![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Feb 27, 2021, 6:51 AM IST
ಹೈದರಾಬಾದ್: ಅಖಂಡ ಭಾರತದ ಅಗತ್ಯ ಈಗಲೂ ಇದೆ. ಅದರಿಂದ ನೆರೆಯ ಪಾಕಿಸ್ಥಾನದಂತಹ ದೇಶಗಳಿಗೆ ಸಹಾಯವೇ ಆಗುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.
ಅವರು ಸಂಸ್ಕೃತ ಪುಸ್ತಕವೊಂದರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಖಂಡ ಭಾರತವನ್ನು ಹಿಂದೂ ಧರ್ಮದಿಂದ ಸಾಧಿಸಲು ಸಾಧ್ಯ. ಇದು ವಸಾಹತುಶಾಹಿ ಕಲ್ಪನೆಯಲ್ಲ. ಹಿಂದೂ ಧರ್ಮ ಜಗತ್ತೇ ಒಂದು ಕುಟುಂಬ ಎಂದು ಭಾವಿಸುತ್ತದೆ. ಬೇರ್ಪಟ್ಟ ಭಾಗಗಳು ಮತ್ತೆ ಭಾರತಕ್ಕೆ ಸೇರಿಕೊಳ್ಳುವುದರಿಂದ ಜನರಿಗೆ ಒಳಿತಾಗುತ್ತದೆ ಎಂದು ಭಾಗವತ್ ಹೇಳಿದ್ದಾರೆ.
“ನೆರೆಯ ಅಫ್ಘಾನಿಸ್ಥಾನ, ಪಾಕಿಸ್ಥಾನದಂತಹ ದೇಶಗಳನ್ನು ನಾವು ಯಾವತ್ತೂ ಬೇರೆ ಎಂದು ನೋಡುವುದಿಲ್ಲ. ಅವರ ಆಚಾರವಿಚಾರಗಳಿಂದಲೂ ನಮಗೆ ಸಮಸ್ಯೆಯಿಲ್ಲ. ಭಾರತದಿಂದ ಬೇರ್ಪಟ್ಟ ಮೇಲೆ ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನ ದೇಶಗಳು ಎಂದಾದರೂ ಸಂತೋಷದಿಂದಿವೆಯಾ ಎಂದು ತಿಳಿದುಕೊಳ್ಳಲು ಬಯಸುತ್ತೇನೆ. ಆ ದೇಶಗಳು ಭಾರತದ ಶಕ್ತಿಯನ್ನು ಕಡಿದು ಕೊಂಡಿದ್ದರಿಂದಲೇ ಆ ಪ್ರಾಂತ್ಯಗಳಲ್ಲಿ ಅಶಾಂತಿ ಹುಟ್ಟಿದೆ ಎಂದು ಭಾಗವತ್ ಅಭಿಪ್ರಾಯಪಟ್ಟಿದ್ದಾರೆ. ಭಾರತ ವಿಭಜ ನೆಯಾಗುವ 6 ತಿಂಗಳ ಮುನ್ನ ಕೆಲವರು ಈ ಬಗ್ಗೆ ಗುಮಾನಿ ವ್ಯಕ್ತಪಡಿಸಿದ್ದರು. ಆಗ ನೆಹರೂ, ಅದನ್ನು ಮುಟಾuಳರ ಕಲ್ಪನೆ ಎಂದಿದ್ದರು. ಹಾಗೆ ನೋಡಿದರೆ ಏನು ಬೇಕಾದರೂ ಸಂಭವಿಸಬಹುದು’ ಎಂದು ಅವರು ಹೇಳಿದರು.
Pariksha Pe Charcha: ಸಾರ್ಟ್‌ಫೋನ್‌ಗಿಂತಲೂ ನೀವು ಸಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
You seem to have an Ad Blocker on.
To continue reading, please turn it off or whitelist Udayavani.