ್‌ನ ನೈನಿತಾಲ್‌ಗೆ ತೆರಳುತ್ತಿದ್ದಾಗ ಎದುರಿನಿಂದ ಬಂದ ಕಾರು ಬೆಟ್ಟದ ಕೆಳಗೆ ಧುಮುಕಿತ್ತು. ಈ ವೇಳೆ ಶಮಿ ಕೂಡಲೇ ಕಾರನ್ನು ನಿಲ್ಲಿಸಿ ಕೆಲವರ ಸಹಾಯದಿಂದ ಕಾರಿನಲ್ಲಿದ್ದ ವ್ಯಕ್ತಿಯನ್ನು ಸಕಾಲದಲ್ಲಿ ಹೊರತೆಗೆದು ಆಸ್ಪತ್ರೆಗೆ ದಾಖಲಿಸಿ ವ್ಯಕ್ತಿಗೆ ಎರಡನೇ ಜನ್ಮ ನೀಡಿದ್ದಾರೆ.
ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಶಮಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು. “ಕಾರಿನಲ್ಲಿದ್ದ ವ್ಯಕ್ತಿ ತುಂಬಾ ಅದೃಷ್ಟಶಾಲಿ. ದೇವರು ಆತನಿಗೆ ಎರಡನೇ ಜೀವನವನ್ನು ನೀಡಿದ್ದಾರೆ ಎಂದು ಬರೆದುಕೊಂಡ ಶಮಿ. ನಾನು ನೈನಿತಾಲ್‌ಗೆ ಹೋಗುತ್ತಿದ್ದಾಗ ನನ್ನ ಮುಂದೆ ಬಂದ ಕಾರು ಗುಡ್ಡಗಾಡು ರಸ್ತೆಯಲ್ಲಿ ಕಂದರಕ್ಕೆ ಬಿದ್ದಿತು. ಕೂಡಲೇ ನನ್ನ ಕಾರನ್ನು ನಿಲ್ಲಿಸಿ ಅಲ್ಲಿದ್ದ ಕೆಲವರ ಸಹಾಯದಿಂದ ಅವರನ್ನು ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಬಂದೆ ಎಂದು ಶಮಿ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.
ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಮಿ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ. ನೀವು ನಿಜಕ್ಕೂ ಗ್ರೇಟ್ ಬ್ರೋ, ದೇವರಂತೆ ಬಂದು ವ್ಯಕ್ತಿಯ ಜೀವ ಉಳಿಸಿದ್ದೀರಿ, ನಿಮ್ಮ ಕೆಲಸಕ್ಕೆ ಹಾಟ್ಸ್ ಆಫ್ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wikipedia: ಪಕ್ಷಪಾತ, ತಪ್ಪು ಮಾಹಿತಿ ದೂರು: ವಿಕಿಪೀಡಿಯಾಗೆ ಕೇಂದ್ರದಿಂದ ನೋಟಿಸ್
Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
MUST WATCH
ಹೊಸ ಸೇರ್ಪಡೆ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.