ನನಗೆ ಅರಿವಿಲ್ಲದಂತೆಯೇ ಮನೆಯಲ್ಲಿ ಯಾರೋ ದುಡ್ಡು ಇಟ್ಟಿದ್ದರು!
ಪತ್ತೆಯಾದ ಕೋಟಿಗಟ್ಟಲೆ ನಗದು ಬಗ್ಗೆ ಅರ್ಪಿತಾ ಮುಖರ್ಜಿ ಹೇಳಿಕೆ
Team Udayavani, Aug 3, 2022, 7:10 AM IST
ನವದೆಹಲಿ: “ನಾನು ಇಲ್ಲದಿದ್ದಾಗ, ನನಗೆ ಗೊತ್ತಿಲ್ಲದಂತೆಯೇ ಯಾರೋ ನನ್ನ ಫ್ಲ್ಯಾಟ್‌ನಲ್ಲಿ ಹಣವನ್ನು ತಂದಿಟ್ಟಿದ್ದರು. ಈ ಬಗ್ಗೆ ನನಗೆ ಮಾಹಿತಿಯೇ ಇಲ್ಲ.!’
ಹೀಗೆಂದು ಹೇಳಿರುವುದು ಪಶ್ಚಿಮ ಬಂಗಾಳದಲ್ಲಿ ಇ.ಡಿ.ಯಿಂದ ಬಂಧನಕ್ಕೊಳಗಾದ ಉಚ್ಚಾಟಿತ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ. ಫ್ಲ್ಯಾಟ್‌ನಲ್ಲಿ 21 ಕೋಟಿ ರೂ. ನಗದು ಮತ್ತು ಕೋಟಿಗಟ್ಟಲೆ ಮೌಲ್ಯದ ಚಿನ್ನಾಭರಣ ಸಿಕ್ಕಿದ ಬಳಿಕ ಜು.23ರಂದು ಜಾರಿ ನಿರ್ದೇಶನಾಲಯವು ಪಾರ್ಥ ಹಾಗೂ ಅರ್ಪಿತಾರನ್ನು ಬಂಧಿಸಿತ್ತು. ನಂತರ, ಜು.27ರಂದು ಅರ್ಪಿತಾರ ಮತ್ತೊಂದು ಫ್ಲ್ಯಾಟ್‌ನಿಂದ 27.9 ಕೋಟಿ ರೂ. ನಗದನ್ನು ವಶಪಡಿಸಿಕೊಂಡಿತ್ತು.
ಸದ್ಯ ಇ.ಡಿ. ಕಸ್ಟಡಿಯಲ್ಲಿರುವ ಅರ್ಪಿತಾ, “ಆ ಹಣ ನನಗೆ ಸೇರಿದ್ದಲ್ಲ. ನಾನು ಅಲ್ಲಿ ಇಲ್ಲದಿದ್ದಾಗ ಯಾರೋ ತಂದಿಟ್ಟಿರಬೇಕು’ ಎಂದು ಹೇಳಿದ್ದಾರೆ. ಇದೇ ವೇಳೆ, ಶಿಕ್ಷಕರ ಅಕ್ರಮ ನೇಮಕಕ್ಕೆ ಪಡೆದ ಲಂಚದ ಮಾಹಿತಿಯನ್ನು ಒಳಗೊಂಡ 40 ಪುಟಗಳ ಡೈರಿಯೂ ಇ.ಡಿ.ಗೆ ಸಿಕ್ಕಿದೆ.
ಚಪ್ಪಲಿ ಎಸೆದ ಮಹಿಳೆ:
ಬಂಧಿತ ಪಾರ್ಥ ಚಟರ್ಜಿ ಅವರನ್ನು ಆಸ್ಪತ್ರೆಯಿಂದ ಕರೆದೊಯ್ಯುತ್ತಿದ್ದ ವೇಳೆ ಮಹಿಳೆಯೊಬ್ಬರು ಅವರ ಮೇಲೆ ಚಪ್ಪಲಿ ಎಸೆದ ಘಟನೆ ಮಂಗಳವಾರ ನಡೆದಿದೆ. ಆದರೆ, ಆ ಶೂ ಪಾರ್ಥ ಅವರ ಮೇಲೆ ಬಿದ್ದಿಲ್ಲ. “ಜನರು ಉದ್ಯೋಗವಿಲ್ಲದೇ ಅಲೆಯುತ್ತಿದ್ದರೆ, ಪಾರ್ಥ ಚಟರ್ಜಿ ಕೋಟಿಗಟ್ಟಲೆ ಆಸ್ತಿ ಮಾಡುತ್ತಾರೆ. ಜನರನ್ನು ವಂಚಿಸಿ ಎಸಿ ಕಾರಿನಲ್ಲಿ ಓಡಾಡುತ್ತಾರೆ. ಅದಕ್ಕೇ ಅವರಿಗೆ ಚಪ್ಪಲಿಯೇಟು ನೀಡಲು ಬಂದಿದ್ದೇನೆ, ನಾನು ಬರಿಗಾಲಲ್ಲೇ ಮನೆಗೆ ಹೋಗುವೆ’ ಎಂದು ಆ ಮಹಿಳೆ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
YouTuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.