ಗೋ ಸೇವೆಯಿಂದ ಅಪರಾಧಿ ಮನೋಭಾವ ಇಳಿಕೆ
ಗೋವುಗಳಿಂದಾಗಿ ಮನುಷ್ಯರ ಹೃದಯ ಕೋಮಲ: ಮೋಹನ್ ಭಾಗವತ್
Team Udayavani, Dec 9, 2019, 6:05 AM IST
ಹೊಸದಿಲ್ಲಿ: “ಗೋವುಗಳ ಆರೈಕೆಯಿಂದ ಕೈದಿಗಳ ಮನಃ ಪರಿವರ್ತನೆಯಾಗಿ ಅವರಲ್ಲಿನ ಅಪರಾಧಿ ಮನೋಭಾವ ಗಣನೀಯವಾಗಿ ತಗ್ಗುವುದು ಕಂಡು ಬಂದಿದೆ. ಇದನ್ನು ಕೂಲಂಕಷವಾಗಿ ಅಧ್ಯಯನ ಮಾಡಿ, ವೈಜ್ಞಾನಿಕವಾಗಿ ಅಂಕಿ-ಅಂಶಗಳನ್ನು ದಾಖಲಿಸುವ ಮೂಲಕ ಗೋವುಗಳ ಸೇವೆಯಿಂದ ಮಾನವನಲ್ಲಿ ಕಂಡು ಬರುವ ಪರಿವರ್ತನೆಗಳನ್ನು ವಿಶ್ವಕ್ಕೆ ತೋರ್ಪಡಿಸುವ ಆವಶ್ಯಕತೆಯಿದೆ’ ಎಂದು ಆರ್‌ಎಸ್‌ಎಸ್‌ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ದಿಲ್ಲಿಯಲ್ಲಿ ರವಿವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಗೋವುಗಳು ಈ ವಿಶ್ವದ ಮಾತೆಯರು. ಇವು ಮಣ್ಣನ್ನು, ಜಗದ ಜೀವರಾಶಿಗಳನ್ನು, ಪಕ್ಷಿಗಳನ್ನು, ಮನುಷ್ಯರನ್ನು ಕಾಯಿಲೆಗಳಿಂದ ರಕ್ಷಿಸುತ್ತವೆ. ಜತೆಗೆ ಮನುಷ್ಯರ ಹೃದಯವನ್ನು ಹೂವಿನಷ್ಟು ಕೋಮಲವಾಗಿಸುತ್ತವೆ ಎಂದರು. ಜೈಲಿನಲ್ಲಿರುವ ಕೈದಿಗಳನ್ನು ಜೈಲಿನ ಗೋ ಶಾಲೆಗಳ ಸೇವೆಗೆ ನಿಯೋಜಿಸಿದ ಅನಂತರ ಅವರ ಮನೋಭಾವದಲ್ಲಿ ದೊಡ್ಡ ಬದಲಾವಣೆಯಾಗಿರುವುದನ್ನು ಕಂಡುಕೊಳ್ಳಲಾಗಿದೆ. ಇದನ್ನು ಮತ್ತಷ್ಟು ವ್ಯವಸ್ಥಿತವಾಗಿ ಅಧ್ಯಯನ ಮಾಡಿ, ಅಂಕಿ-ಅಂಶಗಳ ಮೂಲಕ ಗೋವುಗಳ ಮಹತ್ವವನ್ನು ಜಗತ್ತಿಗೆ ಸಾರಬೇಕಿದೆ ಎಂದು ಅವರು ಆಗ್ರಹಿಸಿದರು.
