ಅಕ್ರಮ ಡಿಜಿಟಲ್ ಸಾಲ ವ್ಯವಹಾರ ತಡೆಗೆ ಕಾನೂನು?
Team Udayavani, Nov 19, 2021, 8:10 AM IST
ಹೊಸದಿಲ್ಲಿ: ಅಕ್ರಮ ಡಿಜಿಟಲ್ ಸಾಲ ವ್ಯವಹಾರಗಳನ್ನು ತಡೆಯುವುದಕ್ಕಾಗಿ ಪ್ರತ್ಯೇಕ ಕಾನೂನನ್ನು ರೂಪಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ನ ಕಾರ್ಯಕಾರಿ ಸಮಿತಿಯೊಂದು ಶಿಫಾರಸು ಮಾಡಿದೆ.
ಆನ್‌ಲೈನ್ ವೇದಿಕೆಗಳು, ಮೊಬೈಲ್ ಆ್ಯಪ್‌ಗ್ಳ ಸಹಿತ ವಿವಿಧ ಸ್ವರೂಪಗಳಲ್ಲಿ ನಡೆಯುವ ಸಾಲ ವ್ಯವಹಾರಗಳ ಬಗ್ಗೆ ಪರಿಶೀಲಿಸಿ ವರದಿ ನೀಡಲು ಆರ್‌ಬಿಐ ಜನವರಿಯಲ್ಲಿ ಕಾರ್ಯಕಾರಿ ಸಮಿತಿಯನ್ನು ರಚಿಸಿತ್ತು. ಡಿಜಿಟಲ್ ಸಾಲ ವ್ಯವಹಾರಗಳು ಹೆಚ್ಚುತ್ತಿರುವುದರಿಂದ ಈ ವಿಚಾರದಲ್ಲಿ ಗ್ರಾಹಕರ ರಕ್ಷಣೆ ಮತ್ತು ವ್ಯವಹಾರದ ನೈತಿಕತೆಯ ವಿಚಾರದಲ್ಲಿ ಪ್ರಶ್ನೆಗಳು ಉದ್ಭವಿಸಿರುವ ಹಿನ್ನೆಲೆಯಲ್ಲಿ ಈ ಸಮಿತಿಯನ್ನು ರಚಿಸಲಾಗಿತ್ತು. ಡಿಜಿಟಲ್ ಸಾಲ ವ್ಯವಹಾರಗಳನ್ನು ನಿಯಂತ್ರಿಸುವ ಸಂಬಂಧ ನಿಯಂತ್ರಣಾಧಿಕಾರವೊಂದನ್ನು ರೂಪಿಸುವು ದಕ್ಕೂ ಈ ಸಮಿತಿ ಶಿಫಾರಸು ಮಾಡಿದೆ.
ಈ ಸಂಬಂಧ ಎಲ್ಲ ದತ್ತಾಂಶಗಳನ್ನು ಭಾರತದಲ್ಲಿರುವ ಸರ್ವರ್‌ಗಳಲ್ಲೇ ಶೇಖರಿಸಬೇಕು ಎಂಬು ದಾಗಿಯೂ ಅದು ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.