ಗೋ ಶಾಲೆಗಳಲ್ಲಿನ ಅವ್ಯವಸ್ಥೆಗಳ ಬಗ್ಗೆ ಮಾತನಾಡಿದ ಅವರು, ಸೀಮಿತ ಸಂಖ್ಯೆಯಲ್ಲಿ ಗೋವುಗಳನ್ನು ಸಾಕುವ ಕಡೆಗೆ ಮಿತಿಮೀರಿದ ಸಂಖ್ಯೆಯಲ್ಲಿ ಗೋವುಗಳು ಬಂದು ಸೇರಿಕೊಂಡರೆ ಸಮಸ್ಯೆಗಳು ಉಲ್ಬಣವಾಗುವುದು ಖಚಿತ. ಹಾಗಾಗಿ ದೇಶದ ಒಬ್ಬೊಬ್ಬರೂ ಒಂದೊಂದು ಗೋವನ್ನು ಸಾಕುವ ಜವಾಬ್ದಾರಿ ಹೊತ್ತರೆ, ಬೀದಿದನಗಳ ಹಾವಳಿಯೂ ನಿಯಂತ್ರಣವಾಗಿ, ಗೋ ಶಾಲೆಗಳ ಸಮಸ್ಯೆಯೂ ನಿರ್ಮೂಲನೆಯಾಗುತ್ತದೆ ಎಂದು ತಿಳಿಸಿದ್ದಾರೆ.
ರಾಸುಗಳ ಸಂರಕ್ಷಣೆಗೆ “ಗೋವು ಸಫಾರಿ’
ಬೀದಿ ಗೋವುಗಳ ಹಾವಳಿಯಿಂದ ಕಂಗೆಟ್ಟಿರುವ ಉತ್ತರ ಪ್ರದೇಶದ ಜನತೆಯ ಸಮಸ್ಯೆಗೆ ಸ್ಪಂದಿಸಿರುವ ಅಲ್ಲಿನ ಸರಕಾರ, ಸದ್ಯದಲ್ಲೇ ಗೋವು ಸಫಾರಿ ಎಂಬ ಹೆಸರಿನ ವಿನೂತನ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ.
ಬೀದಿಹಸುಗಳ ಸಂರಕ್ಷಣೆ, ಪುನರುಜ್ಜೀವನಕ್ಕಾಗಿ ಈ ಯೋಜನೆಯನ್ನು ಆರಂಭಿಸಲು ನಿರ್ಧರಿಸಿದೆ. ಅಗಾಧ ಸಂಖ್ಯೆಯಲ್ಲಿರುವ ಗೋ ಶಾಲೆಗಳಲ್ಲಿ ಗೋವುಗಳಿಗೆ ಒದಗಿಸಲಾಗಿರುವ ಸೌಲಭ್ಯಗಳು ಹಾಗೂ ಅವುಗಳಿಂದ ಪಡೆಯಲಾಗುತ್ತಿರುವ ಪ್ರಯೋಜನಗಳ ಕುರಿತಂತೆ ಪ್ರವಾಸಿಗರಿಗೆ ತೋರಿಸುವ ಉದ್ದೇಶವನ್ನು ಈ ಯೋಜನೆ ಒಳಗೊಂಡಿದೆ.
ಇದರ ವಿವರಣೆ ನೀಡಿದ ಪಶುಸಂಗೋಪನ ಸಚಿವ ಲಕ್ಷ್ಮೀ ನಾರಾಯಣ್ ಚೌಧರಿ, ಅಧಿಕ ಸಂಖ್ಯೆಯಲ್ಲಿ ಗೋವುಗಳನ್ನು ಇರಿಸಬಲ್ಲ ಬೃಹತ್ ಗೋ ಶಾಲೆಗಳು ಉತ್ತರ ಪ್ರದೇಶದ ಬಾರಾಬಂಕಿ ಹಾಗೂ ಮಹಾರಾಜಗಂಜ್ ಪ್ರಾಂತ್ಯಗಳಲ್ಲಿವೆ. ಈ ಪ್ರದೇಶಗಳಲ್ಲಿ ಸಫಾರಿಗಳನ್ನು ಆರಂಭಿಸಿದರೆ, ಪ್ರವಾಸೋದ್ಯಮಕ್ಕೂ ನೆರವಾಗುತ್ತದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ
Dharmasthala: ಲಕ್ಷದೀಪಗಳ ಜಗಮಗ; ವಿದ್ಯುತ್ ದೀಪಗಳಿಂದ ಶೃಂಗಾರ
Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.